ಕೂಡಿಗೆ, ಜೂ. ೯: ಇಲ್ಲಿಗೆ ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ಮಾಸಿಕ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಜಿ. ಪುಷ್ಪಾ ರವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಕೈಗೊಂಡಿರುವ ಸ್ವಚ್ಛತೆ ಪೂರಕ ಕೆಲಸ, ಮುಂದಿನ ದಿನಗಳಲ್ಲಿ ಮಳೆಗಾಲ ಆರಂಭವಾಗುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ. ಟ್ಯಾಂಕ್ಗಳ ಶುದ್ಧೀಕರಣಗೊಳಿಸುವ ಮತ್ತು ಶುಚಿತ್ವಕ್ಕೆ ಹೆಚ್ಚಿನ ಅದ್ಯತೆ ನೀಡುವ ಬಗ್ಗೆ ಚರ್ಚೆಗಳು ನಡೆದವು.
ಈಗಾಗಲೇ ಆರಂಭಗೊAಡಿರುವ ಜಲ ಜೀವನ್ ಕುಡಿಯುವ ನೀರಿನ ಯೋಜನೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಸಭೆಯಲ್ಲಿ ಹಾಜರಿದ್ದ ಸದಸ್ಯರು ಒತ್ತಾಯ ಮಾಡಿದರು. ಅಲ್ಲದೆ ೧೫ ಹಣಕಾಸು ಯೋಜನೆಯ ಅನುಗುಣವಾಗಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ, ಈಗಾಗಲೇ ಕೈಗೊಂಡಿರುವ ಕ್ರಿಯಾ ಯೋಜನೆಯ ಅನುಮೋದನೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಬಗ್ಗೆ ವಿಷಯಗಳ ಪ್ರಸ್ತಾವನೆ ನಡೆಸಿ, ಗ್ರಾಮದ ಅಭಿವೃದ್ಧಿಗೆ ಸಂಬAಧಿಸಿದAತೆ ವಿವಿಧ ಯೋಜನೆಗಳ ತಯಾರಿಸುವ ಚರ್ಚೆಗಳು ನಡೆದವು.
ಅಭಿವೃದ್ಧಿ ಅಧಿಕಾರಿ ಎಂ.ಕೆ. ಅಯಿಷಾ ಅವರು ಸರಕಾರ ಹೊಸ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ನಂತರ ರಾಷ್ಟಿçÃಯ ಉದ್ಯೋಗ ಖಾತರಿ ಯೋಜನೆಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ನೀಡಿ ಗ್ರಾಮ ಪಂಚಾಯಿತಿ ವತಿಯಿಂದ ಕೈಗೊಳ್ಳಲಾಗುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸಂಪೂರ್ಣವಾದ ಮಾಹಿತಿಯನ್ನು ನೀಡಿದರು. ಸಭೆಗೆ ಬಂದ ಸಾರ್ವಜನಿಕರ ಅರ್ಜಿಗಳ ಬಗ್ಗೆ ಚರ್ಚೆಗಳು ನಡೆದವು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಿ.ಆರ್. ಪ್ರವೀಣ್, ಸದಸ್ಯರಾದ ಎ.ಜಿ. ಅಜಿತ್ ಕುಮಾರ್, ಸಿ.ಸಿ. ವಿನಯ್, ಹೆಚ್.ಆರ್. ಪ್ರಕಾಶ್, ಎಂ.ಡಿ. ಜಲಜಾಕ್ಷಿ, ಎನ್.ಜಿ. ರಾಮ್ ದೇವ್, ಸುನಿತ, ಹೆಚ್.ಕೆ. ವಿನೋದ ಕುಮಾರ್, ಸುಮಿ, ಟಿ.ಪಿ. ಅಶ್ವಿನಿ ಸೇರಿದಂತೆ ಅಭಿವೃದ್ಧಿ ಅಧಿಕಾರಿ ಎಂ.ಕೆ. ಅಯಿಷಾ ಹಾಜರಿದ್ದರು.