ಸೋಮವಾರಪೇಟೆ, ಜೂ. ೩: ಇಲ್ಲಿನ ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ೨೦೨೩-೨೪ ನೇ ಸಾಲಿಗೆ ಪ್ರಥಮ ಬಿ.ಎ. ಮತ್ತು ಬಿ.ಕಾಂ. ತರಗತಿಗಳಿಗೆ ಪ್ರವೇಶಾತಿ ಆರಂಭಗೊAಡಿದ್ದು, ಕಾಲೇಜಿನ ಕಚೇರಿ ವೇಳೆಯಲ್ಲಿ ಅರ್ಜಿ ಪಡೆದು ಪ್ರವೇಶ ಪಡೆಯಬಹುದಾಗಿದೆ.

ಕಾಲೇಜಿನಲ್ಲಿ ಎಲ್ಲಾ ವಿಷಯಗಳಿಗೂ ಪೂರ್ಣಕಾಲಿಕ ಪ್ರಾಧ್ಯಾಪಕರು, ಗ್ರಂಥಪಾಲಕರು, ದೈಹಿಕ ಶಿಕ್ಷಣ ನಿರ್ದೇಶಕರನ್ನು ಒಳಗೊಂಡಿದ್ದು, ಕಾಲೇಜಿನಲ್ಲಿ ಸರ್ಕಾರದ ಸೌಲಭ್ಯಗಳಾದ ಶುಲ್ಕ ವಿನಾಯಿತಿ, ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ, ಕಂಪ್ಯೂಟರ್ ಲ್ಯಾಬ್ ಶಿಕ್ಷಣ ತರಬೇತಿ ಲಭ್ಯವಿದೆ.

ಹೆಚ್ಚಿನ ಮಾಹಿತಿಗೆ ಮೊ: ೯೫೯೧೧೬೩೮೦೮, ೯೫೯೦೪೩೩೪೨೦, ೯೬೨೦೬೦೨೭೬, ೯೪೮೦೦೦೭೨೪೯ಅನ್ನು ಸಂಪರ್ಕಿಸಬಹುದು ಎಂದು ಕಾಲೇಜಿನ ಪ್ರಾಂಶುಪಾಲರಾದ ಧನಲಕ್ಷಿö್ಮ ಅವರು ತಿಳಿಸಿದ್ದಾರೆ.