ಶನಿವಾರಸAತೆ, ಜೂ. ೪: ಸಮೀ ಪದ ಕೊಡ್ಲಿಪೇಟೆಯ ಕಲ್ಲುಮಠದ ಎಸ್.ಕೆ.ಎಸ್. ವಿದ್ಯಾಸಂಸ್ಥೆಯಲ್ಲಿ ೨೦೨೩-೨೦೨೪ರ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ ವಿಜೃಂ ಭಣೆಯಿಂದ ನೆರವೇರಿತು.

ಶಾಲಾ ಆವರಣವನ್ನು ತಳಿರು ತೋರಣ, ಹೂವಿನ ಹಾರದಿಂದ ಅಲಂಕರಿಸಲಾಗಿತ್ತು. ಶಾಲೆಗೆ ಸಂತಸದಿAದ ಬಂದ ವಿದ್ಯಾರ್ಥಿಗಳ ಕೈಗೆ ಹೂ ನೀಡಿ ಸ್ವಾಗತಿಸಲಾಯಿತು.

ಮಠಾಧೀಶ ಹಾಗೂ ವಿದ್ಯಾ ಸಂಸ್ಥೆಯ ಅಧ್ಯಕ್ಷ ಮಹಾಂತ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಖರ್ಜೂರ, ಬಾದಾಮಿ, ದ್ರಾಕ್ಷಿ, ಗೋಡಂಬಿ ಹಂಚಿ ಶಾಲಾರಂಭಕ್ಕೆ ಚಾಲನೆ ನೀಡಿದರು.

ನಂತರ ಅವರು ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಜೀವನ ಹಂತದಲ್ಲೇ ಶಿಸ್ತು, ಸಂಯಮವನ್ನು ಮೈಗೂಡಿಸಿಕೊಂಡರೆ ಮುಂದೆ ಸಮಾಜದಲ್ಲಿ ಉತ್ತಮ ನಾಗರಿಕರಾಗಬಹುದು. ಆರಂಭದಲ್ಲೇ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸಿ ಕೊಳ್ಳಬೇಕು. ಆರೋಗ್ಯದ ಬಗ್ಗೆ ಕಾಳಜಿ ತೋರಬೇಕು ಎಂದರು.

ವಿದ್ಯಾಸAಸ್ಥೆ ಆಡಳಿತಾಧಿಕಾರಿ ಬಿ.ಎಸ್.ಪ್ರದೀಪ್, ಮುಖ್ಯಶಿಕ್ಷಕ ಎಚ್.ಎಂ.ಅಭಿಲಾಷ್, ಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.