ಮಡಿಕೇರಿ, ಜೂ. ೪: ಜಿಲ್ಲೆಯ ಹಲವು ಇನ್ಸ್ಪೆಕ್ಟರ್‌ಗಳನ್ನು ವರ್ಗಾವಣೆ ಹಾಗೂ ಇತರೆಡೆಗಳಿಂದ ಜಿಲ್ಲೆಗೆ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.

ಚುನಾವಣೆ ಹಿನ್ನೆಲೆ ನಡೆದಿದ್ದ ಪ್ರಕ್ರಿಯೆಯಲ್ಲಿ ವರ್ಗಾವಣೆ ನಡೆದಿತ್ತು. ಮೈಸೂರು ನಗರ ಅಪರಾಧ ಪತ್ತೆ ವಿಭಾಗದ ೨ ರಿಂದ ಮಡಿಕೇರಿ ಗ್ರಾಮಾಂತರ ವಿಭಾಗಕ್ಕೆ ಪಿ. ಅನೂಪ್ ಮಾದಪ್ಪ, ಚಾಮರಾಜನಗರ ನಗರ ಠಾಣೆಯಿಂದ ಸಿ.ಎ. ಮಂಜಪ್ಪ ಕುಟ್ಟ ಠಾಣೆಗೆ, ಮೈಸೂರಿನ ಜಯಲಕ್ಷಿö್ಮÃಪುರಂ ಠಾಣೆಯಿಂದ ಎಂ.ವಿ. ಗೋವಿಂದರಾಜು ಗೋಣಿಕೊಪ್ಪಲುವಿಗೆ, ಸಂತೆಮಾರನಹಳ್ಳಿಯಿAದ ಪರಶಿವಮೂರ್ತಿ ಶನಿವಾರಸಂತೆ ಠಾಣೆಗೆ, ಮೈಸೂರು ನಗರದ ಸ್ಪೆಷಲ್ ಬ್ರಾಂಚ್‌ನಿAದ ಮೇದಪ್ಪ ಕೊಡಗು ಜಿಲ್ಲಾ ಸ್ಪೆಷಲ್ ಬ್ರಾಂಚ್‌ಗೆ ವರ್ಗಾವಣೆಗೊಂಡಿದ್ದಾರೆ.

ಮಡಿಕೇರಿ ಗ್ರಾಮಾಂತರ ಠಾಣೆಯಿಂದ ಜಿ. ಶೇಖರ್ ಅವರು ಮೈಸೂರು ನಗರ ಅಪರಾಧ ಪತ್ತೆ ವಿಭಾಗಕ್ಕೆ - ೧ಕ್ಕೆ, ಕುಟ್ಟ ಠಾಣೆಯಿಂದ ಬಿ.ಎಸ್. ರವಿಶಂಕರ್ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ, ಕುಶಾಲನಗರದಿಂದ ಜಿ.ಎನ್. ಶ್ರೀಕಾಂತ್ ಮೈಸೂರಿನ ಅಲನಹಳ್ಳಿಗೆ, ಗೋಣಿಕೊಪ್ಪಲುವಿನಿಂದ ಕೆ.ಎಂ. ವಸಂತ್ ಚೆನ್ನರಾಯಪಟ್ಟಣಕ್ಕೆ, ಶನಿವಾರಸಂತೆಯಿAದ ಎಸ್. ನಾಗೇಶ್ ಮೈಸೂರಿನ ಮಂಡಿ ಠಾಣೆಗೆ ವರ್ಗಾವಣೆಗೊಳಿಸಿ ಡಿ.ಜಿ ಮತ್ತು ಐಜಿಪಿ ಉಮೇಶ್‌ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.