ವೀರಾಜಪೇಟೆ, ಜೂ. ೫: ರೆಡ್‌ರಿಬ್ಬನ್ ಕ್ಲಬ್ ಹಾಗೂ ಸರ್ವೋದಯ ಶಿಕ್ಷಣ ಮಹಾವಿದ್ಯಾನಿಲಯದ ಜಂಟಿ ಆಶ್ರಯದಲ್ಲಿ ಏಡ್ಸ್ ರೋಗದ ಬಗ್ಗೆ ಅರಿವು ಕಾರ್ಯಕ್ರಮವು ವೀರಾಜಪೇಟೆಯ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಯಿತು.

ಡಾ. ವಾಣಿ ಎಂ. ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವೀರಾಜಪೇಟೆಯ ತಾಲೂಕು ಆರೋಗ್ಯಾಧಿಕಾರಿ ಡಾ.ಯತಿರಾಜ್ ಅವರು ಆಗಮಿಸಿ ಮಾತನಾಡಿ, ಏಡ್ಸ್ ರೋಗವನ್ನು ಹೇಗೆ ತಡೆಗಟ್ಟಬೇಕು, ಅದರ ಲಕ್ಷಣಗಳೇನು? ಎನ್ನುವುದರ ಬಗ್ಗೆ ವಿವರಿಸಿದರು. ಏಡ್ಸ್ ರೋಗಕ್ಕೆ ತುತ್ತಾಗಿರುವವರಿಗೆ ಆತ್ಮಬಲ, ವಿಶ್ವಾಸ ತುಂಬಿಸಿ ಉತ್ತಮಜೀವನ ನಡೆಸಲು ಸಹಕರಿಸುವಂತೆ ಕರೆಕೊಟ್ಟರು.

ಏಡ್ಸ್ ರೋಗದ ಬಗ್ಗೆ ನಡೆಸಿದ ಕ್ವಿe಼ï ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮವನ್ನು ಸಹಾಯಕ ಪ್ರಾಧ್ಯಾಪಕ ಗಿರೀಶ್ ಹೆಚ್.ಆರ್ ಹಾಗೂ ಗ್ರಂಥಪಾಲಕ ರಾಜಶೇಖರ್ ಕೆ.ಎಸ್. ನಿಯೋಜಿಸಿದ್ದರು.

ಕಾರ್ಯಕ್ರಮವನ್ನು ಶಿಕ್ಷಣಾರ್ಥಿ ರಕ್ಷಾ ಹಾಗೂ ಶ್ರೀಕಲಾ ನಡೆಸಿಕೊಟ್ಟರು. ಭೂಮಿಕಾ ಅವರು ಪ್ರಾರ್ಥಿಸಿದರು, ಕಾವೇರಮ್ಮ ಸ್ವಾಗತಿಸಿ, ಶಾಹಿರ ವಂದಿಸಿದರು.