ಮಡಿಕೇರಿ, ಜೂ. ೪: ಪ್ರಸಕ್ತ ವರ್ಷದಲ್ಲಿ ಪ್ರಾಕೃತಿಕ ವಿಕೋಪ ಘಟನೆಗಳು ವರದಿಯಾದಲ್ಲಿ, ಕಾರ್ಯಾಚರಣೆ ನಡೆಸಲು ಅಗತ್ಯವಾದ ವಾಹನಗಳನ್ನು ಇಲಾಖಾ ವ್ಯಾಪ್ತಿಯಲ್ಲಿ ಸನ್ನದ್ದ ವಾಗಿರಿಸಲು ಹಾಗೂ ಈ ವಾಹನಗಳಿಗೆ ಬಾಡಿಗೆ ದರ ನಿಗದಿ ಪಡಿಸಲು ೩ಐದನೇ ಪುಟಕ್ಕೆ (ಮೊದಲ ಪುಟದಿಂದ) ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅವರ ಅಧ್ಯಕ್ಷತೆಯಲ್ಲಿ ನಿರ್ಧರಿಸಲಾಗಿದೆ.

ಅದರಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೊಡಗು ಜಿಲ್ಲೆ, ಮಡಿಕೇರಿ ಅವರು ಅಗತ್ಯ ವಾಹನಗಳ ಮಾಲೀಕರೊಂದಿಗೆ ಚರ್ಚಿಸಿ ಅವುಗಳ ಬಾಡಿಗೆ ದರವನ್ನು ನಿಗದಿಪಡಿಸಿದ್ದಾರೆ.

ವರ್ಗ-೧ ಜೀಪ್ ಒಂದು ದಿನಕ್ಕೆ ರೂ ೩,೭೫೦, ವರ್ಗ-೨ ಜೆ.ಸಿ.ಬಿ ಒಂದು ಗಂಟೆಗೆ ರೂ.೯೫೦ ಹಾಗೂ ಒಂದು ದಿನಕ್ಕೆ ರೂ.೭೦೦೦, ವರ್ಗ-೩ ಹಿಟಾಚಿ (ಶಿಪ್ಟಿಂಗ್ ಒನ್ ಸೈಡ್) ರೂ.೭೦೦೦ ಹಿಟಾಚಿ ಇಘಿ೭೦ ಒಂದು ಗಂಟೆಗೆ ರೂ.೧೧೦೦ ಹಿಟಾಚಿ ಇಘಿ೧೧೦ ಒಂದು ಗಂಟೆಗೆ ರೂ.೧೩೫೦ ಹಿಟಾಚಿ ಇಘಿ೧೪೦ ಒಂದು ಗಂಟೆಗೆ ರೂ.೧೭೦೦ ವರ್ಗ-೪ ಕ್ರೇನ್ ( ೧೦೧ ಕೆಪಾಸಿಟಿ) ಒಂದು ಗಂಟೆಗೆ ರೂ. ೧೦೦೦ ಕ್ರೇನ್ (೧೫೧ ಕೆಪಾಸಿಟಿ) ಒಂದು ಗಂಟೆಗೆ ರೂ.೧೧೦೦ ಕ್ರೇನ್ (೨೦೧ ಕೆಪಾಸಿಟಿ) ಒಂದು ಗಂಟೆಗೆ ರೂ.೧೨೦೦/- ಆಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.