ನೈತಿಕ ಪೊಲೀಸ್‌ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ: ಜಿ. ಪರಮೇಶ್ವರ್

ಮಂಗಳೂರು, ಜೂ. ೬: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನೈತಿಕ ಪೊಲೀಸ್‌ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಂಗಳವಾರ ಹೇಳಿದ್ದಾರೆ. ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿರುವ ಪರಮೇಶ್ವರ್ ಅವರು ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಳಿಕ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಗೃಹ ಸಚಿವರು, ಮಂಗಳೂರಿನಲ್ಲಿ ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳನ್ನು ಪರಿಶೀಲಿಸಿದ್ದೇನೆ. ಇದು ನನಗೆ ಹೊಸ ಹುದ್ದೆ ಅಲ್ಲ. ಹೊಸ ಸವಾಲುಗಳು ಹುಟ್ಟಿಕೊಂಡಿವೆ ಮತ್ತು ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪೊಲೀಸ್ ಇಲಾಖೆಗೂ ಹೊಸ ಸವಾಲುಗಳು ಎದುರಾಗಿವೆ ಎಂದರು. ನೈತಿಕ ಪೊಲೀಸ್‌ಗಿರಿ ತಡೆಯಲು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಎಂಬ ಹೊಸ ಘಟಕ ಸ್ಥಾಪಿಸುತ್ತೇವೆ. ಆ್ಯಂಟಿ ಕಮ್ಯುನಲ್ ವಿಂಗ್‌ನಲ್ಲಿ ಸಮರ್ಥ ಅಧಿಕಾರಿಗಳು ಇರಲಿದ್ದಾರೆ ಎಂದರು. ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್‌ಗಿರಿ ತುಂಬಾ ನಡೆಯುತ್ತಿದೆ. ಇದನ್ನು ತಡೆಯದಿದ್ದರೆ ಇಲಾಖೆ ಮತ್ತು ರಾಜ್ಯಕ್ಕೆ ಕೆಟ್ಟ ಹೆಸರು. ಹಾಗಾಗಿ ನೈತಿಕ ಪೊಲೀಸ್‌ಗಿರಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಆಗಸ್ಟ್ ೧೫ ರೊಳಗೆ ಕರಾವಳಿ ಭಾಗ ಡ್ರಗ್ಸ್ ಮುಕ್ತ ಪ್ರದೇಶವಾಗಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದರು.

೧೫,೦೦೦ ಎಲ್‌ಎಸ್‌ಡಿ ಡ್ರಗ್ಸ್ನೊಂದಿಗೆ

೬ ಜನರ ಬಂಧನ

ನವದೆಹಲಿ, ಜೂ. ೬: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ದೇಶಾದ್ಯಂತ ‘ಡಾರ್ಕ್ ವೆಬ್' ಮೂಲಕ ಕಾರ್ಯನಿರ್ವಹಿಸುತ್ತಿರುವ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಭೇದಿಸಿರುವುದಾಗಿ ಹೇಳಿಕೊಂಡಿದ್ದು ಎಲ್‌ಎಸ್‌ಡಿ ಡ್ರಗ್‌ಗಳ ಅತಿದೊಡ್ಡ ರವಾನೆಯನ್ನು ವಶಪಡಿಸಿಕೊಂಡಿದೆ. ಈ ಸಂಬAಧ ೬ ಮಂದಿಯನ್ನು ಬಂಧಿಸಲಾಗಿದೆ ಎಂದು ಎನ್‌ಸಿಬಿ (ಎನ್‌ಆರ್) ಉಪ ಮಹಾನಿರ್ದೇಶಕ ಜ್ಞಾನೇಶ್ವರ್ ಸಿಂಗ್ ಮಂಗಳವಾರ ನೀಡಿದ್ದಾರೆ. ಎರಡು ಪ್ರಕರಣಗಳಲ್ಲಿ ೬ ಜನರನ್ನು ಬಂಧಿಸಿ ೧೫,೦೦೦ ಎಲ್‌ಎಸ್‌ಡಿ ಡ್ರಗ್ಸ್ ವಶಪಡಿಸಿಕೊಂಡಿದ್ದೇವೆ. ಇದು ವಾಣಿಜ್ಯ ಪ್ರಮಾಣಕ್ಕಿಂತ ೨.೫ ಸಾವಿರ ಹೆಚ್ಚಾಗಿದೆ. ಈ ಔಷಧದ ವಾಣಿಜ್ಯ ಪ್ರಮಾಣ ೧ ಗ್ರಾಂ. ಎಲ್‌ಎಸ್‌ಡಿ ಡ್ರಗ್ಸ್ ಸಿಂಥೆಟಿಕ್ ಡ್ರಗ್ ಆಗಿದ್ದು, ಇದು ತುಂಬಾ ಅಪಾಯಕಾರಿ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಮಾದಕ ದ್ರವ್ಯ ಜಾಲ ದೆಹಲಿಯಿಂದ ಅಮೆರಿಕದವರೆಗೂ ಹರಡಿತ್ತು. ಪೋಲೆಂಡ್, ನೆದರ್ಲ್ಯಾಂಡ್ಸ್, ಯುಎಸ್‌ಎ, ದೆಹಲಿ-ಎನ್‌ಸಿಆರ್, ರಾಜಸ್ಥಾನ, ಮಹಾರಾಷ್ಟç, ಕೇರಳ, ತಮಿಳುನಾಡು ಮತ್ತು ಉತ್ತರ ಪ್ರದೇಶದಾದ್ಯಂತ ಹರಡಿರುವ ಡ್ರಗ್ಸ್ನ ಬೃಹತ್ ಜಾಲವಾಗಿದೆ ಎಂದು ಅವರು ಹೇಳಿದ್ದಾರೆ. ಕಾರ್ಯಾಚರಣೆ ವೇಳೆ ೨.೫ ಕೆಜಿ ಗಾಂಜಾ, ಬ್ಯಾಂಕ್ ಖಾತೆಗಳಲ್ಲಿ ಠೇವಣಿಯಾಗಿದ್ದ ರೂ. ೪.೬೫ ಲಕ್ಷ ಮತ್ತು ರೂ. ೨೦ ಲಕ್ಷ ಎಲ್‌ಎಸ್‌ಡಿ ಅಥವಾ ಲೈಸರ್ಜಿಕ್ ಆಸಿಡ್ ಡೈಥೈಲಾಮೈಡ್ ವಾಸ್ತವವಾಗಿ ಸಂಶ್ಲೇಷಿತ ರಾಸಾಯನಿಕ ಆಧಾರಿತ ಮಾದಕ ವಸ್ತುವಾಗಿದೆ ಎಂದು ತಿಳಿಸಿದ್ದಾರೆ.

ಮಣಿಪುರ ಹಿಂಸಾಚಾರ;

ಬಿಎಸ್‌ಎಫ್ ಯೋಧನಿಗೆ ಗುಂಡೇಟು

ಇAಫಾಲ್, ಜೂ. ೬: ಮಣಿಪುರದ ಸೆರೌ ಪ್ರದೇಶದಲ್ಲಿ ಓರ್ವ ಬಿಎಸ್‌ಎಫ್ ಯೋಧನ ಹತ್ಯೆಯಾಗಿದ್ದು, ಅಸ್ಸಾಂ ರೈಫಲ್ಸ್ನ ಇಬ್ಬರು ಸಿಬ್ಬಂದಿ ಗುಂಡೇಟಿನಿAದ ಗಾಯಗೊಂಡಿದ್ದಾರೆ ಎಂದು ಸೇನೆ ಮಂಗಳವಾರ ತಿಳಿಸಿದೆ. ಗಾಯಾಳುಗಳನ್ನು ಮಂತ್ರಿಪುಖ್ರಿಗೆ ವಿಮಾನದ ಮೂಲಕ ಸ್ಥಳಾಂತರಿಸಲಾಗಿದೆ ಮತ್ತು ಶೋಧ ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ ಎಂದು ದಿಮಾಪುರ್‌ನಲ್ಲಿರುವ ಸೇನೆಯ ಸ್ಪಿಯರ್‌ಕಾರ್ಪ್ಸ್ ಪ್ರಧಾನ ಕಚೇರಿ ಟ್ವಿಟರ್‌ನಲ್ಲಿ ತಿಳಿಸಿದೆ. ಹಿಂಸಾಚಾರದಿAದ ತತ್ತರಿಸಿರುವ ಮಣಿಪುರದ ಸುಗ್ನು/ಸೆರೌ ಪ್ರದೇಶಗಳಲ್ಲಿ ಅಸ್ಸಾಂ ರೈಫಲ್ಸ್, ಬಿಎಸ್‌ಎಫ್ ಮತ್ತು ಪೋಲಿಸ್‌ನಿಂದ ವ್ಯಾಪಕವಾದ ಕಾರ್ಯಾಚರಣೆಯನ್ನು ಕೈಗೊಂಡಿದ್ದವು. ಜೂನ್ ೦೫/೦೬ ರ ರಾತ್ರಿಯಿಡೀ ಭದ್ರತಾ ಪಡೆಗಳು ಮತ್ತು ದಂಗೆಕೋರರ ಗುಂಪಿನ ನಡುವೆ ಮಧ್ಯಂತರ ಗುಂಡಿನ ದಾಳಿ ನಡೆಯಿತು. ಭದ್ರತಾ ಪಡೆಗಳು ದಾಳಿಯ ಪರಿಣಾಮವಾಗಿ ಪ್ರತಿದಾಳಿ ನಡೆಸಿವೆ ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.

ಒಡಿಶಾ ತ್ರಿವಳಿ ರೈಲು ದುರಂತ:

ಎಫ್‌ಐಆರ್ ದಾಖಲಿಸಿದ ಸಿಬಿಐ

ನವದೆಹಲಿ, ಜೂ. ೬: ಒಡಿಶಾ ತ್ರಿವಳಿ ರೈಲು ಅಪಘಾತ ಪ್ರಕರಣಕ್ಕೆ ಸಂಬAಧಿಸಿದAತೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಮಂಗಳವಾರ ತಿಳಿಸಿದೆ. ರೈಲ್ವೆ ಸಚಿವಾಲಯದ ಕೋರಿಕೆಯ ಮೇರೆಗೆ ಮತ್ತು ಒಡಿಶಾ ಸರ್ಕಾರದ ಒಪ್ಪಿಗೆಯೊಂದಿಗೆ ನಾವು ಪ್ರಕರಣವನ್ನು ದಾಖಲಿಸಿದ್ದೇವೆ. ಘಟನೆಯು ಒಡಿಶಾ ರಾಜ್ಯದ ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್‌ನಲ್ಲಿ ಜೂನ್ ೨ರಂದು ಕೋರಮಂಡಲ್ ಎಕ್ಸ್ಪ್ರೆಸ್, ಯಶವಂತಪುರ-ಹೌರಾ ಎಕ್ಸ್ಪ್ರೆಸ್ ಮತ್ತು ಗೂಡ್ಸ್ ರೈಲಿನ ನಡುವಿನ ರೈಲು ಅಪಘಾತಕ್ಕೆ ಸಂಬAಧಿಸಿದೆ ಎಂದು ಸಿಬಿಐ ಹೇಳಿದೆ. ಒಡಿಶಾದ ಕಟಕ್ ಜಿಲ್ಲೆಯ ಬಾಲಸೋರ್ ಜಿಆರ್‌ಪಿಎಸ್‌ನಲ್ಲಿ ಈ ಹಿಂದೆ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ. ಈಗಾಗಲೇ ಒಡಿಶಾದ ಬಾಲಸೋರ್‌ನಲ್ಲಿ ಸಿಬಿಐ ತಂಡವಿದೆ. ಒಡಿಶಾದ ಬಾಲಸೋರ್ ರೈಲು ಅಪಘಾತದ ಬಗ್ಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ರೈಲ್ವೆ ಮಂಡಳಿ ಭಾನುವಾರ ಶಿಫಾರಸು ಮಾಡಿದೆ. ಪರಿಸ್ಥಿತಿ ಮತ್ತು ಆಡಳಿತದಿಂದ ಪಡೆದ ಮಾಹಿತಿಯನ್ನು ಪರಿಗಣಿಸಿ, ರೈಲ್ವೆ ಮಂಡಳಿಯು ಹೆಚ್ಚಿನ ವಿವರಗಳಿಗಾಗಿ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಹೇಳಿದ್ದರು.