ಮಡಿಕೇರಿ, ಜೂ. ೧: ಪಕ್ಷದ ಪರವಾಗಿ ದುಡಿದವರಿಗೆ ಅದರಲ್ಲೂ ಅರೆಭಾಷಿಕ ಗೌಡ ಸಮು ದಾಯದವರಿಗೆ ಅಕಾಡೆಮಿ, ನಿಗಮ ಮಂಡಳಿಯಲ್ಲಿ ಸ್ಥಾನ ನೀಡ ಬೇಕೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕಳೆದ ೨೦ ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಕೊಡಗಿನಲ್ಲಿ ಇದೀಗ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಇಬ್ಬರು ಶಾಸಕರೂ ಪರಿಣಿತರಾಗಿದ್ದು, ಒಬ್ಬರಿಗಾದರೂ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿಗೆ ಹೆಚ್ಚು ಮತ ಬರುತ್ತಿದ್ದ ಕಡೆಗಳಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಬಂದಿದೆ. ಗೌಡ ಸಮುದಾಯ ದವರು ಹೆಚ್ಚಿಗೆ ಇರುವ ಸಂಪಾಜೆ, ಪೆರಾಜೆ, ಮರಗೋಡು ಭಾಗದಲ್ಲಿ ಒಂದAಕಿ ಇಂದ ಎರಡಂಕಿಗೆ ಮತ ಏರಿಕೆಯಾಗಿದೆ. ಮುಂದಿನ ಅಕಾಡೆಮಿ, ನಿಗಮ ಮಂಡಳಿಗಳಿಗೆ ಪಕ್ಷದಲ್ಲಿ ನಿರಂತರವಾಗಿ ತೊಡಗಿ ಕೊಂಡಿರುವ, ಪಕ್ಷಪರ ದುಡಿದವರಿಗೆ ಸ್ಥಾನ ನೀಡುವಂತೆ ಮನವಿ ಮಾಡಿದರು.

ಕಾಂಗ್ರೆಸ್ ವಕ್ತಾರ ಪಿ.ಎಲ್.ಸುರೇಶ್ ಮಾತನಾಡಿ, ಕಾಂಗ್ರೆಸ್ ಗೆಲುವಿನಲ್ಲಿ ಸಂಪಾಜೆ, ಚೆಂಬು, ಬೆಟ್ಟಗೇರಿ ಭಾಗಗಳಲ್ಲಿ ಬಹುಸಂಖ್ಯಾತರಾದ ಅರೆಭಾಷಿಕ ಸಮುದಾಯದವರು ಮಹತ್ತರ ಪಾತ್ರ ವಹಿಸಿದ್ದಾರೆ. ಬದಲಾವಣೆ ದೃಷ್ಟಿಯಿಂದ ಪ್ರಬುದ್ಧ ಅಭ್ಯರ್ಥಿಗೆ ಮತ ನೀಡಿದ್ದು, ಶಾಸಕರು ಅರೆಭಾಷೆ ಗೌಡ ಜನಾಂ ಗದ ಮೇಲೆ ಅಭಿಮಾನವಿಟ್ಟು ಪಕ್ಷದ ನಿಷ್ಠಾವಂತ ಭಾಷಿಕರಿಗೆ ನಿಗಮ ಕೊಡಬೇಕು, ಜನಾಂಗಕ್ಕೆ ಹೆಚ್ಚು ಆದ್ಯತೆ ನೀಡಿದರೆ ಮುಂಬರುವ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಾಪೋಕ್ಲು ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಕೊಡಗನ ತೀರ್ಥ ಪ್ರಸಾದ್ ಮಾತನಾಡಿ, ಹಲವು ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಅಳವಡಿಸ ಲಾಗಿದ್ದು, ನೀರು ಸರಿಯಾಗಿ ದೊರೆ ಯುತ್ತಿಲ್ಲ. ಅಲ್ಲದೆ ಜಮ್ಮ ಬಾಣೆ ಸೇರಿದಂತೆ ಹಲವು ಸಮಸ್ಯೆಗಳ ಜಿಲ್ಲೆಯಲ್ಲಿದ್ದು, ಶಾಸಕರು ಪಂಚಾ ಯಿತಿ ಮಟ್ಟದಲ್ಲಿ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿ ಅದನ್ನು ಪರಿ ಹರಿಸುವ ಕೆಲಸ ಮಾಡಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಸೇವಾದಳದ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಕಾಂಗ್ರೆಸ್ ಮುಖಂಡ ಎನ್.ಜಿ. ಉಮೇಶ್ ಉಪಸ್ಥಿತರಿದ್ದರು.