ಮಡಿಕೇರಿ, ಜೂ. ೪: ಜಿಲ್ಲೆಯ ಹೊಸ್ಕೇರಿ ಗ್ರಾ.ಪಂ. ವ್ಯಾಪ್ತಿಯ ಅರೆಕಾಡು, ನೇತಾಜಿ ನಗರಕ್ಕೆ ಕಳೆದ ಒಂದು ವಾರದಿಂದ ಸೆಸ್ಕ್ನಿಂದ ಅಳವಡಿಸಲಾದ ಟಿಸಿ ಚಾರ್ಜ್ ಮಾಡಲು ವಿಳಂಬವಾದ ಕಾರಣ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು, ಆ ದಿಸೆಯಲ್ಲಿ ಗುರುವಾರದಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾ.ಪಂ. ಪಿಡಿಒ ತಿಳಿಸಿದ್ದಾರೆ.

ಸ್ಥಳೀಯ ವ್ಯಾಪ್ತಿಯಲ್ಲಿ ಮತ್ತೊಂದು ವಿದ್ಯುತ್ ಪರಿವರ್ತಕ ಅಳವಡಿಸಲಾಗಿದೆ ಎಂದು ಗ್ರಾ.ಪಂ. ಅಧಿಕಾರಿ ಹಾಗೂ ಸೆಸ್ಕ್ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.