ಮಡಿಕೇರಿ, ಜೂ. ೫: ಕೊಡಗು ವಿಶ್ವವಿದ್ಯಾನಿಲಯ, ಸಮಾಜ ಕಾರ್ಯ ಅಧ್ಯಯನ ವಿಭಾಗ, ಜ್ಞಾನ ಕಾವೇರಿ, ಚಿಕ್ಕ ಅಳುವಾರ ವತಿಯಿಂದ ಗ್ರಾಮೀಣ ಅಧ್ಯಯನ ಶಿಬಿರವು ಜೂ.೬ ರಿಂದ ೧೨ ರವರೆಗೆ ಪೊನ್ನಂಪೇಟೆ ತಾಲೂಕಿನ ಕೋತೂರು ಬಳಿಯ ವಾಲ್ಮೀಕಿ ಗಿರಿಜನ ಆಶ್ರಮ ಶಾಲೆಯಲ್ಲಿ ನಡೆಯಲಿದೆ.

ಜೂ.೬ ರಂದು ಮಧ್ಯಾಹ್ನ ೩ ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಅಶೋಕ ಆಲೂರ, ಕೊಡಗು ವಿಶ್ವವಿದ್ಯಾನಿಲಯ ನಿರ್ದೇಶಕರಾದ ಪ್ರೊ.ಕೆ.ಕೆ. ಧರ್ಮಪ್ಪ, ಐಟಿಡಿಪಿ ತಾಲೂಕು ಅಧಿಕಾರಿ ಡಿ.ಜಿ. ಗುರುಶಾಂತಪ್ಪ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ. ಎಂ.ಜಡೇಗೌಡ, ನಾಲ್ಕೇರಿ ಗ್ರಾ.ಪಂ. ಉಪಾಧ್ಯಕ್ಷ ಸಚಿನ್ ಪೆಮ್ಮಯ್ಯ ಚಿರಿಯಪಂಡ, ವಾಲ್ಮೀಕಿ ಗಿರಿಜನ ಆಶ್ರಮ ಶಾಲೆಯ ಮುಖ್ಯ ಶಿಕ್ಷಕರಾದ ಪ್ರಶಾಂತ್ ಕುಮಾರ್ ಇತರರು ಪಾಲ್ಗೊಳ್ಳಲಿದ್ದಾರೆ.