ಮಡಿಕೇರಿ, ಜೂ.೧: ಕೊಡಗು ಜಿಲ್ಲೆ ಕ್ರೀಡೆಗೆ ಹೆಸರುವಾಸಿ ಯಾಗಿದ್ದು, ಕ್ರೀಡೆಯ ತವರು ಎಂದೇ ಕರೆಸಿಕೊಳ್ಳುತ್ತಿದೆ. ರಾಜ್ಯ, ರಾಷ್ಟç, ಅಂರ‍್ರಾಷ್ಟಿçಯ ಕ್ರೀಡಾಪಟು ಗಳನ್ನು ಕೊಡುಗೆಯಾಗಿ ನೀಡಿದ ಗರಿಮೆ ಈ ಜಿಲ್ಲೆಗಿದೆ., ಅದರಲ್ಲೂ ಒಂದು ಹಜ್ಜೆ ಮುಂದೆ ಹೋಗಿ ವಿಶ್ವದಲ್ಲಿಯೆ ಕುಟುಂಬವಾರು ಕ್ರೀಡಾಕೂಟಗಳನ್ನು ಹಮ್ಮಿಕೊಂಡು ದಾಖಲೆ ನಿರ್ಮಾಣ ಮಾಡಿರುವ ಜಿಲ್ಲೆ ಈ ನಮ್ಮ ಕೊಡಗು. ಕೊಡವ ಜನಾಂಗದ ಕೌಟುಂಬಿಕ ಹಾಕಿ ನಮ್ಮೆ ಲಿಮ್ಕಾ ದಾಖಲೆಯೊಂದಿಗೆ ವಿಶ್ವ ದಾಖಲೆಯತ್ತ ಮುನ್ನುಗ್ಗುತ್ತಿರುವದು ಇತಿಹಾಸ., ಇದರೊಂದಿಗೆ ಇತರ ಜನಾಂಗದವರು ಕೌಟುಂಬಿಕ ಕ್ರೀಡಾಕೂಟಗಳನ್ನು ಹಮ್ಮಿಕೊಂಡು ಬರುತ್ತಿರುವದು ಈ ಮಣ್ಣಿನ ಕ್ರೀಡಾಸ್ಫೂರ್ತಿಗೊಂದು ಉದಾಹರಣೆಯಾದರೆ, ಕೊಡಗು ಗೌಡ ಜನಾಂಗ ಬಾಂಧವರ ಕ್ರೀಡಾ ಹಬ್ಬ ಹೊಸತೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ ಎಂದರೆ ತಪ್ಪಾಗಲಾರದು. ಕೌಟುಂಬಿಕ ಟೆನ್ನಿಸ್ ಬಾಲ್ ಕ್ರಿಕೆಟ್ ಹಬ್ಬ ಆಚರಿಸುತ್ತಾ ಜನಾಂಗದವರನ್ನು ಒಂದೆಡೆ ಸೇರಿಸುತ್ತಿದ್ದ ಕ್ರೀಡಾಕೂಟದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿ ಜನಾಂಗದಲ್ಲಿನ ಕ್ರೀಡಾ ಪ್ರತಿಭೆಗಳನ್ನು ಹೊರತರುವಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಬಹುದು…

ಕೊಡಗು ಗೌಡ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ತುಂತಜೆ ಗಣೇಶ್ ೨೭೦೩ ರನ್ ದಾಖಲು

ಹತ್ತು ದಿನಗಳ ಪೈಕಿ ಮಳೆಯಿಂದಾಗಿ ಎಂಟು ದಿನಗಳ ಕಾಲ ನಡೆದ ಜಿಪಿಎಲ್ ಪಂದ್ಯಾಟದಲ್ಲಿ ಒಟ್ಟು ೧೬ ಪಂದ್ಯಗಳು ನಡೆದಿವೆ. ಒಟ್ಟು ೧೮೭೨ ಎಸೆತಗಳಲ್ಲಿ ಬರೋಬ್ಬರಿ ೮೦ ಸಿಕ್ಸರ್‌ಗಳು, ೨೨೫ ಬೌಂಡರಿಗಳೊAದಿಗೆ ೨೭೦೩ ರನ್‌ಗಳು ದಾಖಲಾಗಿವೆ. ಇದರಲ್ಲಿ ೪೦೩ ಹೆಚ್ಚುವರಿ ರನ್‌ಗಳೂ ಸೇರ್ಪಡೆಯಾಗಿವೆ. ೭೯೬ ಚುಕ್ಕಿ ಎಸೆತಗಳಾಗಿದ್ದರೆ, ನಾಲ್ಕು ಅರ್ಧ ಶತಕಗಳು ದಾಖಲಾಗಿದ್ದು, ೪೬ ಕ್ಯಾಚ್‌ಗಳೊಂದಿಗೆ ೧೪೭ ವಿಕೆಟ್‌ಗಳು ಪತನವಾಗಿವೆ.ಕ್ರಿಕೆಟ್‌ನೊಂದಿಗೆ ವಾಲಿಬಾಲ್, ಥ್ರೋಬಾಲ್, ಹಗ್ಗಜಗ್ಗಾಟ, ಪುರುಷ, ಮಹಿಳೆಯರ ಕಬಡ್ಡಿ. ವಿಶೇಷವಾಗಿ ಇತಿಹಾಸದಲ್ಲೇ ಪ್ರಥಮ ಎಂಬAತೆ ಕೆಸರುಗದ್ದೆ ಕ್ರಿಕೆಟ್., ಹೀಗೇ ವಿವಿಧ ರೀತಿಯ ಕ್ರೀಡಾಕೂಟಗಳನ್ನು ವಿಭಿನ್ನವಾಗಿ ನಿಭಾಯಿಸಿದೆ. ಇದೀಗ ಅಧ್ಯಕ್ಷರಾಗಿರುವ ಪಾಣತ್ತಲೆ ಜಗದೀಶ್ ಮಂದಪ್ಪ ನೇತೃತ್ವದ ತಂಡ ಇನ್ನೊಂದು ಹೆಜ್ಜೆ ಮುಂದಿಟ್ಟು ಜನಾಂಗದವರಿಗಾಗಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಿ ಅದರಲ್ಲೂ ಯಶಸ್ಸನ್ನು ಸಾಧಿಸಿದೆ.

ಇದೇ ಪ್ರಥಮ ಬಾರಿಗೆ