ಸೋಮವಾರಪೇಟೆ, ಜೂ. ೨: ವಾಸದ ಮನೆಗೆ ಸಿಡಿಲು ಬಡಿದು ಲಕ್ಷಾಂತರ ಮೌಲ್ಯದ ವಸ್ತುಗಳು ನಾಶವಾಗಿರುವ ಘಟನೆ ಸಮೀಪದ ಶಾಂತಳ್ಳಿ ಗ್ರಾಮದಲ್ಲಿ ನಡೆದಿದೆ.
ಶಾಂತಳ್ಳಿ ಗ್ರಾಮ ನಿವಾಸಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಅವರಿಗೆ ಸೇರಿದ ವಾಸದ ಮನೆಗೆ ನಿನ್ನೆ ರಾತ್ರಿ ೧೧.೩೦ರ ಸುಮಾರಿಗೆ ಸಿಡಿಲು ಬಡಿದ ಪರಿಣಾಮ, ವಿದ್ಯುತ್ ತಂತಿಗಳಲ್ಲಿ ಬೆಂಕಿ ಹೊತ್ತಿಕೊಂಡು ಮನೆಯನ್ನು ಆವರಿಸಿದೆ.
ಗುಡುಗು, ಮಿಂಚಿನೊAದಿಗೆ ಮಳೆ ಸುರಿಯುತ್ತಿದ್ದ ಸಂದರ್ಭವೇ ಸಿಡಿಲು ಬಡಿದಿದ್ದು, ಮನೆಯೊಳಗೆ ಇರಿಸಲಾಗಿದ್ದ ಎಲೆಕ್ಟಾçನಿಕ್ ವಸ್ತುಗಳು, ಪೀಠೋಪಕರಣಗಳು, ವಿದ್ಯುತ್ ತಂತಿ, ಮನೆಯ ಛಾವಣಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿವೆ.
ಘಟನೆಯ ಬಗ್ಗೆ ಕಂದಾಯ ಹಾಗೂ ವಿದ್ಯುತ್ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಸಿಡಿಲು ಬಡಿದ ಸಂದರ್ಭ ನಾವುಗಳು ಬೇರೆ ಕೊಠಡಿಯಲ್ಲಿದ್ದುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದೇವೆ. ಘಟನೆಯಿಂದ ರೂ. ೫ಲಕ್ಷಕ್ಕೂ ಅಧಿಕ ನಷ್ಟವಾಗಿರುವುದಾಗಿ ಎಸ್.ಜಿ. ಮೇದಪ್ಪ ತಿಳಿಸಿದ್ದಾರೆ.