ವೀರಾಜಪೇಟೆ, ಜೂ. ೯: ಬೇಟೋಳಿ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮಾಭಿವೃದ್ಧಿ ಯೋಜನೆ ಅನುದಾನದಿಂದ ಬೇಟೋಳಿ ಒಂದನೇ ವಾರ್ಡಿನ ರಾಮನಗರ - ಪಾಕೋಡು ರಸ್ತೆಯ ಅಗಲೀಕರಣ ಕಾರ್ಯವು ನಡೆಯಿತು. ಸ್ಥಳೀಯ ತೋಟದ ಮಾಲೀಕರ ಸಹಕಾರದಿಂದ ಸಂಚಾರಕ್ಕೆ ಇಕ್ಕಟ್ಟಾಗಿದ್ದ ರಸ್ತೆಯನ್ನು ಅಗಲೀಕರಣ ಮಾಡಲಾಯಿತು. ರಾಮನಗರದಿಂದ ಕಂಬAಡ ಐನ್‌ಮನೆಯ ತನಕ ರಸ್ತೆಯನ್ನು ಅಗಲೀಕರಣಗೊಳಿಸಿ ಸಂಚಾರಕ್ಕೆ ಸೂಕ್ತ ಸ್ಥಳಾವಕಾಶವನ್ನು ಮಾಡಲಾಯಿತು. ಈ ಸಂದರ್ಭ ಬೇಟೋಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಣಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧ, ಸದಸ್ಯರಾದ ಅಮ್ಮಣಕುಟ್ಟಂಡ ಕಟ್ಟಿ, ರಜಾಕ್ ಹಾಗೂ ಗುತ್ತಿಗೆದಾರರಾದ ಪಟ್ಟಡ ಮನು ರಾಮಚಂದ್ರ, ಗ್ರಾಮಸ್ಥರಾದ ಬಿ.ಕೆ. ವಿಶ್ವನಾಥ್, ತೋಟದ ಮಾಲೀಕರುಗಳು ಸ್ಥಳೀಯರು ಉಪಸ್ಥಿತರಿದ್ದರು.