ಹೆಬ್ಬಾಲೆ, ಜೂ. ೪: ತಾಲೂಕಿನ ಹೆಬ್ಬಾಲೆ ಕ್ಲಸ್ಟರ್ ವ್ಯಾಪ್ತಿಯ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಬುಧವಾರ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಅಂದೋಲನ ಕಾರ್ಯ ಕ್ರಮಕ್ಕೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಲ್.ರಮೇಶ ಚಾಲನೆ ನೀಡಿದರು.
ಶಾಲೆಗೆ ಆಗಮಿಸಿದ ಮಕ್ಕಳಿಗೆ ವಿದ್ಯಾಸಂಸ್ಥೆಯ ಅಧ್ಯಕ್ಷರು, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು, ಸಿಹಿ, ಪುಷ್ಪ ಹಾಗೂ ಪುಸ್ತಕ ನೀಡಿ ಸ್ವಾಗತಿಸಿದರು.
ಶಾಲಾ ಆಡಳಿತ ಮಂಡಳಿ ಸದಸ್ಯರು ಮತ್ತು ಶಿಕ್ಷಕರು ಹಾಗೂ ಮಕ್ಕಳು ಜಾಥಾ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿ ಸಿದರು. ಈ ಸಂದರ್ಭ ಮಾತನಾಡಿದ ಹೆಚ್.ಎಲ್.ರಮೇಶ, ಸರ್ಕಾರಿ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ದೊಂದಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡಲಾಗುತ್ತಿದೆ. ಜೊತೆಗೆ ಸಮವಸ್ತç, ಪಠ್ಯ ಪುಸ್ತಕ, ಸೈಕಲ್, ಬಿಸಿ ಊಟ ಸೇರಿದಂತೆ ಹಲ ವಾರು ಉಚಿತ ಸೌಲಭ್ಯಗಳನ್ನು ನೀಡ ಲಾಗುತ್ತಿದ್ದು, ಈ ಎಲ್ಲಾ ಸೌಲಭ್ಯ ಗಳನ್ನು ಸದುಪಯೋಗಪಡಿಸಿ ಕೊಂಡು ಉತ್ತಮ ಶಿಕ್ಷಣ ಪಡೆಯ ಬೇಕು ಎಂದರು. ಈ ಸಂದರ್ಭ ಮುಖ್ಯ ಶಿಕ್ಷಕ ಎನ್.ಬಸವರಾಜಶೆಟ್ಟಿ, ಮೆ.ನಾ. ವೆಂಕಟನಾಯ್ಕ, ಡಿ.ಕವಿತಾ, ಸಿ.ಡಿ.ಲೋಕೇಶ, ಬೋಜೇಗೌಡ, ಎಂ.ಆರ್.ಯೋಗೇಶ ಮತ್ತು ಉಪನ್ಯಾ ಸಕರು, ಪೋಷಕರು, ಪ್ರಾಂಶುಪಾಲ ಎನ್.ಎನ್.ಧರ್ಮಪ್ಪ ಇದ್ದರು.