ಮಡಿಕೇರಿ, ಜೂ. ೬: ರಾಜಾಸೀಟ್ ಆವರಣದಲ್ಲಿ ಕಾವಲುಗಾರ ಹಾಗೂ ವರ್ತಕನ ನಡುವೆ ನಡೆದ ಗಲಾಟೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಅನಧಿಕೃತವಾಗಿದ್ದ ಎಲ್ಲಾ ೨೦ ಅಂಗಡಿಗಳನ್ನು ತೆರವು ಮಾಡಿ ಕ್ರಮಕೈಗೊಂಡಿದೆ.

ತಾ. ೪ ರ ರಾತ್ರಿ ರಾಜಾಸೀಟ್‌ನ ಕಾವಲುಗಾರ ಜಯಣ್ಣ ಹಾಗೂ ವರ್ತಕ ಜಂಶಾದ್ ನಡುವೆ ಕ್ಷÄಲ್ಲಕ ಕಾರಣಕ್ಕೆ ವಾಗ್ವಾದ ಏರ್ಪಟ್ಟು ಮಾರಾಮಾರಿ ನಡೆದಿತ್ತು. ಈ ಸಂಬAಧ ಮಡಿಕೇರಿ ನಗರ ಠಾಣೆಯಲ್ಲಿ

(ಮೊದಲ ಪುಟದಿಂದ) ಪ್ರಕರಣ ದಾಖಲಾಗಿ ಆರೋಪಿಯನ್ನು ಬಂಧಿಸಲಾಗಿದೆ.

ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ‘ವೈರಲ್’ ಆದ ಬೆನ್ನಲ್ಲೆ ಜಿಲ್ಲಾಧಿಕಾರಿ ಬಿ.ಸಿ. ಸತೀಶ ವ್ಯಾಪಾರಕ್ಕೆ ನಿರ್ಬಂಧಿಸಲು ಸೂಚಿಸಿದ್ದರು. ಇದೀಗ ರಾಜಾಸೀಟ್‌ನ ಆವರಣದಲ್ಲಿ ಎಲ್ಲಾ ೨೦ ಅಂಗಡಿಗಳು ಅನಧಿಕೃತ ಎಂದು ತೆರವುಗೊಳಿಸಲಾಗಿದೆ.

ತಹಶೀಲ್ದಾರ್ ಕಿರಣ್ ನರಗುಂದ, ಮಡಿಕೇರಿ ನಗರಸಭೆ ಪೌರಾಯುಕ್ತ ವಿಜಯ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರಮೋದ್ ನೇತೃತ್ವದಲ್ಲಿ ಪೊಲೀಸರ ಸಹಕಾರದೊಂದಿಗೆ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಸದ್ಯಕ್ಕೆ ವರ್ತಕರು ಆಕಾಶವಾಣಿ ರಸ್ತೆಯಲ್ಲಿನ ಬದಿಯಲ್ಲಿ ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದಾರೆ.

ದಿಢೀರ್ ಕ್ರಮದಿಂದ ಕಂಗೆಟ್ಟ ವರ್ತಕರು ತಮ್ಮ ತಳ್ಳುಗಾಡಿ, ವಸ್ತು, ಆಹಾರ ಉತ್ಪನ್ನಗಳನ್ನು ಸ್ಥಳಾಂತರಗೊಳಿಸಿದರು. ಈ ಬೆಳವಣಿಗೆಯಿಂದ ನೊಂದಿರುವ ವರ್ತಕರು ಒಬ್ಬ ಮಾಡಿದ ತಪ್ಪಿಗೆ ಎಲ್ಲರಿಗೂ ಶಿಕ್ಷೆ ನೀಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.