ನಾಪೋಕ್ಲು, ಜೂ. ೯: ಸಮೀಪದ ಹೊದವಾಡ ಬೊಳಿಬಾಣೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಪೋಕ್ಲಿನ ಪೆಟ್ರೋಲ್ ಬಂಕ್ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಮಡಿಕೇರಿ ಐಟಿಐ ವಿದ್ಯಾರ್ಥಿಯೊಬ್ಬ ಮಾರಣಾಂತಿಕ ಗಾಯಗೊಂಡಿದ್ದಾನೆ.

ನಾಪೋಕ್ಲಿನ ಇಂದಿರಾ ನಗರ ನಿವಾಸಿ ದಿ. ರಾಜು ಮತ್ತು ಕಮಲ ದಂಪತಿಯ ಪುತ್ರ, ಅಪ್ಪಾಜಿ (೧೯) ಮೃತ ದುರ್ದೈವಿ. ಈತ ನಾಪೋಕ್ಲಿನ vಇಂಡಿಯನ್ ಆಯಿಲ್ ಕಾರ್ಪೋರೇಷನ್ ಪೆಟ್ರೋಲ್ ಬಂಕ್ ಸಿಬ್ಬಂದಿಯಾಗಿದ್ದು, ಶುಕ್ರವಾರ ಬೆಳಿಗ್ಗೆ ಕೂಡ ಬಂಕ್‌ನಲ್ಲಿ ಕೆಲಸ ಮಾಡಿದ್ದ. ಬಳಿಕ ಅಪ್ಪಾಜಿ ಸ್ಕೂಟಿಯಲ್ಲಿ ಮಡಿಕೇರಿಯ ಐಟಿಐ ವಿದ್ಯಾರ್ಥಿ ಸಂದೀಪ್ (೧೯) ಎಂಬಾತನನ್ನು ಕೂರಿಸಿಕೊಂಡು

(ಮೊದಲ ಪುಟದಿಂದ) ನಾಪೋಕ್ಲಿ ನಿಂದ ಮೂರ್ನಾಡು ಕಡೆ ತೆರಳುತ್ತಿದ್ದ. ಇದೇ ವೇಳೆ ಮೂರ್ನಾಡಿ ನಿಂದ ಮಂಗಳೂರು ಕಡೆ ಹೊರಟಿದ್ದ ಕೊಂಡAಗೇರಿಯ ಮಹಮದ್ ಮಿದಿಲಾಸ್ ಎಂಬವರು ಚಲಾಯಿಸುತ್ತಿದ್ದ ಆಲ್ಟೋ ಕಾರು (ಕೆ.ಎ.೪೧. ಪಿ.೨೪೮೩) ಮತ್ತು ನೋಂದಾವಣೆಯಾಗದ ಹೊಸ ಸ್ಕೂಟಿ ಮುಖಾಮುಖಿ ಡಿಕ್ಕಿಯಾಗಿವೆ. ಹೊದವಾಡ ಗ್ರಾಮದ ಬೊಳಿಬಾಣೆ ಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಅಪ್ಪಾಜಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಹಿಂಬದಿ ಸವಾರ ಕೋಕೇರಿ ಗ್ರಾಮದ ಸತೀಶ್. ಯಚ್. ಕೆ ಅವರ ಪುತ್ರ ವಿದ್ಯಾರ್ಥಿ ಸಂದೀಪ್ ಗಂಭಿರ ಗಾಯ ಗೊಂಡಿದ್ದಾನೆ. ಗಾಯಾಳು ವನ್ನು ನಾಪೋಕ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆಯ ನಂತರ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ ಬಳಿಕ, ಸುಳ್ಯಕ್ಕೆ ಸ್ಥಳಾಂತರಿಸಲಾಗಿದೆ. ಕಾರು ಚಾಲಕ, ಕೊಂಡಗೇರಿಯ ಮಹಮದ್ ಮಿದಿಲಾಸ್ ಇನ್ನಿತರರು ಅಪಾಯದಿಂದ ಪಾರಾಗಿದ್ದಾರೆ. ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಮತ್ತು ಸಿಬ್ಬಂದಿಗಳು ಪ್ರಕರಣ ದಾಖಲಿಸಿಕೊಂಡು ಕಾನೂನಿನ ಕ್ರಮ ಕೈಗೊಂಡಿದ್ದಾರೆ