ವೀರಾಜಪೇಟೆ, ಜೂ. ೯ : ಅತಿ ದೊಡ್ಡ ಗೌರವ ಅಂದರೇ ಅದು ಈ ನಾಡಿನ ಹಿರಿಯರ ಆಶೀರ್ವಾದ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ವೀರಾಜಪೇಟೆ ತಾಲೂಕು ಹಿರಿಯ ನಾಗರಿಕರ ವೇದಿಕೆ ಮತ್ತು ತೂಕ್ ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ ವತಿಯಿಂದ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಕೊಡಗಿನ ಶಾಸಕರನ್ನು ಆಶೀರ್ವದಿಸುವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ, ನನ್ನನ್ನು ಜನರ ಸೇವೆ ಮಾಡಲು ಹಿರಿಯರು ನನಗೆ ಹರಸಿದ್ದಾರೆ. ಇದು ನನಗೆ ದೊಡ್ಡ ಜವಾಬ್ದಾರಿಯಾಗಿದೆ. ಜನರ ಮೇಲೆ ಇಟ್ಟ ಭರವಸೆಗಳಿರಬಹುದು, ಕ್ಷೇತ್ರಕ್ಕೆ ಸಂಬAಧಪಟ್ಟ ಪ್ರತ್ಯೇಕ ಪ್ರಣಾಳಿಕೆ ಇರಬಹುದು, ಅವುಗಳನ್ನೆಲ್ಲಾ ಈಡೇರಿಸುವ ನಿಟ್ಟಿನಲ್ಲಿ ದಿನದ ೨೦ ಗಂಟೆಗಳು ಕೆಲಸ ಮಾಡುತ್ತಿದ್ದೇನೆ. ಶಾಸಕನಾದ ಬಳಿಕವೂ ಅದನ್ನೇ ಮುಂದುವರೆಸುತ್ತಿದ್ದೇನೆ ಎಂದರು. ಈ ವ್ಯವಸ್ಥೆಯಲ್ಲಿ ಕೆಲಸ ಮಾಡಬೇಕಾದರೆ ದೊಡ್ಡ ಸವಾಲು ಎದುರಿಸಬೇಕಾಗುತ್ತದೆ. ಅಧಿಕಾರಿಗಳ ನಿರ್ಲಕ್ಷö್ಯತನ, ಬೇಜವಾಬ್ದಾರಿ, ಭ್ರಷ್ಟಾಚಾರ ಜನಪರ ಕೆಲಸ ಮಾಡುವ ಕಾಳಜಿ, ಶಿಷ್ಟಚಾರ ಇರಬೇಕು. ಎಲ್ಲರೂ ಸಾಮಾಜಿಕ ಬದ್ಧತೆಯಿಂದ ಕೆಲಸ ನಿರ್ವಹಿಸಿದ್ದೇ ಆದಲ್ಲಿ ಭಾರತ ದೇಶ ವಿಶ್ವದಲ್ಲೇ ಮುಂದುವರೆದ ದೇಶವಾಗಲಿದೆ ಎಂದರಲ್ಲದೆ ತನ್ನ ಕ್ಷೇತ್ರದಲ್ಲಿ ಯಾರಿಗೂ ಕೊರತೆ ಬಾರದಂತೆ ಪ್ರಾಮಾಣಿಕವಾಗಿ, ಬದ್ಧತೆಯಿಂದ ಭ್ರಷ್ಟಚಾರ ರಹಿತವಾಗಿ ಕೆಲಸ ಮಾಡಿ ೫ ವರ್ಷ ಒಳ್ಳೆಯ ಆಡಳಿತ ನೀಡಲಿದ್ದೇನೆ. ಸಾಮೂಹಿಕವಾಗಿ ಕೈಜೋಡಿಸಿ ಕರ್ನಾಟಕದಲ್ಲಿಯೇ ವೀರಾಜಪೇಟೆ ಕ್ಷೇತ್ರವನ್ನು ಒಳ್ಳೆಯ ಕ್ಷೇತ್ರವನ್ನಾಗಿ ಮಾಡಲು ಸಹಕರಿಸಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಕ್ತಿ ದಿನಪತ್ರಿಕೆ ಸಂಪಾದಕರಾದ ಜಿ.ಚಿದ್ವಿಲಾಸ್ ಮಾತನಾಡಿ ನೂತನ ಶಾಸಕ ಎ.ಎಸ್ ಪೊನ್ಣಣ್ಣ ಅವರ ಸಾಮಾಜಿಕ ಚಿಂತನೆ ಹಾಗೂ ಕಳಕಳಿ, ಬದ್ಧತೆ ಮೆಚ್ಚುವಂತದ್ದು. ಅವರಿಗೆ ವಕೀಲರಾಗಿ ವ್ಯವಸ್ಥೆಯ ಆಳ, ಅಗಲ, ಸಾಮಾಜದ ದುರ್ಬಲತೆ, ಆಡಳಿತ ವ್ಯವಸ್ಥೆ ನಿರ್ಲಕ್ಷö್ಯತನದ ಬಗ್ಗೆ ಅರಿವು ಜಾಸ್ತಿ ಇದೆ ಎಂದರು. ಮತದಾರರು ಶಾಸಕರನ್ನು ಕೊಡಗಿನ ಅಭಿವೃದ್ಧಿಗೆ ಬಳಸಿಕೊಳ್ಳಬೇಕೆ ವಿನಃ ಅವರ ಮುಂದೆ ಭ್ರಷ್ಟ ವ್ಯವಸ್ಥೆಯನ್ನು ತರಬಾರದು. ಅದಕ್ಕೆ ಪೂರಕ ವಾತಾವರಣ ಕಲ್ಪಿಸಬಾರದು. ಮುಂದಿನ ೫ ವರ್ಷ ಸುಭದ್ರವಾಗಿ, ಸಮಗ್ರವಾಗಿ ಕೊಡಗಿನ ಅಭಿವೃದ್ಧಿ ಕೆಲಸಗಳಾಗಲಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಮಹಿಳಾ ಸಮಾಜದ ಅಧ್ಯಕ್ಷೆ ಪಟ್ರಪಂಡ ಗೀತಾ ಮಾತನಾಡಿ ನೂತನ ಶಾಸಕರು ತಮ್ಮ ಅವಧಿಯಲ್ಲಿ ಸಮಾಜದ ಡೈನಿಂಗ್ ಹಾಲ್ ಹಾಗೂ ಮಹಿಳೆಯರಿಗೆ ಬೇಕಾಗುವ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಿಕೊಡುವಂತೆ ವಿನಂತಿಸಿಕೊAಡು ಮನವಿ ಸಲ್ಲಿಸಿದರು.
ಸಿದ್ದಾಪುರದ ಕೆ.ಯು. ಅಬ್ದುಲ್ ಮಜೀದ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಹಂತಹAತವಾಗಿ ನಮ್ಮ ಕೊಡಗಿನಲ್ಲಿರುವ ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕು, ಇದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಪ್ರಾಸ್ತಾವಿಕವಾಗಿ ಮಾತನಾಡಿ, ಕೊಡಗಿನ ಜನತೆಗೆ ವಿವಿಧ ಇಲಾಖೆಗಳಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವಂತೆ ಶಾಸಕರು ಗಮನಹರಿಸುವಂತೆ ಮನವಿ ಮಾಡಿದರು. ಸ್ಥಳೀಯ ಆಡಳಿತದಲ್ಲಿ ತಾಲೂಕು ಕಚೇರಿ, ಆಸ್ಪತ್ರೆ, ಸೇರಿದಂತೆ ಹಲವಾರು ಕಡೆಗಳಲ್ಲಿ ಉಂಟಾಗಿರುವ ಭ್ರಷ್ಟಾಚಾರ, ನಿರ್ಲಕ್ಷö್ಯತನ, ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡುವಂತೆ ಹೇಳಿದರು.
ಹಿರಿಯ ನಾಗರಿಕರ ವೇದಿಕೆಯ ಸ್ಥಾಪಕ ಅಧ್ಯಕ್ಷರು, ಹಿರಿಯರು ಆದ ನಾಯಡ ವಾಸು ನಂಜಪ್ಪ ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿ ಗಣ್ಯರು ನೂತನ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ವೇದಿಕೆ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ವಿಶೇಷ ಅತಿಥಿಗಳಾಗಿ ಹಿರಿಯ ನಾಗರಿಕರ ವೇದಿಕೆ ಸ್ಥಾಪಕ ಅಧ್ಯಕ್ಷ ನಾಯಡ ವಾಸು ನಂಜಪ್ಪ, ಹಿರಿಯರಾದ ಖಾದರ್ ಪಾಷಾ, ಮಾಜಿ ಸೈನಿಕ ಪುಲಿಯಂಡ ಪೊನ್ನಪ್ಪ, ಕೂತಂಡ ನಾಣಯ್ಯ, ಕಾಟಿಮಾಡ ಡಿಕ್ಕಿ ಅಣ್ಣಯ್ಯ, ಸೇರಿದಂತೆ ಹಿರಿಯರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಅಪ್ಪಚ್ಚಕವಿ ವೃತ್ತದಲ್ಲಿನ ಅಪ್ಪಚ್ಚಕವಿ ಪ್ರತಿಮೆಗೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯು ಮಹಿಳಾ ಸಮಾಜದವರೆಗೂ ಸಾಗಿ ಬಂತು. ಮೆರವಣಿಗೆಯಲ್ಲಿ ಹಿರಿಯ ನಾಗರಿಕ ವೇದಿಕೆ ಪದಾಧಿಕಾರಿಗಳು, ಸದಸ್ಯರು, ಪ್ರಗತಿ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ವೇದಿಕೆಯ ನಿರ್ದೆಶಕ ನೆಲ್ಲಚಂಡ ಭೀಮಯ್ಯ ಶಾಸಕರ ಪರಿಚಯ ಮಾಡಿದರೆ, ಸದಸ್ಯೆ ಪ್ರೇಮಾ ಪ್ರಾರ್ಥಿಸಿ, ಕಾರ್ಯದರ್ಶಿ ಪಾರುವಂಗಡ ಸನ್ನಿ ಮೊಣ್ಣಪ್ಪ ಸ್ವಾಗತಿಸಿ, ಮುಲ್ಲೇಂಗಡ ಮಧೋಶ್ ಪೂವಯ್ಯ ನಿರೂಪಿಸಿ ವಂದಿಸಿದರು.