ಮಡಿಕೇರಿ, ಜೂ. ೮ : ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಮೇಲೆತ್ತರಕ್ಕೆ ಕಾಣಿಸುವದು ಮಂಜಿನ ನಗರಿಯ ರಾಜಾಸೀಟ್ ಒಂದಾದರೆ ನಂತರದಲ್ಲಿರುವದು ಅಬ್ಬಿ ಜಲಪಾತ ಹಾಗೂ ಮಾಂದಲಪಟ್ಟಿ., ರಾಜಾಸೀಟ್ ಹಾಗೂ ಅಬ್ಬಿ ಜಲಪಾತಕ್ಕೆ ಪ್ರವಾಸಿಗರು ತಮ್ಮ ವಾಹನಗಳಲ್ಲಿ ತೆರಳುವಂತಿದ್ದರೆ ಇತ್ತ ಮಾಂದಲಪಟ್ಟಿಗೆ ಮಾತ್ರ ಬಾಡಿಗೆ ಜೀಪುಗಳ ಮೂಲಕ ತೆರಳಬೇಕಾದ ಅನಿವಾರ್ಯತೆ ಇದೆ. ಆದರೆ, ಇದುವರೆಗೆ ಓಡಾಡುತ್ತಿದ್ದ ಬಾಡಿಗೆ ಜೀಪ್‌ಗಳು ಇದೀಗ ತಮ್ಮ ಓಡಾಟವನ್ನು ನಿಲ್ಲಿಸಿವೆ. ಕಾನೂನಿನ ಚೌಕಟ್ಟಿನಡಿ ಜಿಲ್ಲಾಡಳಿತ ಈ ಅನಧಿಕೃತ ಜೀಪ್‌ಗಳ ಓಡಾಟಕ್ಕೆ ಬ್ರೇಕ್ ಹಾಕಿದೆ..!

ಒಂದೊಮ್ಮೆ ಸುತ್ತಮುತ್ತಲ ಗ್ರಾಮಗಳ ಜನರ ಗ್ರಾಮೀಣ ಕ್ರೀಡಾಕೂಟದ ಮೈದಾನವಾಗಿದ್ದ., ಕೋಲಾಟ, ಬೊಳಕಾಟ್ ಮುಂತಾದ ಸಾಂಪ್ರದಾಯಿಕ ಚಟುವಟಿಕೆಗಳ ಕೇಂದ್ರವಾಗಿದ್ದ ‘ಮಂದ್‌ಲ್ ಪಟ್ಟಿ’ ಇದೀಗ ಮಾಂದಲ್ ಪಟ್ಟಿಯಾಗಿದೆ. ಗಾಳಿಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಗೊಳಪಡುವ., ಬೆಟ್ಟದ ತುದಿಯಲ್ಲಿ ನಿಸರ್ಗ ರಮಣೀಯ ಪ್ರದೇಶವಾಗಿರುವ ಈ ಪವಿತ್ರ ಸ್ಥಳದಲ್ಲಿ ಸಿನಿಮಾವೊಂದು ಚಿತ್ರೀಕರಣಗೊಂಡ ನಂತರದಲ್ಲಿ ‘ಮುಗಿಲ್ ಪೇಟೆ’ಯಾಗಿ ವಿಶ್ವದಾದ್ಯಂತ ಗಮನಸೆಳೆದ ಬಳಿಕ ಇದೊಂದು ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿತು. ಆದರೆ., ಮೀಸಲು ಅರಣ್ಯ ವ್ಯಾಪ್ತಿಯೊಳಗೆ ಈ ಪ್ರದೇಶವಿರುವದರಿಂದ ಅರಣ್ಯ ಇಲಾಖೆಯ ತಕರಾರು ಈ ಹಿಂದಿನಿAದಲೇ ಇದ್ದಿತು. ಆದರೆ., ಜಿಲ್ಲೆ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವದರಿAದ., ಪ್ರವಾಸಿಗರ ಆಗಮನದ ಮೂಲಕ ಒಂದಷ್ಟು ಸ್ಥಳೀಯರ ಬದುಕು ಕೂಡ ಹಸನಾಗಬಹುದೆಂಬ ದೂರಾಲೋಚನೆಯಿಂದ ಜನಪ್ರತಿನಿಧಿಗಳ ಮೌಕಿಕ ಸೂಚನೆ ಹಾಗೂ ಸಹಕಾರದೊಂದಿಗೆ ಈ ಪ್ರದೇಶ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು. ಆದರೆ., ಅಲ್ಲಿಗೆ ತೆರಳಲು ರಸ್ತೆ ವ್ಯವಸ್ಥೆ ಸರಿ ಇಲ್ಲದ ಕಾರಣ ಮಾಂದಲಪಟ್ಟಿ ಪ್ರವೇಶ ದ್ವಾರದಿಂದ ಒಳಗಡೆ ಹೋಗಲು ಜೀಪ್‌ಗಳಿಗೆ ಅವಕಾಶÀ ನೀಡಲಾಯಿತು. ಬರಬರುತ್ತಾ ಈ ಜೀಪ್‌ಗಳ ಮಾರ್ಗ ಬದಲಾಗಿ ಮಡಿಕೇರಿ ನಗರದಿಂದಲೇ (ಎವಿ ಶಾಲೆ ಬಳಿಯಿಂದ) ಪ್ರವಾಸಿಗರನ್ನು ಕರೆದೊಯ್ಯಲು ಆರಂಭಿಸಿದವು. ಇದಕ್ಕೆ ಆಕ್ಷೇಪ ಬಂದ ಬಳಿಕ ದೇವಸ್ತೂರು-ಅಬ್ಬಿಫಾಲ್ಸ್ ಜಂಕ್ಷನ್‌ನಿAದ ಜೀಪ್‌ಗಳು ಹೊರಡಲು ಆರಂಭಿಸಿದವು. ಮಡಿಕೇರಿ ಜೀಪ್ ನಿಲ್ದಾಣದಿಂದಲೂ ಕೆಲವು ಜೀಪ್‌ಗಳು ಹೊರಟವು. ನಾಲ್ಕೆöÊದು ಸಂಖ್ಯೆಯಲ್ಲಿದ್ದ ಜೀಪ್‌ಗಳ ಸಂಖ್ಯೆ ಹೆಚ್ಚುತ್ತಾ ನೂರರ ಗಡಿ ದಾಟಿತು. ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದವರು ಅನೇಕರು ಇದರಲ್ಲೇ ಉದ್ಯೋಗ ಕಂಡುಕೊAಡರು. ಆದರೀಗ ಪೈಪೋಟಿ., ಅಸ್ವಾಭಾವಿಕ ವರ್ತನೆ., ಅನವಶ್ಯಕ ಜಗಳದಿಂದಾಗಿ ಎಲ್ಲ ಜೀಪ್‌ಗಳ ಓಡಾಟ ನಿಂತು ಹೋಗಿದೆ..!

ಪ್ರತಿನಿಧಿ ಮೇಲೆ ಹಲ್ಲೆ ಯತ್ನ

ಜೀಪ್‌ಗಳ ಒಡಾಟದ ನಡುವೆ ಕಳೆದ ತಿಂಗಳಿನಲ್ಲಿ ವಿಧಾನಸಭಾ ಕ್ಷೇತ್ರದ ಚುನಾವಣೆ ಕೂಡ ಎದುರಾಯಿತು. ಚುನಾವಣಾ ದಿನದಂದು ವಯಸ್ಸಾದವರು, ಅಶಕ್ತರನ್ನು ಮತದಾನ ಕೇಂದ್ರಕ್ಕೆ ಕರೆತರಲು ಸಹಾಯ ಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಯ ನೆಲೆಯಲ್ಲಿ ಕೆ.ನಿಡುಗಣೆ ಗ್ರಾಮ ಪಂಚಾಯ್ತಿ ಸದಸ್ಯರಾಗಿರುವ ಕೊಕ್ಕಲೇರ ಅಯ್ಯಪ್ಪ ಜೀಪೊಂದನ್ನು ಒದಗಿಸಿ ಚಾಲಕನೋರ್ವನನ್ನು ನೇಮಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವು ಜೀಪು ಚಾಲಕರು ಅಯ್ಯಪ್ಪ ಅವರೊಂದಿಗೆ ಜಗಳವಾಡಿದ್ದಾರೆ. ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ ಅಯ್ಯಪ್ಪ, ಚುನಾವಣಾ ಸಂದರ್ಭದಲ್ಲಿ ಗಲಾಟೆ ಮಾಡಿದರೆ ದೂರು ನೀಡಿದಲ್ಲಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

(ಮೊದಲ ಪುಟದಿಂದ) ಇದನ್ನೇ ದ್ವೇಷದ ಅಸ್ತçವನ್ನಾಗಿಸಿಕೊಂಡ ಕೆಲ ಚಾಲಕರು ಚುನಾವಣೆ ಕಳೆದ ಬಳಿಕವೂ ಜಗಳ ಮಾಡಿದ್ದಾರೆ. ಅಲ್ಲದೆ ನಿಯೋಜಿಸಲಾಗಿದ್ದ ಚಾಲಕನ ಮೇಲೂ ಹಲ್ಲೆ ಮಾಡಿದ್ದಾರೆ. ಇದರಿಂದ ಬೇಸರಗೊಂಡ ಅಯ್ಯಪ್ಪ ವಕೀಲರ ಮೂಲಕ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳಿಗೆ ಕಾನೂನಾತ್ಮಕ ನೋಟೀಸ್ ಜಾರಿ ಮಾಡಿ ಮಾಂದಲ್ಪಟ್ಟಿಗೆ ಅನಧಿಕೃತವಾಗಿ ಸಂಚರಿಸುತ್ತಿರುವ ಜೀಪ್‌ಗಳ ಮೇಲೆ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಕ್ರಮ ಕೈಗೊಳ್ಳದಿದ್ದಲ್ಲಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವದಾಗಿ ನಮೂದಿಸಿದ್ದಾರೆ.

ಪ್ರವಾಸಿ ಮೇಲೆ ಹಲ್ಲೆ ಪ್ರಮುಖ ಕಾರಣ

ಈ ಹಲ್ಲೆ ಪ್ರಕರಣಕ್ಕೂ ಮುನ್ನ ಅಬ್ಬಿಜಲಪಾತದ ಬಳಿ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿರುವ ಘಟನೆ ಕೂಡ ಜಿಲ್ಲಾಡಳಿತದ ಕೆಂಗಣ್ಣಿಗೆ ಗುರಿಯಾಗಿತ್ತು. ಪ್ರವಾಸಿ ತಾಣಗಳಲ್ಲಿ ಪುಂಡಾಟಿಕೆ ನಿಲ್ಲಿಸಬೇಕೆಂಬ ತೀರ್ಮಾನಕ್ಕೆ ಬಂದಾಗಿತ್ತು. ಈ ನಡುವೆ ಚುನಾವಣೆ ಸಂದರ್ಭದಲ್ಲಿ ನಡೆದ ಘಟನೆ ಹಾಗೂ ಆ ಸಂಬAಧ ಬಂದ ದೂರುಗಳನ್ನು ಪರಿಗಣಿಸಿ ಇದೀಗ ಜಿಲ್ಲಾಡಳಿತವೇ ಬಾಡಿಗೆ ಜೀಪ್‌ಗಳ (ಬಿಳಿ ಫಲಕ) ಓಡಾಟಕ್ಕೆ ಕಡಿವಾಣ ಹಾಕಿದೆ. ಆದರೂ ಕಾನೂನಡಿ ಅವಕಾಶ ಕಲ್ಪಿಸಿ ಹಳದಿ ಫಲಕಕ್ಕೆ ಮಾರ್ಪಾಡು ಮಾಡಿಕೊಂಡು ಇತಿ ಮಿತಿಯೊಳಗಡೆ ಚಾಲನೆ ಮಾಡುವಂತೆ ಸೂಚನೆ ಕೂಡ ನೀಡಿದೆ. ವಿವೇಚನೆಯಿಲ್ಲದೆ ಕೆಲವರು ಮಾಡಿದ ತಪ್ಪಿನಿಂದಾಗಿ ಇದೀಗ ಜೀಪನ್ನು ನಂಬಿ ಬದುಕು ಕಟ್ಟಿಕೊಂಡಿದ್ದವರ ಬದುಕು ಕೂಡ ಬೀದಿಗೆ ಬಂದAತಾಗಿದೆ..!

ಹಲ್ಲೆ ಇದು ಮೊದಲಲ್ಲ..!

ಮಾಂದಲ್ ಪಟ್ಟಿ ರಸ್ತೆಯಲ್ಲಿ ಜಗಳ-ಹಲ್ಲೆಯಾಗುತ್ತಿರುವದು ಇದು ಮೊದಲೇನಲ್ಲ. ಈ ಹಿಂದೆ ಬೆರಣಿಕೆಯಷ್ಟು ತಮ್ಮ ಜೀವನೋಪಯೋಗಕ್ಕಾಗಿ ಜೀಪ್‌ಗಳನ್ನು ಓಡಿಸುತ್ತಿದ್ದ ಸಂದರ್ಭ ಯಾವದೇ ಸಮಸ್ಯೆಗಳಿರಲಿಲ್ಲ. ಅಲ್ಲಿ ಲಾಭವಿದೆ ಎಂದು ಕಂಡುಕೊAಡ ಕೆಲವರು ಒಂದರ ಹಿಂದೆ ಒಂದರAತೆ ಜೀಪ್ ಓಡಿಸಲು ಶುರುವಾದ ಮೇಲೆ ಪೈಪೋಟಿ ಏರ್ಪಡುತ್ತಿದ್ದಂತೆ ಪರಸ್ಪರ ವೈಮನಸ್ಯ ಕೂಡ ಪುಟಿದೆದ್ದವು. ಹಾಗಾಗಿ ಅವರುಗಳೇ ಜಗಳವಾಡಿಕೊಂಡಿದ್ದೂ ಇದೆ. ಇದರೊಂದಿಗೆ ಹಲವಾರು ಬಾರಿ ಪ್ರವಾಸಿಗರ ಮೇಲೂ ಹಲ್ಲೆಯಾದ ಪ್ರಕರಣವೂ ನಡೆದಿದೆ.

ಗ್ರಾಮಸ್ಥರಿಗೆ ನೆಮ್ಮದಿ..!

ಜೀಪ್‌ಗಳ ರಭಸದ ಓಡಾಟದಿಂದಾಗಿ ಆ ವ್ಯಾಪ್ತಿಯ ಗ್ರಾಮಸ್ಥರಿಗಂತೂ ನಿತ್ಯ ಕಿರಿಕಿರಿಯಾಗುತ್ತಲಿತ್ತು. ಜೀಪ್‌ಗಳ ಪೈಪೋಟಿಯಿಂದಾಗಿ ಒಂದೊಮ್ಮೆ ಜೀಪೊಂದು ದೇವಸ್ತೂರು ಬಳಿ ರಸ್ತೆಯಿಂದ ಮನೆಯ ಅಂಗಳಕ್ಕೆ ಜಿಗಿದು ಪಲ್ಟಿಯಾಗಿತ್ತು. ಅಂಗಳದಲ್ಲಿದ್ದ ಮಕ್ಕಳು ಕ್ಷಣ ಮಾತ್ರದಲ್ಲಿ ಅಪಾಯದಿಂದ ಪಾರಾಗಿದ್ದರು. ಈ ಸಂದರ್ಭ ರೊಚ್ಚಿಗೆದ್ದ ಸುತ್ತ ಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡುವದರೊಂದಿಗೆ ಪ್ರತಿಭಟನೆ ಕೂಡ ನಡೆಸಿದ್ದರು. ಈ ಬಗ್ಗೆ ಹಲವಾರು ಸಭೆ ನಡೆಸಿದ ಪೊಲೀಸರು ಬಿಳಿ ಫಲಕ ಜೀಪ್‌ಗ ಳನ್ನು ನಿಷೇಧಿಸಿ ಹಳದಿ ಫಲಕ ಮಾಡಿ ಸಿಕೊಳ್ಳುವಂತೆ ಸೂಚಿಸಿದ್ದರು. ಅಲ್ಲದೆ ಬಾಡಿಗೆಯಲ್ಲಿಯೂ ಪ್ರವಾಸಿಗರಿಂದ ಸುಲಿಗೆ ಮಾಡುತ್ತಿರುವ ಬಗ್ಗೆಯೂ ಆರೋಪಗಳಿದ್ದುದರಿಂದ ಜಿಲ್ಲಾಡಳಿತವೇ ಬಾಡಿಗೆ ನಿಗದಿಪಡಿಸಿ ಆದೇಶಿಸಿತ್ತು. ಆದರೂ ಅದನ್ನೆಲ್ಲ ಮೂಲೆಗೆ ತೂರಿ ವ್ಯವಸ್ಥೆಯನ್ನು ಅವ್ಯವಸ್ಥೆಯನ್ನಾಗಿಸಿ ಮತ್ತದೇ ಚಾಳಿ ಮುಂದುವರಿಸ ಲಾಯಿತು. ಇದೀಗ ಮತ್ತೆ ಜಿಲ್ಲಾಡಳಿತ ನಿರ್ಬಂಧ ಹೇರಿರುವದರಿಂದ ಯಾವದೇ ಅಡಚಣೆಗಳಿಲ್ಲದೆ ಒಂದು ರೀತಿಯ ನೆಮ್ಮದಿಯ ವಾತಾವರಣ ನಿರ್ಮಾಣವಾಗಿದೆ ಎಂದು ಸುತ್ತಲಿನ ಗ್ರಾಮಸ್ಥರು ಅಭಿಪ್ರಾಯಿಸುತ್ತಾರೆ.

ಇದೀಗ ಜಿಲ್ಲಾಡಳಿತ ಹಳದಿ ಫಲಕ ಮಾಡಿಸಿಕೊಳ್ಳುವಂತೆ ಅವಕಾಶ ನೀಡಿದ್ದರೂ ಯಾರೂ ಕೂಡ ತಮ್ಮ ಸ್ವಂತ ಬಳಕೆಯ ಜೀಪ್‌ಗಳನ್ನು ಹಳದಿ ಫಲಕ ಮಾಡಿಸಿಕೊಳ್ಳಲು ತಯಾರಿಲ್ಲ. ತೆರಿಗೆ ಹೆಚ್ಚಾಗಲಿದೆ, ಯಾವದೇ ಲಾಭವಿರುವದಿಲ್ಲ ಎಂಬದು ಚಾಲಕ ರುಗಳ ಅಂಬೋಣ. ಈ ನಡುವೆ ವ್ಯವಸ್ಥೆ ಸರಿಪಡಿಸಿಕೊಡುವಂತೆ ಕ್ಷೇತ್ರದ ಶಾಸಕರಲ್ಲಿ ಹಾಗೂ ದೂರುದಾರರಾದ ಅಯ್ಯಪ್ಪ ಅವರ ಬಳಿ ಕೆಲವು ಚಾಲಕರು ದುಂಬಾಲು ಬೀಳುತ್ತಿದ್ದಾರೆ. ಆದರೆ; ಕಾನೂನು ಚೌಕಟ್ಟಿನಲ್ಲಿ ಯಾರೂ ಕೂಡ ಏನೂ ಮಾಡಲಾಗದ ಪರಿಸ್ಥಿತಿ. ಚಾಲ ಕರುಗಳೇ ತಮ್ಮ ನಿಲುವು ಬದಲಾಯಿಸಿಕೊಳ್ಳಬೇಕಷ್ಟೆ..!

?ಕುಡೆಕಲ್ ಸಂತೋಷ್