ಪಾಲಿಬೆಟ್ಟ, ಜೂ. ೮: ಪಾಲಿಬೆಟ್ಟ ಸಮೀಪದ ಚನ್ನಂಗಿ ಕೋಟೆ ಮಚ್ಚಿ ಗ್ರಾಮದಲ್ಲಿ ಹಾಡಹಗಲೇ ಮನೆ ಸಮೀಪ ಬಂದ ಕಾಡೆಮ್ಮೆಯೊಂದು ಮಹಿಳೆಗೆ ತಿವಿದು ಗಂಭೀರ ಗಾಯಗೊಳಿಸಿರುವ ಘಟನೆ ನಡೆದಿದೆ. ಕಾಡೆಮ್ಮೆ ದಾಳಿಯಿಂದ ಗಾಯಗೊಂಡ ಮಹಿಳೆ ಶುಭಲಕ್ಷಿö್ಮ (೨೫) ಪಾಲಿಬೆಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಕಾಡಾನೆ ಹುಲಿ ಚಿರತೆ ಹಾವಳಿಯಿಂದ ಕಂಗೆಟ್ಟಿರುವ ಕಾಡಂಚಿನ ನಿವಾಸಿಗಳು ಇದೀಗ ಕಾಡೆಮ್ಮೆ ದಾಳಿಯಿಂದ ಮತ್ತಷ್ಟು ಆತಂಕಕ್ಕೆ ಒಳಗಾಗುವಂತಾಗಿದೆ. ಕೂಡಲೇ ಕಾಡುಪ್ರಾಣಿಗಳ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

-ಪುತ್ತಂ ಪ್ರದೀಪ್