ಮಡಿಕೇರಿ, ಜೂ. ೪: ಉಡೋತ್ ಮೊಟ್ಟೆಯ ಶ್ರೀ ಆಧಿಶಕ್ತಿ ದೇವಿಯ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲ ಶೋತ್ಸವವು ತಾ.೭ ರಿಂದ ೯ರವರೆಗೆ ನಡೆಯಲಿದೆ. ಶ್ರೀ ವೇದಮೂರ್ತಿ ವೇದವ್ಯಾಸ ತಂತ್ರಿಗಳ ಮಾರ್ಗ ದರ್ಶನದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿದೆ.

ತಾ.೭ ರಂದು ಬೆಳಿಗ್ಗೆ ೯ ಗಂಟೆಗೆ ಮಹಾಪ್ರಾರ್ಥ£,ೆ ಸ್ವಸ್ತಿ ಪುಣ್ಯಾಹ ವಾಚನ, ಗಣಪತಿ ಹೋಮ, ಕಂಕಣ ಬಂಧನ, ಉಗ್ರಾಣ ಪೂಜೆ ನಡೆಯಲಿದ್ದು, ಮಧ್ಯಾಹ್ನ ಅನ್ನದಾನ ನೆರವೇರಲಿದೆ.

ಸಂಜೆ ೪.೩೦ ರಿಂದ ಕಳಶ ಮೆರವಣಿಗೆ ಹಾಗೂ ಹೊರೆಕಾಣಿಕೆ, ೫.೩೦ಕ್ಕೆ ಬಿಂಬ ಶುದ್ಧಿ, ಬಿಂಬ ಶುದ್ಧಿ ಹೋಮ, ಆಧಿವಾಸ ಹೋಮ, ಆಧಿವಾಸ ಪೂಜೆ, ಪ್ರಸಾದ ಶುದ್ಧಿ ಹಾಗೂ ಮಹಾಪೂಜೆ ನಡೆಯಲಿದೆ.

ತಾ.೮ ರಂದು ಬಿಂಬದಲ್ಲಿ ತತ್ವನ್ಯಾಸ ಮತ್ತು ತತ್ವನ್ಯಾಸ ಹೋಮ, ಬಿಂಬ ಆಧಿವಾಸ ಪೂಜೆ, ಧಾನ್ಯಾದಿವಾಸ ನೆರವೇರಲಿದ್ದು, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ಹಾಗೂ ಅನ್ನದಾನ ಜರುಗಲಿದೆ. ಸಂಜೆ ೫.೩೦ ರಿಂದ ಕಳಸ ಪ್ರತಿಷ್ಠೆ, ಕಳಶಾಧಿವಾಸ ಹೋಮ, ವಾಸ್ತು ರಾಕ್ಷೆÆÃಘ್ನ ಹೋಮ, ಬಿಂಬ ಶಯ್ಯಾದಿವಾಸ ಪೂಜೆ ನಡೆಯಲಿದೆ. ರಾತ್ರಿ ೭ ಗಂಟೆಗೆ ಮಕ್ಕಳಿಂದ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, ೯ ಗಂಟೆಗೆ ಮಹಾಪೂಜೆ ನೆರವೇರಲಿದೆ.

ತಾ.೯ ರಂದು ಬೆಳಿಗ್ಗೆ ೬.೩೦ಕ್ಕೆ ಪ್ರತಿಷ್ಠಾ ಪ್ರಧಾನ ಹೋಮ, ೮.೩೫ಕ್ಕೆ ದೇವಿಯ ಪುನರ್‌ಪ್ರತಿಷ್ಠೆ, ದುರ್ಗಾಹೋಮ, ದೇವರಿಗೆ ಪ್ರಸನ್ನ ಪೂಜೆ, ಬ್ರಹ್ಮಕಲಶಾಭಿಷೇಕ ಸೇವೆಯ ಪೂಜೆಗಳು ನಡೆಯಲಿದ್ದು, ೧೨.೩೦ಕ್ಕೆ ಮಹಾ ಮಂಗಳಾರತಿ, ೧ ಗಂಟೆಗೆ ಅನ್ನದಾನ ಸೇವೆ ಜರಗಲಿದೆ.