ಸಿದ್ದಾಪುರ, ಜೂ. ೨: ಶುಕ್ರವಾರ ಮಧ್ಯಾಹ್ನ ಸುರಿದ ಭಾರಿ ಮಳೆ ಹಾಗೂ ಸಿಡಿಲಿಗೆ ಗಬ್ಬದ ಹಸುವೊಂದು ಸಾವನ್ನಪ್ಪಿದ ಘಟನೆ ನಡೆದಿದೆ.

ಅಮ್ಮತ್ತಿ ಹೋಬಳಿಯ ಕರಡಿಗೋಡು ಗ್ರಾಮದ ಅಳಗರ್ ಎಂಬವರ ಗಬ್ಬದ ಹಸು ಸಾವನ್ನಪ್ಪಿದ್ದು, ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಮುತ್ತಪ್ಪ ಮತ್ತು ಓಮಪ್ಪ ಬಣಕಾರ್, ಪಶು ವೈದ್ಯಾಧಿಕಾರಿ ಡಾ. ನವೀನ್ ಕುಮಾರ್ ಭೇಟಿ ನೀಡಿದ್ದರು.