ಕಣಿವೆ, ಜೂ. ೨: ಕುಶಾಲನಗರದ ಮೈಸೂರು ರಸ್ತೆಯಲ್ಲಿನ ಲಿಯೋ ಲೆಜೆಂಡ್ಸ್ ಕ್ಲಬ್ ವತಿಯಿಂದ ಕಳೆದ ಬಾರಿಯ ಹತ್ತನೆ ತರಗತಿ ಪರೀಕ್ಷೆಯಲ್ಲಿ ಸಾಧನೆ ತೋರಿದ ಮೂವರು ವಿದ್ಯಾರ್ಥಿಗಳನ್ನು ವಿಶೇಷವಾಗಿ ಗುರುತಿಸಿ ಗೌರವಿಸಲಾಯಿತು.
ಕಳೆದ ೪೦ ವರ್ಷಗಳಿಂದ ಆರಂಭಿಸಿರುವ ಸಾಮಾಜಿಕ ಸೇವಾ ಸಂಸ್ಥೆಯ ವತಿಯಿಂದ ಜಾತಿ ಹಾಗೂ ಧರ್ಮರಹಿತವಾದ ಸೇವೆಗಳನ್ನು ಪ್ರತೀ ವರ್ಷ ಮಾಡಿಕೊಂಡು ಬರಲಾಗುತ್ತಿದೆ. ಅದೇ ರೀತಿಯಲ್ಲಿ ಈ ಬಾರಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತಿದೆ ಎಂದು ಸಂಸ್ಥೆಯ ಜಿಲ್ಲಾಧ್ಯಕ್ಷ ನರಹರಿ ಜೋಯಿಸ್ ಹೇಳಿದರು. ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಶ್ರೀವಿದ್ಯಾ, ಕೆ.ಹೆಚ್. ಫಯಾಜ್, ನಿಜಾಮ್ ಅವರುಗಳನ್ನು ಪ್ರೋತ್ಸಾಹಿಸಲಾಯಿತು.
ಈ ಸಂದರ್ಭ ಸಂಸ್ಥೆಯ ಪ್ರಮುಖರಾದ ಡಾ. ಪಾರ್ಥಸಾರಥಿ, ಗುಣಶೀಲಾ, ಮಂಜುನಾಥ್, ನಿದಹುಸೇನ್, ಶ್ರೀಕಂಠ ಸ್ವಾಮಿ ಮೊದಲಾದವರಿದ್ದರು.