ಮಡಿಕೇರಿ, ಜೂ. ೭: ವಿಧಾನಸಭೆಯಿಂದ ವಿಧಾನಪರಿಷತ್ತಿನ ಮೂರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಜಿಲ್ಲೆಯ ಒಬ್ಬರಿಗೆ ಅವಕಾಶ ನೀಡುವ ಮೂಲಕ ಕೊಡಗಿಗೆ ಪ್ರಾತಿನಿಧ್ಯ ನೀಡುವಂತೆ ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನೀರ ಮೈನಾ ಆಗ್ರಹಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂವರು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ವಿಧಾನಸಭೆಯ ಸಂಖ್ಯಾಬಲದ ಆಧಾರದಲ್ಲಿ ಮೂವರನ್ನು ಆಯ್ಕೆ ಮಾಡಲಾಗುವುದು. ಕಾಂಗ್ರೆಸ್‌ಗೆ ಸ್ಪಷ್ಟಬಹುಮತ ಇರುವ ಹಿನ್ನೆಲೆ ಅವಿರೋಧ ಆಯ್ಕೆ ನಡೆಯಲಿದೆ. ಈ ಹಿನ್ನೆಲೆ ಮೂರು ಸ್ಥಾನಗಳ ಪೈಕಿ ಜಿಲ್ಲೆಯ ಒಬ್ಬರನ್ನು ಪರಿಗಣಿಸಿ ಸ್ಥಾನ ನೀಡಬೇಕು ಈ ನಿಟ್ಟಿನಲ್ಲಿ ರಾಷ್ಟಿçÃಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರಿಷ್ಠರುಗಳಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಜಿಲ್ಲಾ ಕಾಂಗ್ರೆಸ್‌ನಿAದ ನಿರ್ಣಯ ಮಾಡಿ ಕಳುಹಿಸಲಾಗುತ್ತದೆ ಎಂದರು.

ವಿದ್ಯುತ್ ದರ ಏರಿಕೆ ನೆಪದಲ್ಲಿ ಭಾರತೀಯ ಜನತಾ ಪಕ್ಷ ಪ್ರತಿಭಟನೆ ನಡೆಸಿದೆ. ಅಗತ್ಯ ಬೆಲೆ, ಇಂಧನ, ಅಡುಗೆ ಅನಿಲ ದರ ಹೆಚ್ಚಾದ ಸಂದರ್ಭ ಮೌನಕ್ಕೆ ಶರಣಾಗಿದ್ದ ಬಿಜೆಪಿ ಇಂದು ಬೀದಿಗಿಳಿದಿದೆ. ವಿದ್ಯುತ್ ದರ ಏರಿಕೆ ಮಾಡಿರುವುದು ನಮ್ಮ ಸರಕಾರವಲ್ಲ. ಚುನಾವಣಾ ಫಲಿತಾಂಶದ ಮುನ್ನ ದಿನ ಇದು ಆದೇಶವಾಗಿದೆ ಎಂದು ಸ್ಪಷ್ಟಪಡಿಸಿದ ಅವರು, ರಾಜಕೀಯ ಹಿನ್ನಡೆ ಸಾಧಿಸಿರುವ ಬಿಜೆಪಿಗೆ ಪ್ರಬಲವಾಗಿ ವಿರೋಧಿಸಲು ಯಾವುದೇ ಅಸ್ತçವಿಲ್ಲದೆ ಪ್ರತಿಭಟನೆ ಮಾಡುತ್ತಿದೆ ಎಂದು ಟೀಕಿಸಿದರು.

ಮಡಿಕೇರಿಗೆ ನೀರು ಪೂರೈಕೆಯಾಗುವ ಮೋಟಾರ್ ಕೆಟ್ಟು ನಿಂತ ಪರಿಣಾಮ ನೀರು ಪೂರೈಕೆಗೆ ತೊಡಕು ಉಂಟಾಗಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನೂತನ ಶಾಸಕ ಡಾ.ಮಂಥರ್ ಗೌಡ ತಮ್ಮ ಅನುದಾನದಲ್ಲಿ ಹಣ ಮೀಸಲಿಟ್ಟು ನೂತನ ಮೋಟರ್ ಖರೀದಿಗೆ ಅಂದಾಜು ಪಟ್ಟಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದ ತೆನ್ನೀರ ಮೈನಾ, ೨ ಮೋಟಾರ್‌ಗಳ ಪೈಕಿ ಒಂದು ೪ ತಿಂಗಳ ಹಿಂದೆ ಹದಗೆಟ್ಟಿತ್ತು. ಅದನ್ನು ಸರಿಪಡಿಸದ ಪರಿಣಾಮ ಮತ್ತೊಂದು ಮೋಟರ್ ತೊಂದರೆಯಾದಾಗ ನೀರು ಸರಬರಾಜಿಗೆ ಸಮಸ್ಯೆಯಾಗಿದೆ. ಇದಕ್ಕೆ ನಗರಸಭೆ ಆಡಳಿತ ವೈಫಲ್ಯ ಕಾರಣವಾಗಿದೆ. ಕಾರ್ಯವೈಖರಿ ಹೀಗೆ ಮುಂದುವರೆದರೆ ನಗರಸಭೆಯನ್ನು ‘ಸೂಪರ್ ಸೀಡ್’ ಮಾಡಲು ಒತ್ತಾಯಿಸಲಾಗುವುದು ಎಂದು ಎಚ್ಚರಿಸಿದರು.

ಸಬ್ ರಿಜಿಸ್ಟಾçರ್ ಕಚೇರಿಯಲ್ಲಿ ಸಮರ್ಪಕವಾಗಿ ಜನರ ಕೆಲಸವಾಗುತ್ತಿಲ್ಲ. ತಂತ್ರಾAಶದ ಕಾರಣದಿಂದ ವಿಳಂಬವಾಗುತ್ತಿದೆ. ಗುಂಟೆಯ ಜೊತೆಗೆ ಸೆಂಟ್ ಎಂಬುದಕ್ಕೂ ತಂತ್ರಾAಶದಲ್ಲಿ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಗಮನ ಸೆಳೆದು ಕಂದಾಯ ಸಚಿವರಿಗೂ ಮಾಹಿತಿ ತಿಳಿಸಲಾಗಿದೆ. ಸದ್ಯದಲ್ಲಿಯೇ ಸಮಸ್ಯೆ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚುಮ್ಮಿ ದೇವಯ್ಯ ಮಾತನಾಡಿ, ಮಳೆಗಾಲ ಕೆಲವೇ ದಿನದಲ್ಲಿ ಆರಂಭವಾಗಲಿದ್ದು, ನಗರಸಭೆ ಮುಂಜಾಗ್ರತ ಕ್ರಮ ವಹಿಸಬೇಕು. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವ ನಿಟ್ಟಿನಲ್ಲಿ ಹೋಲ್ ಚರಂಡಿಗಳನ್ನು ನಿರ್ಮಿಸಬೇಕು. ಇದರಿಂದ ರಸ್ತೆಯಲ್ಲಿ ನೀರು ನಿಂತು ಸಮಸ್ಯೆಯಾಗುವುದಿಲ್ಲ ಎಂದು ಸಲಹೆ ನೀಡಿದರು.

ಗೋಷ್ಠಿಯಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ನಗರಸಭಾ ಮಾಜಿ ಸದಸ್ಯರುಗಳಾದ ಕಟ್ರತನ ವೆಂಕಟೇಶ್, ಉದಯ್ ಕುಮಾರ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ಮಂಡೀರ ಸದಾ ಮುತ್ತಪ್ಪ ಹಾಜರಿದ್ದರು.