ಸಮಾಜದಲ್ಲಿ ಎಲ್ಲೆಂದರಲ್ಲಿ ತಾರತಮ್ಯವೇ ಹೆಚ್ಚಾಗಿ ಮೇಳೈ ಸುತ್ತಿರುವದು ಸಹಜವೇ ಆಗಿದೆ. ಜಾತಿ, ಮತ, ಭೇದ., ಧರ್ಮ, ಲಿಂಗ ತಾರತಮ್ಯ., ವರ್ಣ ಪ್ರಭೇಧ.., ಹೀಗೇ ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಕೀಳಾಗಿ ಕಾಣುವವರೇ ಹೆಚ್ಚು.., ಎಲ್ಲರಿಗೂ ಅವರವರ ಜಾತಿ, ಧರ್ಮಗಳೇ ಮೇಲು., ಆದರೂ ತಾರತಮ್ಯವೆಂಬದು ಈ ಮಣ್ಣಿನ ಸಹಜ ಗುಣವೆಂಬAತೆ ಪೈಶಾಚಿಕ ನಡೆಯಂತೆ ಬೆಳೆಯುತ್ತಿದೆ..! ಎಲ್ಲರಿಗೂ ಅವರವರ ವೃತ್ತಿಯೇ ಮೇಲು., ಕಾಯಕದಲ್ಲಿ ಕೈಲಾ ಸವನ್ನು ಕಾಣುವ ಪ್ರವೃತ್ತಿಯವರು., ಎಲ್ಲರಿಗೂ ತಮ್ಮದೇ ಆದಂತಹ ಬೇರೆ ಬೇರೆ ಕೆಲಸಗಳಿರುತ್ತವೆ., ಎಲ್ಲ ಕೆಲಸಗಳಿಗೂ ಗೌರವವೆಂಬುದಿದೆ., ಅದೇ ರೀತಿ ಲೈಂಗಿಕ ಕಾರ್ಯ ಕರ್ತೆಯರದ್ದೂ ಒಂದು ರೀತಿಯ ಕೆಲಸವೇ ಆಗಿದೆ. ಆದರೆ., ಅದನ್ನು ಸಮಾಜದ ಕಣ್ಣು ಕೀಳಾಗಿ ಕಾಣುತ್ತಿರುವದಂತೂ ಸತ್ಯ..!

ಸಮಾಜದಲ್ಲಿ ಅನಾದರ ಕ್ಕೊಳಗಾಗಿ., ಮನೆಯವರಿಂದ ತಿರಸ್ಕರಿಸಲ್ಪಟ್ಟವರು., ತಮಗೆ ಬೇಕೆನಿ ಸಿದ ಸುಖ ಸಂತೋಷಗಳಿAದ ಬೇಸತ್ತವರು., ಕಾಮುಕರ ಕೆಂಗಣ್ಣಿಗೆ ಗುರಿಯಾಗಿ ಬಲಿಪಶುಗಳಾದವರು.., ಹೀಗೇ ಸಮಾಜದ ನಾನಾ ತೆರಗಳಲ್ಲಿ ವಕ್ರ ದೃಷ್ಟಿಗೆ ಗುರಿಯಾದವರು ಸಹಜವಾಗಿ ಲೈಂಗಿಕ ಕಾರ್ಯ ಕರ್ತೆಯರಾಗಿ ಜೀವನ ಸಾಗಿ ಸುತ್ತಿದ್ದಾರೆ. ಯಾರನ್ನೋ ತೃಪ್ತಿಪಡಿಸಲೋಸ್ಕರ., ಪರರ ಸಂತೋ ಷದೊಂದಿಗೆ ತಮ್ಮತನವನ್ನು ಕಳೆದು ಕೊಂಡು ತಮ್ಮ ಹಾಗೂ ಕುಟುಂಬದ ಜೀವನ ನಿರ್ವಹಣೆಯ ಜವಾಬ್ದಾರಿ ಯನ್ನೂ ಹೊತ್ತಿರುವ ಇವರುಗಳನ್ನು ಸಮಾಜದಲ್ಲಿ ಕೀಳಾಗಿ ಕಾಣಲಾಗುತ್ತಿದೆ..!

ಇವರುಗಳಿಗೂ ಜೀವವಿದೆ., ಜೀವನವಿದೆ., ಇವರುಗಳಿಗೂ ಕಷ್ಟವಿದೆ., ಸಮಾಜದಲ್ಲಿ ಎಲ್ಲರಂತೆ ಜೀವಿಸುವ ಹಕ್ಕುಗಳಿವೆ ಎಂಬದನ್ನು ನಾಗರಿಕ ಸಮಾಜಕ್ಕೆ ತಿಳಿಯಪಡಿಸುವ ಸಲುವಾಗಿ ಅವರುಗಳಿಗಾಗಿಯೇ ಅಂರ‍್ರಾಷ್ಟಿçÃಯ ಲೈಂಗಿಕ ಕಾರ್ಯ ಕರ್ತರ ದಿನವನ್ನು ಆಚರಿಸಲಾಗುತ್ತಿದೆ. ಜೂನ್ ೨ ಅವರ ದಿನ..!

ಹೇಗೆ ಜಾರಿಯಾಯಿತು..?

ಲೈಂಗಿಕ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವರ ಮೂಲಭೂತ ಮಾನವ ಹಕ್ಕುಗಳನ್ನು ರಕ್ಷಿಸಲು ಪ್ರತಿ ವರ್ಷ ಜೂನ್ ೨ರಂದು ಅಂತರ‍್ರಾಷ್ಟಿçÃಯ ಲೈಂಗಿಕ ಕಾರ್ಯಕರ್ತರಕ ದಿನ (Iಟಿಣeಡಿಟಿಚಿಣioಟಿಚಿಟ sex ತಿoಡಿಞeಡಿs ಜಚಿಥಿ) ವನ್ನು ಆಚರಿಸಲಾಗುತ್ತದೆ.

ಪ್ರಪಂಚದಾದ್ಯAತ ಲೈಂಗಿಕ ಕಾರ್ಯಕರ್ತೆಯರನ್ನು ಗೌರವಿಸಲು ಮತ್ತು ಅವರ ಮೇಲಾಗುತ್ತಿರುವ ನಿಂದನೆ, ಅವಮಾನದ ಕುರಿತು ಗಮನ ಹರಿಸಲು ಅಂತರರಾಷ್ಟಿçÃಯ ಸೆಕ್ಸ್ ವರ್ಕರ್ಸ್ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ವೇಶ್ಯಾವಾಟಿಕೆಯನ್ನು ಸಾಮಾನ್ಯವಾಗಿ ಪ್ರಪಂಚದ ಅತ್ಯಂತ ಹಳೆಯ ವೃತ್ತಿ ಎಂದು ವಿವರಿಸಲಾಗುತ್ತದೆ. ಲೈಂಗಿಕ ಕೆಲಸದಲ್ಲಿ ತೊಡಗಿರುವವರು ಕಷ್ಟಗಳು ಮತ್ತು ಅವಮಾನಗಳನ್ನು ಎದುರಿಸುತ್ತಲೇ ಇರುತ್ತಾರೆ. ಅವರು ಅಪರಾಧೀಕರಣ, ಹಿಂಸಾಚಾರ, ತಾರತಮ್ಯ ಮತ್ತು ಇತರ ರೀತಿಯ ಮಾನವ ಹಕ್ಕುಗಳ (ಊumಚಿಟಿ ಖighಣs) ಉಲ್ಲಂಘನೆಗಳನ್ನು ಅನುಭವಿಸುತ್ತಾರೆ. ಹೀಗಾಗಿ ಈ ಬಗ್ಗೆ ಜಾಗೃತಿ ಮೂಡಿಸಲು ಅಂತಾ ರ‍್ರಾಷ್ಟಿçÃಯ ಸೆಕ್ಸ್ ವರ್ಕರ್ಸ್ ಡೇ ಆಚರಿಸಲು ನಿರ್ಧರಿಸಲಾಯಿತು.

ದಿನದ ಇತಿಹಾಸ

೧೯೭೫ರಲ್ಲಿ ಜೂನ್ ೨ರಂದು ಅಂತರರಾಷ್ಟಿçÃಯ ಲೈಂಗಿಕ ಕಾರ್ಯಕರ್ತರ ದಿನವನ್ನು ಆಚರಿಸಲು ಆರಂಭಿಸಲಾಯಿತು. ಸುಮಾರು ೧೦೦ ಲೈಂಗಿಕ ಕಾರ್ಯಕರ್ತರು ಫ್ರಾನ್ಸ್ನ ಲಿಯಾನ್‌ನಲ್ಲಿರುವ ಸೆಂಟ್-ನಿಜಿಯರ್ ಚರ್ಚ್ ಅನ್ನು ಆಕ್ರಮಿಸಿಕೊಂಡರು. ಲೈಂಗಿಕ ಕೆಲಸದ ವಿರುದ್ಧ ಪೊಲೀಸರ ತಾರತಮ್ಯವನ್ನು ಕೊನೆಗಾಣಿಸಲು ಮತ್ತು ಯೋಗ್ಯ ವಾದ ಕೆಲಸದ ಪರಿಸ್ಥಿತಿಗಳನ್ನು ಕೇಳಲು ಮಹಿಳೆಯರು ಎಂಟು ದಿನಗಳ ಕಾಲ ಚರ್ಚ್ನಲ್ಲಿ ಪ್ರತಿಭಟನೆ ನಡೆಸಿದರು. ಲೈಂಗಿಕ ಕಾರ್ಯಕರ್ತರ ವಿರುದ್ಧದ ಹಿಂಸಾಚಾರದ ಹೆಚ್ಚಳವು ಚಳುವಳಿಯನ್ನು ಪ್ರಚೋದಿಸಿತು. ಫ್ರಾನ್ಸ್ನ ವಿವಿಧ ಭಾಗಗಳಲ್ಲಿ ಇತರ ಲೈಂಗಿಕ ಕಾರ್ಯಕರ್ತರು ಪ್ಯಾರಿಸ್, ಮಾರ್ಸಿಲ್ಲೆ, ಗ್ರೆನೋಬಲ್, ಸೇಂಟ್-ಎಟಿಯೆನ್ನೆ ಮತ್ತು ಮಾಂಟ್ ಪೆಲ್ಲಿಯರ್ ಸೇರಿದಂತೆ ಚರ್ಚ್ಗಳನ್ನು ಆಕ್ರಮಿಸಿಕೊಂಡರು. ಜೂನ್ ೧೦ರಂದು ಚರ್ಚ್ಗಲ ಮೇಲೆ ಪೊಲೀಸ್ ಪಡೆಗಳು ದಾಳಿ ಮಾಡಿದವು. ಈ ಕ್ರಿಯೆ ರಾಷ್ಟಿçÃಯ ಆಂದೋಲನವಾಯಿತು. ನಂತರದಲ್ಲಿ ವಿಶ್ವದಾದ್ಯಂತ ಆಂದೋಲನ ಶುರುವಾಗಿ ಆರಂಭದ ದಿನವಾದ ಜೂನ್ ೨ನ್ನು ಲೈಂಗಿಕ ಕಾರ್ಯ ಕರ್ತರ ದಿನವನ್ನಾಗಿ ಆಚರಣೆಗೆ ತರಲಾಯಿತು.

ಇಂದಿನ ಆಚರಣೆ-ಕ್ರಮಗಳು

ಈ ದಿನದಂದು, ಲೈಂಗಿಕ ಕಾರ್ಯಕರ್ತೆಯ ಹಕ್ಕುಗಳ ಕಾರ್ಯಕರ್ತರು ಸ್ಥಳೀಯ, ರಾಷ್ಟಿçÃಯ ಮತ್ತು ಅಂತರರಾಷ್ಟಿçÃಯ ಮಟ್ಟದಲ್ಲಿ ಜಾರಿಗೆ ತರಲು, ನೀತಿ ಶಿಫಾರಸ್ಸುಗಳನ್ನು ರೂಪಿಸಲು ಒಕ್ಕೂಟಗಳೊಂದಿಗೆ ಕೆಲಸ ಮಾಡುತ್ತಾರೆ. ವೇಶ್ಯೆಯರ ದೈನಂದಿನ ಜೀವನದ ಭಾಗವಾಗಿರುವ ತಾರತಮ್ಯ, ಶೋಷಣೆ ಮತ್ತು ಬಡತನವನ್ನು ಕೊನೆಗೊಳಿಸಲು ವಿವಿಧ ಉಪಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.

ಸುಪ್ರೀಂಕೋರ್ಟ್ ತೀರ್ಪು

ಸುಪ್ರೀಂ ಕೋರ್ಟ್ ಇತ್ತೀಚೆಗೆ ವೇಶ್ಯಾವಾಟಿಕೆಯನ್ನು ವೃತ್ತಿಯಾಗಿ ಗುರುತಿಸಿದೆ ಮತ್ತು ಸ್ವಯಂಪ್ರೇರಿತ ಲೈಂಗಿಕ ಕೆಲಸವು ಕಾನೂನು ಬಾಹಿರವಲ್ಲದ ಕಾರಣ ವೇಶ್ಯಾಗೃಹಗಳ ಮೇಲೆ ದಾಳಿ ಮಾಡುವ ಮೂಲಕ ಲೈಂಗಿಕ ಕಾರ್ಯಕರ್ತರನ್ನು ಬಂಧಿಸಬಾರದು, ದಂಡ ವಿಧಿಸಬಾರದು ಅಥವಾ ಕಿರುಕುಳ ನೀಡಬಾರದು ಎಂದು ಹೇಳಿದೆ. ಲೈಂಗಿಕ ಕಾರ್ಯಕರ್ತರನ್ನು ಸಭ್ಯತೆ ಮತ್ತು ಘನತೆಯಿಂದ ನಡೆಸಿಕೊಳ್ಳಬೇಕು ಮತ್ತು ವಯಸ್ಕರು ಒಪ್ಪಿಗೆಯ ಲೈಂಗಿಕ ಕೆಲಸದಲ್ಲಿ ತೊಡಗಿದಾಗ ಪೊಲೀಸರು ಮಧ್ಯಪ್ರವೇಶಿಸಬಾರದು ಅಥವಾ ಯಾವುದೇ ಕ್ರಿಮಿನಲ್ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ಕಾನೂನುಬಾಹಿರವಲ್ಲ

ವೇಶ್ಯಾಗೃಹಗಳ ಮೇಲೆ ದಾಳಿ ಮಾಡುವ ಮೂಲಕ ಲೈಂಗಿಕ ಕಾರ್ಯಕರ್ತರನ್ನು ಬಂಧಿಸಬಾರದು, ದಂಡ ವಿಧಿಸಬಾರದು ಅಥವಾ ಕಿರುಕುಳ ನೀಡಬಾರದು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ನೇತೃತ್ವದ ತ್ರಿಸದಸ್ಯ ಪೀಠವು ಸಂವಿಧಾನದ ೧೪೨ ನೇ ವಿಧಿಯ ಅಡಿಯಲ್ಲಿ ವಿಶೇಷ ಅಧಿಕಾರವನ್ನು ಜಾರಿಗೊಳಿಸಿದ ನಂತರ ಹೊರಡಿಸಿದ ಆದೇಶದಲ್ಲಿ ನಿರ್ದೇಶಿಸಿದೆ.

ಮಾತ್ರವಲ್ಲ ಲೈಂಗಿಕ ಕಾರ್ಯ ಕರ್ತೆಯರ ಮಗುವನ್ನು ಕೇವಲ ಲೈಂಗಿಕ ವ್ಯಾಪಾರದಲ್ಲಿ ತೊಡಗಿದ್ದಾರೆ ಎಂಬ ಕಾರಣಕ್ಕೆ ತಾಯಿಯಿಂದ ಬೇರ್ಪಡಿಸ ಬಾರದು ಎಂದು ನ್ಯಾಯಾಲಯ ಹೇಳಿದೆ. ಮಾನವನ ಸಭ್ಯತೆ ಮತ್ತು ಘನತೆಯ ಮೂಲಭೂತ ರಕ್ಷ ಣೆಯು ಲೈಂಗಿಕ ಕಾರ್ಯಕರ್ತರು ಮತ್ತು ಅವರ ಮಕ್ಕಳಿಗೆ ವಿಸ್ತರಿ ಸುತ್ತದೆ ಎಂದು ನ್ಯಾಯಾಲಯವು ಗಮನಿಸಿದೆ. ಸಮಾಜದಲ್ಲಿ ಎಲ್ಲರಿಗೂ ಸಮಾನ ಹಕ್ಕಿದೆ., ಎಲ್ಲರೂ ಸಮಾನರೂ., ಯಾರಲ್ಲೂ ತಾರತಮ್ಯ ವಿರಬಾ ರದು ಎಂಬ ನಿಟ್ಟಿನಲ್ಲಿ ಆಚರಣೆ ಯಲ್ಲಿರುವ ಈ ದಿನ ದಿಂದಾದರೂ ಶೋಷಿತರಿಗೆ ನ್ಯಾಯ ಸಿಗು ವಂತಾಗಲಿ ಎಂಬದೇ ಆಶಯ..!

? ಕುಡೆಕಲ್ ಸಂತೋಷ್