ಮಡಿಕೇರಿ, ಜೂ.೨ : ಪೊನ್ನಂಪೇಟೆ ಮತ್ತು ವೀರಾಜಪೇಟೆ ೬೬/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತುರ್ತು ನಿರ್ವಹಣೆ ಕಾರ್ಯ ನಿರ್ವಹಿಸಬೇಕಿರುವುದರಿಂದ ಕ.ವಿ.ಪ್ರ.ನಿ.ನಿ. ಅವರ ಕೋರಿಕೆಯಂತೆ ತಾ. ೩ ರಂದು (ಇಂದು) ಬೆಳಗ್ಗೆ ೯.೩೦ ರಿಂದ ಸಂಜೆ ೪ ಗಂಟೆ ವರೆಗೆ ೬೬/೧೧ ಕೆವಿ ಪೊನ್ನಂಪೇಟೆ, ೬೬/೧೧ ಕೆವಿ ವೀರಾಜಪೇಟೆ, ೩೩/೧೧ ಕೆವಿ ಶ್ರೀಮಂಗಲ, ೩೩/೧೧ಕೆವಿ ಸಿದ್ದಾಪುರ ಹಾಗೂ ೩೩/೧೧ ಕೆವಿ ಮೂರ್ನಾಡು ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಪೊನ್ನಂಪೇಟೆ, ಗೋಣಿಕೊಪ್ಪಲು, ನಲ್ಲೂರು, ಹುದಿಕೇರಿ, ತಿತಿಮತಿ, ಹಾತೂರು, ಪಾಲಿಬೆಟ್ಟ, ಶ್ರೀಮಂಗಲ, ಬಾಳಲೆ, ಕಾನೂರು, ಬಿರುನಾಣಿ, ಕುಟ್ಟ ವೀರಾಜಪೇಟೆ, ಬಿ.ಶೆಟ್ಟಿಗೇರಿ, ಬೇತ್ರಿ, ಕಡಂಗಮರೂರು, ಕಾಕೋಟುಪರಂಬು, ಅಮ್ಮತ್ತಿ, ಸಿದ್ದಾಪುರ, ಮಾಲ್ದಾರೆ, ಮೂರ್ನಾಡು, ಮರಗೋಡು, ನಾಪೋಕ್ಲು, ಕಕ್ಕಬೆ, ಅರೆಕಾಡು, ಐಯ್ಯಂಗೇರಿ ಹಾಗೂ ಸುತ್ತಮುತ್ತಲ÷ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅನಿತಾ ಬಾಯಿ ಕೋರಿದ್ದಾರೆ. ಇಂದು ವಿದ್ಯುತ್ ವ್ಯತ್ಯಯ