ಶನಿವಾರಸಂತೆ, ಜೂ. ೮: ಅಪಘಾತದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ದಿನಾಂಕ ೩೦.೦೯.೨೦೨೧ ರಂದು ಇಲ್ಲಿನ ಗುಂಡೂರಾವ್ ಬಡಾವಣೆಯ ಬಿ.ಸಿ. ರವಿ ಎಂಬಾತ ಚಾಲಿಸುತ್ತಿದ್ದ ಆಟೋ ಡಿಕ್ಕಿಯಾಗಿ ಚಿನ್ನಳ್ಳಿ ಸಮೀಪದ ಮರಿಶೆಟ್ಟಿ (೭೮) ಎಂಬವರು ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದರು. ಈ ಸಂಬAಧ ಆರೋಪಿ ರವಿ ವಿರುದ್ಧ ಶನಿವಾರಸಂತೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸೋಮವಾರಪೇಟೆ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಕೆ. ಗೋಕುಲ್ ಅವರು ಆರೋಪಿಗೆ ೧ ವರ್ಷ ಸಾದಾ ಸಜೆ, ರೂ.೫ ಸಾವಿರ ದಂಡ, ೩ ತಿಂಗಳ ಸಾದಾ ಸಜೆ ಹಾಗೂ ರೂ.೧ ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರಕಾರದ ಪರ ಸಹಾಯಕ ಸರ್ಕಾರಿ ಅಭಿಯೋಜಕರಾದ ಹೇಮಂತ್ ಪೊನ್ನಪ್ಪ ವಾದಿಸಿದರು.