ಮಡಿಕೇರಿ, ಜೂ. ೪: ಆಹಾರ ಅರಸಿ ತೋಟಕ್ಕೆ ಬಂದ ಕಾಡಾನೆ ಮೃತಪಟ್ಟ ಘಟನೆ ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಸಮೀಪದ ನಲವತ್ತೊಕ್ಲು ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನಾಲ್ಕು ದಿನಗಳ ಹಿಂದೆ ಅಮ್ಮತ್ತಿ ಸುತ್ತಮುತ್ತಲ ಗ್ರಾಮ ವ್ಯಾಪ್ತಿಯಲ್ಲಿ ಸಿಡಿಲು ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಕಾಫಿ ತೋಟದಲ್ಲಿ ಹಾದುಹೋಗಿದ್ದ ವಿದ್ಯುತ್ ಕಂಬದ ನೆಲಮಟ್ಟದ ತಂತಿಗೆ ವಿದ್ಯುತ್ ಹರಿದು ಅದು ಕಾಡಾನೆಗೆ ಸ್ಪರ್ಶಿಸಿದ ಪರಿಣಾಮ ಘಟನೆ ಸಂಭವಿಸಿರ ಬಹದು ಎಂದು ಶಂಕಿಸಲಾಗಿದೆ. ಇದಕ್ಕೆ ಪೂರಕವಾಗಿ ಆನೆಯ ದೇಹದಲ್ಲಿ ಸುಟ್ಟ ಕಲೆಗಳಿವೆ. ಸಿಡಿಲು, ಗುಡುಗು ಬಂದ ಸಂದರ್ಭ ‘ಅರ್ಥಿಂಗ್’ ಉಂಟಾಗಿ ವಿದ್ಯುತ್ ಕಂಬದ ಕೆಳಭಾಗದಲ್ಲಿರುವ

೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ತಂತಿಗೂ ವಿದ್ಯುತ್ ಪ್ರವಹಿಸಿ ಈ ರೀತಿ ಘಟನೆ ಸಂಭವಿಸುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂದು ಕಿರಣ್ ಎಂಬವರಿಗೆ ಸೇರಿದ ತೋಟದ ಸುತ್ತಮುತ್ತ ದುರ್ವಾಸನೆ ಬಂದ ಸಂದರ್ಭ ಸ್ಥಳೀಯರು ಸ್ಥಳಕ್ಕೆ ತೆರಳಿದ ವೇಳೆಯಲ್ಲಿ ಕಾಡಾನೆ ಸಾವನ್ನಪ್ಪಿರುವುದು ಗೋಚರಿಸಿದೆ. ತಕ್ಷಣ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಮೃತಪಟ್ಟ ಕಾಡಾನೆ ಅಂದಾಜು ೨೫ ವರ್ಷ ಪ್ರಾಯದ ಗಂಡಾನೆ ಎಂದು ಅಂದಾಜಿಸಿದ್ದಾರೆ.

ವೈದ್ಯಾಧಿಕಾರಿ ಡಾ ಚಿಟ್ಟಿಯಪ್ಪ ಆನೆ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಜೆಸಿಬಿ ಯಂತ್ರ ಬಳಸಿ ಗುಂಡಿ ತೋಡಿ ಸ್ಥಳದಲ್ಲೇ ಅಂತ್ಯಸAಸ್ಕಾರ ಮಾಡಲಾಯಿತು. ಆನೆಯ ದಂತವನ್ನು ವಶಪಡಿಸಿಕೊಳ್ಳಲಾಗಿದೆ.

ಸ್ಥಳದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್. ಮೂರ್ತಿ, ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶರಣಬಸಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ. ನೆಹರು, ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಕಳ್ಳಿರ ಎಂ. ದೇವಯ್ಯ, ಉಪವಲಯ ಅರಣ್ಯಾ ಧಿಕಾರಿ ಸಂಜಿತ್ ಸೋಮಯ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು.

-ಮುಬಾರಕ್