ವೀರಾಜಪೇಟೆ, ಜೂ. ೩: ವೀರಾಜಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪ್ರಮುಖ ಮೂಲವಾದ ಬೇತ್ರಿ ಪಂಪ್ ಹೌಸ್‌ಗೆ ಕಳೆದ ಎರಡು ದಿನಗಳ ಹಿಂದೆ ಸಿಡಿಲು ಬಡಿದು ಎಲೆಕ್ಟಿçಕ್ ಉಪಕರಣಗಳು ಸುಟ್ಟು ಹೋಗಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ಸ್ಥಳೀಯ ಎಲೆಕ್ಟಿçಕ್ ವೈಂಡರ್‌ಗಳಿAದ ದುರಸ್ತಿ ಮಾಡಲಾಗಿದೆ. ಹೆಚ್ಚಿನ ಮೈಸೂರಿನಿಂದ ತಂತ್ರಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ.

ಎರಡು ದಿನಗಳ ಕಾಲ ಪುರಸಭೆ ಮುಖ್ಯಾಧಿಕಾರಿಗಳು, ಅಭಿಯಂತರರು ಸಿಬ್ಬಂದಿಗಳೊAದಿಗೆ ಹಾಜರಿದ್ದು ತಡರಾತ್ರಿವರೆಗೂ ದುರಸ್ಥಿಕಾರ್ಯ ಮಾಡಲು ಹರಸಾಹಸಪಟ್ಟರೂ ಸಾಧ್ಯವಾಗಲಿಲ್ಲ.

ವೀರಾಜಪೇಟೆಯಿಂದ ಬೇತ್ರಿ ಪಂಪ್ ಹೌಸ್‌ಗೆ ಪೂರೈಕೆಯಾಗುವ ವಿದ್ಯುತ್ ಸಮಸ್ಯೆಯಿಂದ ಸರಿಯಾದ ಸಮಯಕ್ಕೆ ದುರಸ್ತಿ ಕಾರ್ಯ ಕೈಗೊಳ್ಳಲಾಗದೆ ಸ್ವಲ್ಪ ಹಿನ್ನಡೆಯಾಗಿದೆ. ಇದೀಗ ಜನರೇಟರ್ ಬಳಕೆ ಹಾಗೂ ಮಡಿಕೇರಿ ವಿಭಾಗದ ವಿದ್ಯುತ್ ಸರಬರಾಜಿನ ಮೂಲಕ ಕೆಲಸ ನಿರ್ವಹಿಸಲಾಗುತ್ತಿದೆ. ದುರಸ್ತಿ ಕಾರ್ಯ ಪೂರ್ಣಗೊಂಡ ತಕ್ಷಣ ಪಟ್ಟಣಕ್ಕೆ ನೀರು ಪೂರೈಸಲಾಗುವುದು. ಹಂತಹAತವಾಗಿ ನೀರು ಒದಗಿಸಲಾಗಿದೆ. ಅನಿವಾರ್ಯವಾದರೆ ಟ್ಯಾಂಕರ್ ಮೂಲಕ ಇನ್ನಷ್ಟು ನೀರು ಒದಗಿಸಲಾಗುತ್ತದೆ. ಪಟ್ಟಣದಲ್ಲಿನ ಬಾವಿ, ಕೊಳವೆ ಬಾವಿಗಳಲ್ಲಿ ನೀರಿನ ಕೊರತೆ ಕಾಡುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿಗಳು ‘ಶಕ್ತಿ’ಗೆ ಪ್ರತಿಕ್ರಿಯಿಸಿದರು.