ಮಡಿಕೇರಿ, ಜೂ. ೪: ವಿಶ್ವ ಪರಿಸರ ದಿನದ ಅಂಗವಾಗಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಮೂರ್ನಾಡುವಿನಿಂದ ಮಡಿಕೇರಿ ತನಕ ತಾ.೫ರಂದು (ಇಂದು) ಸೈಕಲ್ ಜಾಥಾ ನಡೆಯಲಿದೆ. ಮೂರ್ನಾಡುವಿನಿಂದ ಸೈಕ್ಲಿಂಗ್ ಮೂಲಕ ಬೆಳಿಗ್ಗೆ ೭.೩೦ಕ್ಕೆ ಮಡಿಕೇರಿಯ ಫೀ.ಮಾ. ಕಾರ್ಯಪ್ಪ ವೃತ್ತಕ್ಕೆ ಆಗಮಿಸಲಾಗುವುದು. ಈ ಸಂದರ್ಭ ಪರಿಸರ ಮಾಲಿನ್ಯ ತಡೆ ಕುರಿತು ಜಾಗೃತಿ ಮೂಡಿಸಲಾಗುವುದು.
ಜಾಥಾಕ್ಕೆ ಕ್ಲೀನ್ ಕೂರ್ಗ್ ಇನಿಶೇಟಿವ್, ಮಡಿಕೇರಿ ನಗರಸಭೆ, ಮಡಿಕೇರಿ ಲಯನ್ಸ್ ಕ್ಲಬ್. ಗ್ರೀನ್ ಸಿಟಿ ಫೋರಂ, ರೋಟರಿ ಮಿಸ್ಟಿಹಿಲ್ಸ್, ಮಡಿಕೇರಿ ರೋಟರಿ ಕ್ಲಬ್, ರೋಟರಿ ವುಡ್ಸ್, ಇನ್ನರ್‌ವೀಲ್ಸ್, ರೆಡ್‌ಕ್ರಾಸ್ ಸಂಸ್ಥೆಗಳು ಬೆಂಬಲ ನೀಡುತ್ತಿವೆ.