ಚೆಯ್ಯಂಡಾಣೆ, ಜೂ. ೪: ವೀರಾಜಪೇಟೆ ರೇಂಜ್ ಜಂಯ್ಯತುಲ್ ಮುಅಲ್ಲಿಮೀನ್ ವಾರ್ಷಿಕ ಮಹಾಸಭೆ ಗೋಣಿಕೊಪ್ಪ ಮದರಸದಲ್ಲಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಸ್ಥಳೀಯ ಖತೀಬ್ ಮುಹಮ್ಮದಲಿ ಫೈಝಿ ಸಭೆಯನ್ನು ಉದ್ಘಾಟಿಸಿದರು. ನಂತರ ೨೦೨೩-೨೪ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎಂ. ಅಬ್ದುಲ್ ರೆಹಮಾನ್ ಮುಸ್ಲಿಯಾರ್, ಉಪಾಧ್ಯಕ್ಷರಾಗಿ ಪಿ.ಬಿ. ಇಸ್ಮಾಯಿಲ್ ಮುಸ್ಲಿಯಾರ್ ಹಾಗೂ ಎಂ.ಸಿ. ಅಶ್ರಫ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಹನೀಫ್ ಫೈಝಿ, ಸಹ ಕಾರ್ಯದರ್ಶಿಯಾಗಿ ಮುಹಮ್ಮದ್ ಶುಹೈಬ್ ಫೈಝಿ ಹಾಗೂ ರಫೀಕ್ ಬಾಖವಿ, ಕೋಶಾಧಿಕಾರಿಯಾಗಿ ಕೆ.ಪಿ. ಅಬೂಬಕ್ಕರ್ ಮುಸ್ಲಿಯಾರ್, ಪರೀಕ್ಷಾ ಬೋರ್ಡ್ ಚೆರ್ಮೆನ್‌ರಾಗಿ ಅಬ್ದುಲ್ಲ ಮುಸ್ಲಿಯಾರ್, ಪರೀಕ್ಷಾ ಬೋರ್ಡ್ ವೈಸ್ ಚೇರ್ಮೆನ್‌ರಾಗಿ ರಶೀದ್ ದಾರಿಮಿ, ಐಟಿ ಕೋಡಿನೆಟರ್ ಆಗಿ ಮಜೀದ್ ಬಾಖವಿ, ಮುಸಾಬಕ ಚೇರ್ಮೆನ್‌ರಾಗಿ ರಶೀದ್ ದಾರಿಮಿ, ಮುಸಾಬಕ ಕನ್ವಿನರ್ ಜುನೈದ್ ಫೈಝಿ, ಎಸ್‌ಕೆಎಸ್‌ಬಿವಿ ಚೇರ್ಮೆನ್ ಅಬ್ದುಲ್ ಹಕೀಂ ಅಲ್ ಹಿಶಾಮಿ, ಎಸ್‌ಕೆಎಸ್‌ಬಿವಿ ಕನ್ವಿನರ್ ಸಹದ್ ಫೈಝಿ, ಮುಹಲಿಮ್ ಡೇ ಕನ್ವಿನರ್ ಮುಹಮ್ಮದ್ ರೌಫ್ ಹುದವಿ ಇವರುಗಳÀನ್ನು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿ ಅಶ್ರಫ್ ಮುಸ್ಲಿಯಾರ್ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್ ಫೈಝಿ ವಂದಿಸಿದರು.