ನಾಪೋಕ್ಲು, ಜೂ. ೮: ಇಲ್ಲಿಗೆ ಸಮೀಪದ ಮರಂದೋಡ ಗ್ರಾಮದ ಕೇಕುಮಾನಿ ಶ್ರೀ ಭಗವತಿ ಭದ್ರಕಾಳಿ ದೇವರ ಉತ್ಸವ ವಿಜೃಂಭಣೆಯಿAದ ಸಂಪನ್ನಗೊAಡಿತು. ಭದ್ರಕಾಳಿ ಮತ್ತು ಪಡಮಾಳಿ ಉತ್ಸವದಲ್ಲಿ ವಿವಿಧ ಧಾರ್ಮಿಕ ಆಚರಣೆಗಳು ನೆರವೇರಿದವು.
ಕಲಿಯಪಾತ್ರೆಯನ್ನು ಪ್ರತಿ ಕುಟುಂಬ ದಿಂದ ದೇವಾಲಯಕ್ಕೆ ತಂದು ಮಧ್ಯಾಹ್ನ ಎತ್ತು ಪೋರಾಟ ಹಾಗೂ ಬೊಳಕಾಟ್ ನಡೆದ ಬಳಿಕ ಮಹಾ ಪೂಜೆಗಳು ಜರುಗಿದವು. ಅಯ್ಯಪ್ಪ ಮತ್ತು ಶಾಸ್ತಾವು ತೆರೆಗಳು ಜರುಗಿ ಮಧ್ಯಾಹ್ನ ಭದ್ರಕಾಳಿ ಮತ್ತು ಪÀಡಮಾಳಿ ತೆರೆಗಳು ನಡೆಯಿತು. ಭಕ್ತರು ಭಾಗವಹಿಸಿ ಹರಕೆ ಕಾಣಿಕೆ ಒಪ್ಪಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ತಕ್ಕ ಮುಖ್ಯಸ್ಥರಾದ ಮಾರ್ಚಂಡ ರಮೇಶ್ ಅಯ್ಯಪ್ಪ, ಮುಕ್ಕಾಟಿರ ರಮೇಶ್, ಲಾಲು ಚಿಣ್ಣಪ್ಪ, ಚಂಗೊಲು ಚಂಡಿರ ಉತ್ತಪ್ಪ ಮತ್ತು ೧೩ ಕುಟುಂಬಸ್ಥರು, ಗ್ರಾಮ ಪಂಚಾಯಿತಿ ಸದಸ್ಯ ಚೋಯಮಾಡಂಡ ಹರೀಶ್ ಸೇರಿದಂತೆ ಭಕ್ತರ ಸಮ್ಮುಖದಲ್ಲಿ ದೇವರ ಉತ್ಸವ ಸಂಪನ್ನಗೊAಡಿತು.