ಮಡಿಕೇರಿ, ಜೂ. ೬: ಶಾಲಾ-ಕಾಲೇಜುಗಳ ಬಳಿ ಮನುಕುಲಕ್ಕೆ ಮಾರಕ ವಾಗಿರುವ ಎಂಡಿಎAಎ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಕೊಡಗು ಜಿಲ್ಲಾ ಪೊಲೀಸರು, ಈ ಸಂಬAಧ ಓರ್ವ ಆರೋಪಿಯನ್ನು ಬಂಧಿಸಿ ನಿಷೇಧಿತ ಮಾದಕ ವಸ್ತುವನ್ನು ವಶÀಪಡಿಸಿಕೊಂಡಿದ್ದಾರೆ.

ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮೂರ್ನಾಡು ಪಟ್ಟಣದ ಸುತ್ತಮುತ್ತ ಹಾಗೂ ಶಾಲಾ-ಕಾಲೇಜುಗಳ ಬಳಿ ಅಕ್ರಮವಾಗಿ ಮಾದಕ ವಸ್ತು ಎಂಡಿಎAಎ ಮಾರಾಟ

(ಮೊದಲ ಪುಟದಿಂದ) ಮಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಕಿಗ್ಗಾಲು ರಸ್ತೆಯ ಜಂಕ್ಷನ್ ಬಳಿ ಮೂರ್ನಾಡು ನಿವಾಸಿ ಅಲ್ತಾಫ್ ಹುಸೇನ್(೩೪) ಎಂಬಾತನನ್ನು ಸೆರೆ ಹಿಡಿದಿದ್ದಾರೆ. ಆತನಿಂದ ೧೨.೧೫೦ಗ್ರಾಂ ನಿಷೇಧಿತ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಈ ಮಾದಕ ವಸ್ತುವಿಗೆ ಮಹಾನಗರಗಳಲ್ಲಿ ಒಂದು ಗ್ರಾಂ.ಗೆ ರೂ.೩೦ಸಾವಿರಗಳಷ್ಟು ಬೆಲೆ ಇದೆ ಎಂದು ಹೇಳಲಾಗುತ್ತಿದ್ದು, ಅಲ್ತಾಫ್‌ಗೆ ಬೆಂಗಳೂರು ಕಡೆಯಿಂದ ಈ ಮಾದಕ ವಸ್ತು ಸರಬರಾಜಾಗುತ್ತಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.

ಇದೀಗ ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾರ್ಗದರ್ಶನದಲ್ಲಿ ಮಡಿಕೇರಿ ಉಪ ವಿಭಾಗ ಡಿವೈಎಸ್‌ಪಿ ಎಂ.ಜಗದೀಶ್, ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಠಾಣಾಧಿಕಾರಿ ಶ್ರೀನಿವಾಸಲು, ಜಿಲ್ಲಾ ಅಪರಾಧ ಪತ್ತೆದಳ ಹಾಗೂ ಗ್ರಾಮಾಂತರ ಠಾಣಾ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.