ಕೊಡಗಿನ ಗಡಿಯಾಚೆ

ಕುಸಿದು ಬಿದ್ದ ಸೇತುವೆ

ಪಟ್ನಾ, ಜೂ. ೪: ನಿರ್ಮಾಣ ಹಂತದಲ್ಲಿದ್ದ ನದಿ ಸೇತುವೆಯೊಂದು ಕುಸಿದು ಬಿದ್ದಿರುವ ಘಟನೆ ಭಾನುವಾರ ಬಿಹಾರದ ಬಾಗಲ್ಪುರ್‌ನಲ್ಲಿ ನಡೆದಿದೆ. ಘಟನೆಗೆ ಸಂಬAಧಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡಿವೆ. ಬಾಗಲ್ಪುರ್ ಜಿಲ್ಲೆಯಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಅಂಗುನಿಘಾಟ್-ಸುಲ್ತಾನ್‌ಗAಜ್ ಜೋಡಿ ಸೇತುವೆ ಕುಸಿದು ಬಿದ್ದಿದೆ. ಈ ಸೇತುವೆ ಬಾಗಲ್ಪುರ್ - ಖಾಗಾರಿಯಾ ಜಿಲ್ಲೆಗಳನ್ನು ಕೂಡಿಸುತ್ತದೆ. ಈ ಸೇತುವೆ ಎರಡನೇ ಬಾರಿ ಕುಸಿದಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಭಾರಿ ಗಾಳಿ ಮಳೆಗೆ ಭಾಗಶಃ ಕುಸಿದಿತ್ತು. ಮರುನಿರ್ಮಾಣ ಮಾಡಲಾಗುತ್ತಿತ್ತು. ಈ ಸೇತುವೆಯನ್ನು ಸುಮಾರು ೧೧,೭೦೦ ಕೋಟಿಯಲ್ಲಿ ಬಿಹಾರ ಸರ್ಕಾರ ನಿರ್ಮಾಣ ಮಾಡುತ್ತಿದೆ ಎನ್ನಲಾಗಿದೆ.

ಒಡಿಶಾ ರೈಲು ದುರಂತ - ಸಿಬಿಐ ತನಿಖೆಗೆ ಶಿಫಾರಸ್ಸು

ನವದೆಹಲಿ, ಜೂ. ೪: ಒಡಿಶಾ ರೈಲು ದುರಂತವನ್ನು ಸಿಬಿಐ ತನಿಖೆಗೆ ವಹಿಸುವಂತೆ ರೈಲ್ವೆ ಮಂಡಳಿ ಶಿಫಾರಸ್ಸು ಮಾಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ಈ ಕುರಿತು ಅವರು ಸುದ್ದಿಗಾರರ ಜೊತೆ ಮಾತನಾಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಕೋರಮಂಡಲ್ ಎಕ್ಸ್ಪ್ರೆಸ್ ರೈಲಿನ ಚಾಲಕನ ತಪ್ಪು ಕಂಡು ಬಂದಿಲ್ಲ ಹಾಗೂ ರೈಲ್ವೆ ಎಲೆಕ್ಟಾçನಿಕ್ ಉಪಕರಣಗಳಲ್ಲೂ ದೋಷಗಳು ಇರಲಿಲ್ಲ ಎಂದು ತಿಳಿದು ಬಂದಿದ್ದು, ಇದರ ಹಿಂದೆ ವಿಧ್ವಂಸಕ ಕೃತ್ಯದ ಸಂಚಿರಬಹುದೇ? ಎಂಬ ದೃಷ್ಟಿಕೋನದಲ್ಲಿ ಗಂಭಿರವಾಗಿ ಚಿಂತಿಸಲಾಗುತ್ತಿದೆ ಎಂದು ಈ ಮೊದಲು ವೈಷ್ಣವ್ ಹೇಳಿದ್ದರು. ಈ ನಿಟ್ಟಿನಲ್ಲಿ ರೈಲ್ವೆ ಮಂಡಳಿ ತನಿಖೆಯನ್ನು ಸಿಬಿಐಗೆ ವಹಿಸಲು ಶಿಫಾರಸು ಮಾಡಿದೆ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ತೆರವು ಕಾರ್ಯಾಚರಣೆ ಬಹುತೇಕ ಮುಗಿದಿದ್ದು ಹಳಿಗಳ ಪುನರ್ ಜೋಡಣೆ ಹಾಗೂ ಇತರೆ ತಾಂತ್ರಿಕ ಕೆಲಸಗಳನ್ನು ಮುಗಿಸಲು ಭಾರಿ ಪ್ರಮಾಣದಲ್ಲಿ ಕೆಲಸ ನಡೆದಿದೆ ಎಂದು ರೈಲು ಸಚಿವರು ತಿಳಿಸಿದ್ದಾರೆ.

ಎಲೆಕ್ಟಾçನಿಕ್ ಇಂಟರ್‌ಲಾಕಿAಗ್ ಬದಲಾವಣೆಯಿಂದ ಅಪಘಾತ

ಬಾಲಸೋರ್, ಜೂ. ೪: ಒಡಿಶಾದ ಬಾಲಸೋರ್ ರೈಲು ಅಪಘಾತ ಪ್ರಕರಣಕ್ಕೆ ಮೂಲ ಕಾರಣಗಳ ಪತ್ತೆ ಮಾಡಲಾಗಿದ್ದು, ಅದಕ್ಕೆ ಕಾರಣರಾದವರನ್ನೂ ಗುರುತಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಭಾನುವಾರ ಹೇಳಿದ್ದಾರೆ. ಅಪಘಾತದ ಸ್ಥಳದಲ್ಲಿ ಖುದ್ದು ಮೇಲ್ವಿಚಾರಣೆ ನಡಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೌರಾ-ಚೆನ್ನೆöÊ ರೈಲು ಮಾರ್ಗದ ದುರಸ್ತಿ ಕಾರ್ಯ ಬುಧವಾರ ಸಂಜೆಯ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು. ರೈಲ್ವೆ ಸುರಕ್ಷತಾ ಆಯುಕ್ತರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಘಟನೆಗೆ ಕಾರಣ ಮತ್ತು ಅದಕ್ಕೆ ಕಾರಣರಾದವರನ್ನು ಗುರುತಿಸಿದ್ದಾರೆ. ತನಿಖಾ ವರದಿ ಬದಿದ್ದು, ಘಟನೆಗೆ ಮೂಲÀ ಕಾರಣ ಹಾಗೂ ಕಾರಣಕರ್ತರನ್ನು ಗುರುತಿಸಲಾಗಿದೆ. ಎಲೆಕ್ಟಾçನಿಕ್ ಇಂಟರ್‌ಲಾಕಿAಗ್‌ನಲ್ಲಿನ ಬದಲಾವಣೆಯಿಂದ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ರೈಲು ಮಾರ್ಗಗಳ ಪುನಃಸ್ಥಾಪನೆಯತ್ತ ಗಮನ ಹರಿಸಲಾಗಿದೆ ಮತ್ತು ಬುಧವಾರ ಬೆಳಿಗ್ಗೆ ಈ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಗಳಿವೆ ಎಂದು ಹೇಳಿದರು. ಈ ನಡವೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು, ಅಪಘಾತದಲ್ಲಿ ಮೃತಪಟ್ಟ ಇತರೆ ರಾಜ್ಯದವರಿಗೆ ತಲಾ ರೂ.೫ ಲಕ್ಷ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ರೂ.೧ ಲಕ್ಷ ಘೋಷಣೆ ಮಾಡಿದ್ದಾರೆ.

ರೆಪೊ ದರ ಯಥಾಸ್ಥಿತಿ ಸಾಧ್ಯತೆ

ಮುಂಬೈ, ಜೂ. ೪: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಮುಂಬರುವ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ರೆಪೊ ದರವನ್ನು ಶೇ ೬.೫ರಲ್ಲಿಯೇ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಚಿಲ್ಲರೆ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ ೪.೭ಕ್ಕೆ ಇಳಿಕೆ ಕಂಡಿದ್ದು, ಮುಂಬರುವ ತಿಂಗಳುಗಳಲ್ಲಿ ಇನ್ನಷ್ಟು ಇಳಿಕೆ ಆಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಜೂನ್ ೬ ರಿಂದ ೮ರವರೆಗೆ ಆರ್‌ಬಿಐನ ಹಣಕಾಸು ನೀತಿ ಸಮಿತಿಯು ಸಭೆ ಸೇರಲಿದ್ದು, ಜೂನ್ ೮ರಂದು ಸಭೆಯ ನಿರ್ಧಾರವನ್ನು ಪ್ರಕಟಿಸಲಿದೆ. ಏಪ್ರಿಲ್‌ನಲ್ಲಿ ಸಭೆ ಸೇರಿದ್ದ ಸಮಿತಿಯು ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅದಕ್ಕೂ ಮೊದಲು ೨೦೨೨ರ ಮೇ ತಿಂಗಳಿನಿAದ ಶೇ ೨.೫೦ರಷ್ಟು ಬಡ್ಡಿದರವನ್ನು ಹೆಚ್ಚಳ ಮಾಡಿತ್ತು. ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇ ೫ಕ್ಕಿಂತಲೂ ಕೆಳಕ್ಕೆ ಇಳಿಕೆ ಕಂಡಿದ್ದು, ಮೇನಲ್ಲಿ ಇನ್ನಷ್ಟು ಇಳಿಕೆ ಆಗುವ ಸಾಧ್ಯತೆ ಇದೆ. ಹೀಗಾದಲ್ಲಿ, ಈ ಹಿಂದೆ ಬಡ್ಡಿದರದಲ್ಲಿ ಮಾಡಿರುವ ಏರಿಕೆಯು ಹಣದುಬ್ಬವರನ್ನು ನಿಯಂತ್ರಿಸಲು ಪರಿಣಾಮ ಬೀರಿದೆ ಎಂದಾಗುತ್ತದೆ. ಹೀಗಾಗಿ ಈ ಬಾರಿಯ ಸಭೆಯಲ್ಲಿ ಮತ್ತೊಮ್ಮೆ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ನಿರೀಕ್ಷೆ ಮಾಡಬಹುದು ಎಂದು ಬ್ಯಾಂಕ್ ಆಫ್ ಬರೋಡಾದ ಮುಖ್ಯ ಆರ್ಥಿಕ ತಜ್ಞ ಮದನ್ ಸಬ್ಬವೀಸ್ ಹೇಳಿದ್ದಾರೆ. ಅಕ್ಟೋಬರ್ ನಂತರ ರೆಪೊ ದರದಲ್ಲಿ ಶೇ ೨೫ ರಿಂದ ಶೇ ೫೦ರವರೆಗೆ ಇಳಿಕೆ ಆಗುವ ಸಾಧ್ಯತೆ ಇದೆ ಎಂದೂ ಅವರು ಸೂಚನೆ ನೀಡಿದ್ದಾರೆ. ಬ್ಯಾಂಕಿAಗ್ ವ್ಯವಸ್ಥೆಯಲ್ಲಿ ಇರುವ ನಗದು ಮತ್ತು ಈಚಿನ ಜಿಡಿಪಿ ಬೆಳವಣಿಗೆಯನ್ನು ಗಮನಿಸಿದರೆ ರೆಪೊ ದರವನ್ನು ಹೆಚ್ಚಳ ಮಾಡುವಂತೆ ಕಾಣಿಸುತ್ತಿಲ್ಲ ಎಂದು ಬ್ಯಾಂಕ್ ಆಫ್ ಮಹಾರಾಷ್ಟ್ರದ ಕಾರ್ಯನಿರ್ವಾಹಕ ನಿರ್ದೇಶಕ ಆಶಿಷ್ ಪಾಂಡೆ ಹೇಳಿದ್ದಾರೆ.

ಕನ್ನಡಿಗರನ್ನು ರಕ್ಷಿಸಿ ಕರೆತರಲು ಪರದಾಟ

ಬೆಂಗಳೂರು, ಜೂ. ೪: ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿರುವ ರೈಲು ಅಪಘಾತದಲ್ಲಿ ಗಾಯಗೊಂಡವರು ಮತ್ತು ತೊಂದರೆಗೆ ಸಿಲುಕಿರುವವರಲ್ಲಿ ಇರುವ ಕನ್ನಡಿಗರನ್ನು ರಕ್ಷಿಸಿ ಕರೆತರಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಘಟನಾ ಸ್ಥಳಕ್ಕೆ ತೆರಳಿರುವ ತಂಡವು ಮಾಹಿತಿ ಸಿಗದೆ ಇಕ್ಕಟ್ಟಿಗೆ ಸಿಲುಕಿದೆ. ಮೃತರಲ್ಲಿ ಕನ್ನಡಿಗರಿದ್ದರೆ ಗುರುತಿಸಿ, ಮೃತದೇಹಗಳನ್ನು ತರುವುದು, ಗಾಯಾಳುಗಳು ಹಾಗೂ ಅಪಘಾತದ ಸ್ಥಳದಲ್ಲಿ ಸಿಲುಕಿರುವ ಪ್ರಯಾಣಿಕರಲ್ಲಿರುವ ರಾಜ್ಯದವರನ್ನು ಕರೆತರಲು ಲಾಡ್ ನೇತೃತ್ವದ ತಂಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಿಸಿದ್ದಾರೆ. ತಂಡವು ಶನಿವಾರ ಸಂಜೆಯೇ ಬಾಲಸೋರ್ ತಲುಪಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಕೂಡ ಈ ತಂಡದಲ್ಲಿದ್ದಾರೆ. ಶನಿವಾರ ಸಂಜೆಯೇ ಬಾಲಸೋರ್ ತಲುಪಿದ್ದೇವೆ. ಘಟನಾ ಸ್ಥಳದಲ್ಲಿ ಹೆಚ್ಚು ಮಾಹಿತಿ ದೊರಕಿಲ್ಲ. ಎರಡು ಅಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳ ಕುರಿತು ಮಾಹಿತಿ ಪಡೆದಿದ್ದೇವೆ. ಈವರೆಗೆ ಕರ್ನಾಟಕದ ಯಾರೂ ಪತ್ತೆಯಾಗಿಲ್ಲ. ಕನ್ನಡಿಗರಿದ್ದರೆ ಗುರುತಿಸಿ ಸುರಕ್ಷಿತವಾಗಿ ಕರೆತರುವ ಪ್ರಯತ್ನ ಮುಂದುವರಿಯಲಿದೆ ಎಂದು ಸಂತೋಷ್ ಲಾಡ್ ತಿಳಿಸಿದರು. ನಿರಂತರ ಪ್ರಯತ್ನದ ಬಳಿಕ ಒಡಿಶಾ ಸರ್ಕಾರವು ಗಾಯಾಳುಗಳ ಪಟ್ಟಿಯೊಂದನ್ನು ಹಂಚಿಕೊAಡಿದೆ. ಅದರಲ್ಲಿ ಪ್ರಯಾಣಿಕರು ಯಾವ ರಾಜ್ಯದವರೆಂಬ ಮಾಹಿತಿ ಇಲ್ಲ. ಹೀಗಾಗಿ, ಕರ್ನಾಟಕದವರನ್ನು ಗುರುತಿಸುವುದು ಕಷ್ಟವಾಗಿದೆ. ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಆರಂಭಿಸಿರುವ ಸಹಾಯವಾಣಿಗೂ ಯಾವುದೇ ಕರೆ ಬಂದಿಲ್ಲ ಎಂದು ಮನೋಜ್ ಮಾಹಿತಿ ನೀಡಿದರು.

ಪೊಲೀಸರಿಗೆ ಶರಣಾದ ಮಾವೋವಾದಿಗಳು

ಸುಕ್ಮಾ, ಜೂ. ೪: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಮೂವರು ಮಾವೋವಾದಿಗಳು ಪೊಲೀಸರಿಗೆ ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶರಣಾದ ಮೂವರು ನಕ್ಸಲರನ್ನು ‘ಜನ್ ಮಿಲಿಟಿಯಾ' ಸದಸ್ಯರಾದ ಪರಸ್ಕಿ ಹಿದ್ಮಾ, ಪೊಡಿಯಮ್ ಸೋಮ ಮತ್ತು ವೆಟ್ಟಿ ಸುಕ್ಕಾ ಎಂದು ಗುರುತಿಸಲಾಗಿದ್ದು, ಎಲ್ಲರೂ ಜಿಲ್ಲೆಯ ಭೇಜಿ ಪ್ರದೇಶದ ನಿವಾಸಿಗಳಾಗಿದ್ದಾರೆ. ಛತ್ತೀಸ್‌ಗಢ ಸರ್ಕಾರದ ಪುನರ್ವಸತಿ ನೀತಿ ಮತ್ತು ಸುಕ್ಮಾ ಪೊಲೀಸರ ಪುನ ನರೋತ್ತಮ್(ಹೊಸ ಮುಂಜಾನೆ ಹೊಸ ಆರಂಭ) ಅಭಿಯಾನದಿಂದ ಪ್ರಭಾವಿತರಾಗಿ ಶಸ್ತಾçಸ್ತçಗಳನ್ನು ತ್ಯಜಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಸುಕ್ಮಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಮಂಡಲ್ ಅವರ ಮುಂದೆ ಮೂವರು ಮಾವೋವಾದಿಗಳು ಶರಣಾಗಿದ್ದಾರೆ.