ಮಡಿಕೇರಿ, ಜೂ. ೪: ರೈತರು ಫ್ರೂಟ್ಸ್ ತಂತ್ರಾAಶದ ಮೂಲಕ ಕಾಫಿ ಬೆಳೆ ಸಾಲ ಪಡೆ ಯುವಲ್ಲಿ ಮುಂದ್ರಾAಕ ಶುಲ್ಕದಿಂದ ವಿನಾಯಿತಿ ಕೊಡಿಸುವ ನಿಟ್ಟಿನಲ್ಲಿ ಕಾಫಿ ಬೆಳೆಯನ್ನು ಕೃಷಿ ಪರಿವಿಧಿಯಡಿಗೆ ತರುವ ಬೇಡಿಕೆಗೆ ಇನ್ನೂ ಯಾವುದೇ ಸ್ಪಂದನೆ ದೊರೆತಿಲ್ಲ.

೧೮-೧೦-೨೦೨೧ರಲ್ಲಿ ಸರಕಾರ ಫ್ರೂಟ್ಸ್ ತಂತ್ರಾAಶವನ್ನು ಜಾರಿಗೊಳಿಸಿದ್ದು, ಇದರಂತೆ ಕಾಫಿ ಬೆಳೆಗಾರರು ಬೆಳೆ ಸಾಲ ಪಡೆಯಲು ಮುದ್ರಾಂಕ ಶುಲ್ಕ ಪಾವತಿ ಮಾಡಬೇಕಾಗಿದೆ. ಡಿ.ಸಿ.ಸಿ. ಬ್ಯಾಂಕ್ ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರಿಯಾಯಿತಿ ಬಡ್ಡಿ ದರದಲ್ಲಿ ಹಾಗೂ ರೂ.೩ ಲಕ್ಷದ ತನಕ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ಸೌಲಭ್ಯವಿದ್ದರೂ ಫ್ರೂಟ್ಸ್ನ ನಿಯಮಾವಳಿ ಪಾಲಿಸಬೇಕಿದೆ.

ಈ ತಂತ್ರಾAಶದAತೆ ಬೆಳೆ ಸಾಲ ಪಡೆಯಲು ರೈತರು ಹೊಂದಿರುವ ಬೆಳೆ ಆಧಾರಿತ ಸ್ಥಿರಾಸ್ತಿಯ ಆರ್.ಟಿ.ಸಿ. ದಾಖಲೆಯಲ್ಲಿ ನಮೂನೆ-೩ರ ನೋಂದಣಿ ಕಡ್ಡಾಯವಾಗಿದೆ. ಆದರೆ ನಮೂನೆ-೩ರ ನೋಂದಣಿ ಪ್ರಕ್ರಿಯೆ ಹಂತದಲ್ಲಿ ಕಾಫಿ ಬೆಳೆಗೆ ಮುದ್ರಾಂಕ ಶುಲ್ಕದಿಂದ ವಿನಾಯಿತಿ ಇಲ್ಲ. ಈ ಹಿನ್ನೆಲೆಯಲ್ಲಿ ಕಾಫಿ ಬೆಳೆಯನ್ನು ಕೃಷಿ ಪರಿವಿಧಿಯಡಿಗೆ ತರುವುದರ ಮೂಲಕ ಮುದ್ರಾಂಕ ಶುಲ್ಕ ಪಾವತಿಗೆ ವಿನಾಯಿತಿ ಸಿಗುವಂತೆ ಮಾಡಿಕೊಡಬೇಕೆಂಬ ಬೇಡಿಕೆಯನ್ನು ಸರಕಾರದ ಮುಂದಿಡಲಾಗಿತ್ತು. ಈ ಬಗ್ಗೆ ಡಿ.ಸಿ.ಸಿ. ಬ್ಯಾಂಕ್‌ನ ಮೂಲಕವೂ ಈ ಹಿಂದೆಯೇ ಆಗಿನ ಸರಕಾರ ಹಾಗೂ ಜನಪ್ರತಿನಿಧಿಗಳಿಗೆ ವಿವರ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಬಗ್ಗೆ ರಾಜ್ಯ ಸರಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೂ ಈ ಬಗ್ಗೆ ಮನವಿಯನ್ನು ಸಲ್ಲಿಸಲಾಗಿತ್ತು. ಇದರಂತೆ ಕಳೆದ ೨೯-೧೧-೨೦೨೨ರಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನೋಂದಣಿ ಮತ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರ ಕಚೇರಿಯಿಂದ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಇವರಿಗೆ ಪತ್ರ ಬರೆಯಲಾಗಿತ್ತು. ಇದರಲ್ಲಿ ಕರ್ನಾಟಕ ಅಗ್ರಿಕಲ್ಚರಲ್ ಕ್ರೆಡಿಟ್ ಆಪರೇಷನ್ಸ್ ಅಂಡ್ ಮಿಸಲೇನಿಯಸ್ ಪ್ರಾವಿಷನ್ಸ್ ಆ್ಯಕ್ಟ್ನ ಅಡಿಯಲ್ಲಿ ಕಾಫಿ ಬೆಳೆಯನ್ನು ಅಗ್ರಿಕಲ್ಚರಲ್ ಪರಿವಿಧಿಯಡಿಯಲ್ಲಿ ತಂದಲ್ಲಿ ವಿನಾಯಿತಿ ಸಂಬAಧ ಸೂಕ್ತ ಕ್ರಮ ಕೈಗೊಳ್ಳಬಹುದಾಗಿದೆ ಎಂಬ ಮಾಹಿತಿಯನ್ನು ಉಲ್ಲೇಖಿಸಲಾಗಿತ್ತು. ಮುದ್ರಾಂಕ ಇಲಾಖೆಯ ಮೂಲಕ ಹಾಗೂ ಕೊಡಗು ಡಿ.ಸಿ.ಸಿ ಮೂಲಕ ಸಲ್ಲಿಕೆಯಾಗಿದ್ದ ಮನವಿಯಂತೆ ಕೃಷಿ ಆಯುಕ್ತಾಲಯವು ಇದೀಗ ೨೪-೪-೨೦೨೩ರಲ್ಲಿ ತೋಟಗಾರಿಕಾ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದು, ಕಾಫಿ ಬೆಳೆಯು ಪ್ಲಾಂಟೇಷನ್ ಕ್ರಾಪ್ (ತೋಟಗಾರಿಕಾ ಬೆಳೆ) ಆಗಿದ್ದು, ಕೃಷಿ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ಸದರಿ ಮನವಿಯನ್ನು ಮುಂದಿನ ಕ್ರಮಕ್ಕೆ ಕಳುಹಿಸಿದೆ ಎಂದಷ್ಟೆ ಸೂಚಿಸಿದೆ. ಇದೀಗ ಈ ಹಂತದಲ್ಲಿ ಪ್ರಕ್ರಿಯೆ ಬಾಕಿ ಉಳಿದಿದೆ.