ಕಣಿವೆ, ಜೂ. ೩ : ಶನಿವಾರ ಸುರಿದ ಗಾಳಿ ಮಳೆಗೆ ಸಿಲ್ವರ್ ಮರವೊಂದು ಮನೆಯ ಮೇಲೆ ಬಿದ್ದು ಹಾನಿ ಸಂಭವಿಸಿದೆ.
ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಾಜೆಹಳ್ಳದ ಎಮ್. ಹೆಚ್. ಮೊಹಮ್ಮದ್ ಅವರ ಮನೆಗೆ ಹಾನಿ ಉಂಟಾಗಿದ್ದು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧÀ್ಯಕ್ಷ ಚೆಟ್ಟಡ್ಕ ಎಲ್. ವಿಶ್ವ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು ಹಾಗೂ ಪಂಚಾಯಿತಿ ಕಾರ್ಯದರ್ಶಿ ಶೇಷಗಿರಿ ಮತ್ತು ಸಿಬ್ಬಂದಿ ರಂಜಿತ್ ಇದ್ದರು.