ಕುಶಾಲನಗರ, ಜೂ. ೯: ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಸೆಸ್ಕ್ ಕುಶಾಲನಗರದ ಸಹಾಯಕ ಕಾರ್ಯಪಾಲಕ ಅಭಿಯಂತರ ಪಿ ಅಶೋಕ್ ಕುಮಾರ್ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ನಡೆದಿದೆ.

ಬೆಂಗಳೂರಿನ ವಿದ್ಯುತ್ ಗುತ್ತಿಗೆದಾರ ಸಂಸ್ಥೆಯ ಮಾಲೀಕ ಬಿ.ಎಂ. ಪ್ರತಾಪ್ ಎಂಬವರಿAದ ಮೈಸೂರು ಬಳಿ ಇಂಜಿನಿಯರ್ ಅಶೋಕ್ ರೂ. ೨ ಲಕ್ಷ ಸ್ವೀಕರಿ ಸುತ್ತಿದ್ದ ಸಂದರ್ಭ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಪ್ರತಾಪ್ ಎಂಬವರು ಕುಶಾಲನಗರದಲ್ಲಿ ಎಲೆಕ್ಟಿçಕ್ ಚಾರ್ಜಿಂಗ್ ಸ್ಟೇಷನ್ ಆರಂಭಿಸಲು ಕುಶಾಲನಗರ ಚೆಸ್ಕಾಂ ಕಚೇರಿಗೆ ಅರ್ಜಿ ಸಲ್ಲಿಸಿದ ಸಂದರ್ಭ ಅಧಿಕಾರಿ ಅಶೋಕ್ ಕುಮಾರ್ ರೂ. ಐದು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಮುಂಗಡವಾಗಿ ರೂ. ೨ ಲಕ್ಷ ಸ್ವೀಕರಿಸುತ್ತಿದ್ದ ಸಂದರ್ಭ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ಮಾಡಿ ಅಶೋಕ್ ಅವರನ್ನು ವಶಕ್ಕೆ ತೆಗೆದುಕೊಂಡು ಕ್ರಮ ಕೈಗೊಂಡಿದ್ದಾರೆ.

ಇಂಜಿನಿಯರ್ ಅಶೋಕ್ ಗುರುವಾರ ಕುಶಾಲನಗರ ಕಚೇರಿಯಲ್ಲಿ ಕೆಲಸ ನಿರ್ವಹಿಸಿ ಎಂದಿನAತೆ ಮೈಸೂರು ಮನೆಗೆ ತೆರಳಿದ್ದು ದಾರಿ ನಡುವೆ ಮೈಸೂರಿನಲ್ಲಿ ರಾತ್ರಿ ಒಂಭತ್ತು ಗಂಟೆ ವೇಳೆಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ. ಪ್ರತಾಪ್ ಅವರಿಂದ ಇಂಜಿನಿಯರ್ ಅಶೋಕ್ ಐನೂರು ರೂಗಳ ನಾಲ್ಕು ಬಂಡಲ್ಗಳನ್ನು ಸ್ವೀಕರಿಸುತ್ತಿದ್ದ ಸಂದರ್ಭ ದಾಳಿ ನಡೆದಿದ್ದು ಹಣವನ್ನು ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿ ಕೊಂಡಿದ್ದಾರೆ.

ಲೋಕಾಯುಕ್ತ ಪೊಲೀಸ್ ಮಹಾ ನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್, ಮಹಾ ನಿರೀಕ್ಷಕರಾದ ಸುಬ್ರಮಣ್ಯೇಶ್ವರರ ರಾವ್, ಪೊಲೀಸ್ ಅಧಿಕ್ಷಕ ಸುರೇಶ್ ಬಾಬು, ಉಪ ಅಧೀಕ್ಷಕರಾದ ಪವನ್ ಕುಮಾರ್ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಸಿಬ್ಬಂದಿಗಳಾದ ಲೋಕೇಶ್, ಮಂಜುನಾಥ್, ಪೃಥ್ವಿಶ್, ಸಲಾವುದ್ದೀನ್, ಲೋಹಿತ್, ಪ್ರದೀಪ್ ಕುಮಾರ್, ಶಶಿಕುಮಾರ್, ಅರುಣ್ ಕುಮಾರ್ ಕಾರ್ಯಾಚರಣೆ ತಂಡದಲ್ಲಿ ಪಾಲ್ಗೊಂಡಿದ್ದರು.