ಪೊನ್ನAಪೇಟೆ ಕೆಪಿಎಸ್ ಪ್ರಾಥಮಿಕ ಶಾಲೆ
ಪೊನ್ನಂಪೇಟೆ: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮ ದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಹೂಗುಚ್ಛ, ಸಿಹಿ, ಸಮವಸ್ತç, ಪಠ್ಯ ಪುಸ್ತಕ ನೀಡುವುದರ ಮೂಲಕ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು ಶಾಲೆಗೆ ಬರ ಮಾಡಿಕೊಂಡರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ರಾಮಕೃಷ್ಣ, ಎಸ್ಡಿಎಂಸಿ ಉಪಾಧ್ಯಕ್ಷೆ ನಾಗವೇಣಿ, ಸದಸ್ಯರಾದ ಕನ್ಯಾಕುಮಾರಿ, ಮುಖ್ಯ ಶಿಕ್ಷಕ ಬಿ.ಎಂ. ವಿಜಯ್, ಸಮೂಹ ಸಂಪನ್ಮೂಲ ವ್ಯಕ್ತಿ ತಿರುನೆಲ್ಲಿಮಾಡ ಜೀವನ್, ಶಿಕ್ಷಕರಾದ ಝಾನ್ಸಿ, ಫಿಲೋಮಿನಾ, ಗಂಗಾಮಣಿ, ನಿಂಗರಾಜು, ಮಹೇಶ್, ಗಂಗಾಮಣಿ, ಶಕೀಲಾಬಾನು ಮತ್ತಿತರರಿದ್ದರು.
ಗೋಣಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
*ಗೋಣಿಕೊಪ್ಪ: ಗೋಣಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಪುಷ್ಪಗುಚ್ಛ ನೀಡಿ, ಸಿಹಿ ತಿನ್ನಿಸುವ ಮೂಲಕ ಸ್ವಾಗತಿಸಲಾಯಿತು.
ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯ ಬಾಲು, ಸದಸ್ಯರುಗಳಾದ ಬಿ.ಎನ್. ಪ್ರಕಾಶ್, ಕೊಣಿಯಂಡ ಬೋಜಮ್ಮ ಅವರುಗಳು ಶಿಕ್ಷಕರ ಜೊತೆಗೂಡಿ ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.
ದಾನಿಗಳ ಸಹಕಾರದೊಂದಿಗೆ ಮಕ್ಕಳಿಗೆ ನೋಟ್ಬುಕ್, ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು. ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್, ಶಿಕ್ಷಕರುಗಳಾದ ಸತೀಶ್ ಬಿ.ಆರ್., ರಮಾನಂದ ಟಿ.ಡಿ., ಕೆ.ಎ. ಸರಸ್ವತಿ, ಬಿ.ಎಂ. ನಿರ್ಮಲ, ಎಂ.ಟಿ. ಜೋಸ್ಲಿಯ, ಎನ್.ಕೆ. ಜಯಶ್ರೀ, ಎಂ.ಸಿ. ಇಂದಿರಾ, ಹೆಚ್.ಈ. ಅನಿತಾಕುಮಾರಿ, ಎ.ಎನ್. ದಮಯಂತಿ, ಕೆ.ಎಂ. ತ್ರಿವೇಣಿ, ಕೆ.ಎಸ್. ಶಾರದ, ಕೆ.ಟಿ. ರೀಟಾ, ಸಮನ್ವಯ ಸಂಪನ್ಮೂಲ ಅಧಿಕಾರಿ ರಾಧ ಇದ್ದರು.
ಸಂತ ಅನ್ನಮ್ಮ ವಿದ್ಯಾಸಂಸ್ಥೆ
ವೀರಾಜಪೇಟೆ: ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ಹೂವು ನೀಡುವ ಮೂಲಕ ಮಕ್ಕಳನ್ನು ಸ್ವಾಗತಿಸಲಾಯಿತು. ಸಂತ ಅನ್ನಮ್ಮ ದೇವಾಲಯದ ಗುರುಗಳಾದ ರೆ.ಫಾ. ದಯಾನಂದ ಪ್ರಭು ಆಶೀರ್ವಚನ ನೀಡಿದರು.
ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಐಸಾಕ್ ರತ್ನಕರ್ ಮಾತನಾಡಿದರು. ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಫಲಿತಾಂಶಕ್ಕೆ ಕಾರಣರಾದ ಶಿಕ್ಷಕರನ್ನು ಅಭಿನಂದಿಸಲಾಯಿತು. ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ವೈಷ್ಣವಿಯನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಉಪಸ್ಥಿತರಿದ್ದರು.
ಮೇಕೇರಿ ಕ್ಲಸ್ಟರ್ ಶಾಲೆ
ಮಡಿಕೇರಿ: ಮೇಕೇರಿ ಕ್ಲಸ್ಟರ್ನ ವಿವಿಧ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಹೂಗುಚ್ಚಗಳನ್ನು ನೀಡಿ ಸ್ವಾಗತ ಕೋರಲಾಯಿತು.
ಈ ಸಂದರ್ಭ ಕ್ಲಸ್ಟರ್ ಸಿಆರ್ಪಿ ಕಲ್ಪನಾ, ಶಾಲೆಗಳ ಮುಖ್ಯ ಶಿಕ್ಷಕರು, ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರುಗಳು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.
ಕಿರುಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಪೊನ್ನಂಪೇಟೆ: ಪೊನ್ನಂಪೇಟೆ ಕ್ಲಸ್ಟರ್ನ ಕಿರುಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ಮಕ್ಕಳಿಗೆ ಸಮವಸ್ತç, ಪಠ್ಯ ಪುಸ್ತಕ, ಸಿಹಿ, ಹೂಗುಚ್ಛವನ್ನು ನೀಡಿ ಎಸ್ಡಿಎಂಸಿ ಅಧ್ಯಕ್ಷ ರಮೇಶ್ ಶಾಲೆಗೆ ಬರಮಾಡಿಕೊಂಡರು.
ಈ ಸಂದರ್ಭ ಉಪಾಧ್ಯಕ್ಷ ಹರೀಶ, ಪೋಷಕರಾದ ಭವಾನಿ, ಜಾನಕಿ, ಅಡುಗೆ ಸಿಬ್ಬಂದಿಗಳಾದ ಪ್ರತಿಮಾ, ಚೋಂದಮ್ಮ, ಮುಖ್ಯ ಶಿಕ್ಷಕಿ ಸಿ. ರಾಜಮ್ಮ, ಸಹ ಶಿಕ್ಷಕರಾದ ವೀಣಾ, ಶ್ರೀಜಾ ಹಾಜರಿದ್ದರು.
ಕಡಂಗ ವಿಜಯ ಹಿರಿಯ ಪ್ರಾಥಮಿಕ ಶಾಲೆ
ಕಡಂಗ: ಕಡಂಗ ವಿಜಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಆಡಳಿತ ಮಂಡಳಿಯವರು ಹಾಗೂ ಶಿಕ್ಷಕರು ಸೇರಿ ಮಕ್ಕಳಿಗೆ ಹೂಗುಚ್ಛ ನೀಡಿ, ಸಿಹಿ ಹಂಚುವ ಮೂಲಕ ಬರಮಾಡಿಕೊಂಡರು.
ಕುಶಾಲಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ
ಪೊನ್ನಂಪೇಟೆ: ಪೊನ್ನಂಪೇಟೆ ಕ್ಲಸ್ಟರ್ನ ಕುಶಾಲಪುರ ಸ.ಕಿ.ಪ್ರಾ. ಶಾಲೆಯಲ್ಲಿ ಮಕ್ಕಳಿಗೆ ಸಮವಸ್ತç, ಪಠ್ಯ ಪುಸ್ತಕ ಮತ್ತು ಸಿಹಿ ನೀಡಿ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭ ಮುಖ್ಯ ಶಿಕ್ಷಕ ಎ.ಎಸ್. ವಾಸುವರ್ಮ ಮತ್ತು ಸಿಬ್ಬಂದಿ ಇದ್ದರು.
ನಾಪೋಕ್ಲು ಹೋಬಳಿ ವ್ಯಾಪ್ತಿಯ ಶಾಲೆ
ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಶಾಲಾ ಪ್ರಾರಂಭೋತ್ಸವ ವನ್ನು ಸಂಭ್ರಮದಿAದ ಆಚರಿಸ ಲಾಯಿತು. ಇಲ್ಲಿನ ಸರ್ಕಾರಿ ಶಾಲೆಗ ಳನ್ನು ತಳಿರು ತೋರಣಗಳಿಂದ ಅಲಂಕರಿಸಿ ಶಿಕ್ಷಕರು ಶಾಲಾ ಆಡಳಿತ ಮಂಡಳಿ ಹೂ ಹಿಡಿದು ಶಾಲಾ ದ್ವಾರದಲ್ಲಿ ನಿಂತು ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.
ವಿವಿಧ ಶಾಲೆಗಳಲ್ಲಿ ವಿದ್ಯಾರ್ಥಿ ಗಳಿಗೆ ಸಿಹಿ ಹಂಚಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಸಮವಸ್ತçಗಳನ್ನು ವಿತರಿಸಲಾಯಿತು.
ಸಮೀಪದ ಎಮ್ಮೆಮಾಡಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಅಶ್ರಫ್ ಪಿ.ಐ., ಮಾಜಿ ಅಧ್ಯಕ್ಷ ಪಿ.ಎಂ. ಇಬ್ರಾಹಿಂ ಹಾಜಿ, ಪೋಷಕ ವೃಂದದವರು ಹಾಗೂ ಎಸ್ಡಿಎಂಸಿ ಸದಸ್ಯರು ಹಾಜರಿದ್ದರು. ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲೂ ಪ್ರಾರಂಭೋತ್ಸವವನ್ನು ವಿಜೃಂಭಣೆ ಯಿಂದ ಆಚರಿಸಲಾಯಿತು.
ಶಾಲೆಯ ಪ್ರವೇಶ ದ್ವಾರದಿಂದ ವಿದ್ಯಾರ್ಥಿ ಗಳನ್ನು ಶಿಕ್ಷಕರು ಹಾಗೂ ಎಸ್ಡಿ ಎಂಸಿ ಸದಸ್ಯರು ಬರಮಾಡಿ ಕೊಂಡರು. ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿ, ಮಧ್ಯಾಹ್ನ ಸಿಹಿ ವಿತರಣೆ ಮಾಡಲಾಯಿತು. ಪಠ್ಯ ಪುಸ್ತಕ ಹಾಗೂ ಸಮವಸ್ತçಗಳನ್ನು ವಿತರಿಸಲಾಯಿತು.
ಶಾಲಾ ಎಸ್ಡಿಎಂಸಿ ಸದಸ್ಯರು, ಪೋಷಕರು ಹಾಜರಿದ್ದರು. ಹೋಬಳಿ ವ್ಯಾಪ್ತಿಯ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಪ್ರಾರಂಭೋತ್ಸವ ವನ್ನು ವಿಜೃಂಭಣೆಯಿAದ ಆಚರಿಸ ಲಾಯಿತು.
ಕಡಂಗ ಸರ್ಕಾರಿ ಶಾಲೆಕಡಂಗ: ಸರ್ಕಾರಿ ಶಾಲೆ ಕಡಂಗದಲ್ಲಿ ೨೦೨೩-೨೪ನೇ ಸಾಲಿನ ಶೈಕ್ಷಣಿಕ ಪ್ರಾರಂಭೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಫಾತಿಮಾ, ಮುಖ್ಯಶಿಕ್ಷಕಿ ಶಾಂತಿಕುಮಾರಿ ಪಿ.ಎಂ., ಎಸ್.ಡಿ.ಎಂ.ಸಿ. ಸದಸ್ಯರು, ಶಾಲಾ ಶಿಕ್ಷಕರು, ಪೋಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಮಕ್ಕಳು ಹಾಜರಿದ್ದರು. ಸಮವಸ್ತç, ಪಠ್ಯಪುಸ್ತಕ ವಿತರಣೆ ಮಾಡಲಾಯಿತು.
ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆ
ಸುಂಟಿಕೊಪ್ಪ: ಶಾಲೆ ಪ್ರಾರಂಭೋತ್ಸವದ ಅಂಗವಾಗಿ ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ದ್ವಾರ ಬಾಳೆ ಸೇರಿದಂತೆ ತಳಿರುತೋರಣಗಳನ್ನು ಕಟ್ಟಿ ಮಕ್ಕಳಿಗೆ ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರು ಸಿಹಿ ವಿತರಿಸಿ ಅದ್ಧೂರಿ ಸ್ವಾಗತ ಕೋರಿದರು.
ಸರಕಾರದ ವಯಿಂದ ವಿತರಿಸಲಾಗುವ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತçವನ್ನು ಮಕ್ಕಳಿಗೆ ವಿತರಿಸಲಾಯಿತು.
ಈ ಸಂದರ್ಭ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ವಾದ್ಯಗೋಷ್ಠಿಯೊಂದಿಗೆ ಜಾಥಾವನ್ನು ಹಮ್ಮಿಕೊಂಡರು. ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ಮಂಚಿತಗೊಳ್ಳದೆÀ ದಾಖಲಾತಿಗೊಳ್ಳುವಂತೆ ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ಸಾಗಿತು.
ಈ ಸಂದರ್ಭ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರಫೀಕ್ ಖಾನ್, ಪಂಚಾಯಿತಿ ಸದಸ್ಯೆ ವಸಂತಿ, ಎಸ್ಡಿಎಂಸಿ ಸದಸ್ಯ ಶಿವಪ್ಪ, ಮುಖ್ಯೋಪಾಧ್ಯಾಯನಿ ಗೀತಾ, ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಬಾಲಕೃಷ್ಣ, ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಸಿ.ಟಿ. ಸೋಮಶೇಖರ್, ಲಿಯೋನ, ಪ್ರಕಾಶ್, ಸುನಂದ, ಚಿತ್ರ, ಶಾಂತಹೆಗ್ಡೆ, ಜಯಶ್ರೀ, ಪ್ರಾಥಮಿಕ ಶಾಲೆಯ ಶಿಕ್ಷಕರುಗಳಾದ ದೈಹಿಕ ಶಿಕ್ಷಣ ಶಿಕ್ಷಕ ಪಿ.ಇ. ನಂದ, ಸಹಶಿಕ್ಷಕರುಗಳಾದ ಸೌಭಾಗ್ಯ, ಚಂದ್ರವತಿ, ಉಷಾ, ಇಂದಿರಾ ಹಾಗೂ ಪೋಷಕರು ಹಾಜರಿದ್ದರು.
ಗೋಣಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಗೋಣಿಕೊಪ್ಪಲು: ಜಿಲೇಬಿ, ಪೆನ್ಸಿಲ್, ಪೆನ್ನು ಹಾಗೂ ನೋಟ್ ಪುಸ್ತಕಗಳನ್ನು ಹಿಡಿದ ಶಿಕ್ಷಕರು ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಮುಂಜಾನೆಯಿAದಲೇ ಬಣ್ಣಬಣ್ಣದ ಉಡುಗೆಗಳನ್ನು ತೊಟ್ಟು ವಿದ್ಯಾರ್ಥಿಗಳ ಆಗಮನಕ್ಕಾಗಿ ಎದುರು ನೋಡುತ್ತಿದ್ದರು.
ಶಾಲಾ ಪ್ರಾರಂಭೋತ್ಸವದ ದಿನವಾಗಿದ್ದರಿಂದ ಶಿಕ್ಷಕರು ಶಾಲೆಯ ಹೆಬ್ಬಾಗಿಲನ್ನು ತಳಿರು ತೋರಣ ಗಳಿಂದ ಸಿಂಗರಿಸಿದ್ದರು.
ಇಂತಹ ಕಾರ್ಯಕ್ರಮ ಗೋಣಿಕೊಪ್ಪಲುವಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮುಂಜಾನೆ ನಡೆಯಿತು.
ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್ ಶಾಲಾ ಪ್ರಾರಂಭೋತ್ಸವದ ದಿನವನ್ನು ವಿಭಿನ್ನವಾಗಿ ಆಚರಿಸಿದರು. ಪಟ್ಟಣದಲ್ಲಿ ಶಾಲಾ ಮಕ್ಕಳು ಮೆರವಣಿಗೆ ಸಾಗಿ ಶಾಲೆ ಬಳಿ ಬರುತ್ತಿದ್ದಂತೆಯೇ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕ್ಕಮನೆ ಸೌಮ್ಯಬಾಲು, ಸದಸ್ಯರಾದ ಬಿ.ಎನ್. ಪ್ರಕಾಶ್, ಕೊಣಿಯಂಡ ಬೋಜಮ್ಮ, ಎಸ್ಡಿಎಂಸಿ ಅಧ್ಯಕ್ಷೆ ಶಾಂತಿ ಹಾಗೂ ಶಿಕ್ಷಕರ ವೃಂದ ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡರು.
ಶಾಲೆಯ ಹೆಬ್ಬಾಗಿಲಿನಲ್ಲಿಯೆ ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ ಹೂಗಳನ್ನು ನೀಡಿ ಸ್ವಾಗತಿಸಿದರು. ಈ ವೇಳೆ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್ಗಳನ್ನು ಶಿಕ್ಷಕರು ಹಾಗೂ ಅತಿಥಿಗಳು ವಿತರಿಸಿದರು. ಶಾಲಾ ಮಕ್ಕಳಲ್ಲಿ ಹೊಸ ಉತ್ಸಾಹ ಮೂಡಿಸಲು ಶಿಕ್ಷಕರು ಮಾಡಿದ ಪ್ರಯತ್ನ ಯಶಸ್ವಿಯಾಯಿತು. ನಂತರ ಸಮಾರಂಭ ನಡೆಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯಬಾಲು ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಎಸ್ಡಿಎಂಸಿ ಅಧ್ಯಕ್ಷೆ ಶಾಂತಿ, ಟಿ.ಪಿ., ಇಒ ಗಾಯತ್ರಿ, ಬಿ.ಆರ್.ಪಿ. ವಾಮನ, ಸಿ.ಆರ್.ಪಿ. ರಾಧ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು. ಶಿಕ್ಷಕರಾದ ಸತೀಶ್ ಕಾರ್ಯಕ್ರಮ ನಿರೂಪಿಸಿ, ರಮಾನಂದ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಶನಿವಾರಸಂತೆ: ಸಮೀಪದ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ೨೦೨೩-೨೦೨೪ ರ ಶೈಕ್ಷಣಿಕ ಸಾಲಿನ ಪ್ರಾರಂಭೋತ್ಸವ ನೆರವೇರಿತು.
ಶಾಲಾ ಆವರಣವನ್ನು ಬಾಳೆ ಕಂಬಗಳು, ತಳಿರು ತೋರಣ, ಹೂವಿನ ಹಾರ, ಬಣ್ಣಬಣ್ಣದ ಗೊಂಬೆ, ಆಟಿಕೆಗಳಿಂದ ಸಿಂಗರಿಸಲಾಗಿದ್ದು ಮಕ್ಕಳ ಮನಸ್ಸಿಗೆ ಮುದ ನೀಡಿತು. ಶಾಲೆಗೆ ಬಂದ ಪ್ರತಿ ವಿದ್ಯಾರ್ಥಿಯ ಕೈಗೆ ಹೂಗುಚ್ಛದೊಂದಿಗೆ ಸಿಹಿ ನೀಡಿ ಸ್ವಾಗತಿಸಲಾಯಿತು. ವಿದ್ಯಾರ್ಥಿಗಳೂ ಲವಲವಿಕೆಯಿಂದ, ಸಂತೋಷದಿAದ ಶಾಲೆಗೆ ಹಾಜರಾದರು. ಆರಂಭದ ದಿನವೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತç, ಟೈ, ಬೆಲ್ಟ್, ಬ್ಯಾಡ್ಜ್ ವಿತರಿಸಲಾಯಿತು. ಶಿಕ್ಷಕರು ಸ್ವತಃ ತಯಾರಿಸಿದ ‘ವೆಲ್ಕಂ ಬ್ಯಾಕ್’ ಬ್ಯಾಡ್ಜ್ಗಳನ್ನು ಧರಿಸಿದ ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿದರು. ಶಾಲಾ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಸರಸ್ವತಿ ದೇವಿಯ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿ ವಿದ್ಯಾರ್ಥಿಗಳು ನಮನ ಸಲ್ಲಿಸಿದರು. ರೆಡ್ ಕಾರ್ಪೆಟ್ ಮೇಲೆ ಹೆಜ್ಜೆಯಿರಿಸಿ ಬಂದ ವಿದ್ಯಾರ್ಥಿಗಳು ಗ್ರೀನ್ ಕಾರ್ಪೆಟ್ ಮೇಲೆ ನಿಂತು ಅನಿಸಿಕೆ ಹಂಚಿಕೊAಡರು.
೫ನೇ ತರಗತಿ ವಿದ್ಯಾರ್ಥಿನಿ ಶ್ರೀಷ್ಮಾ ಮಾತನಾಡಿ, ಶಾಲಾರಂಭ ಖುಷಿ ತಂದಿದೆ. ೨ ತಿಂಗಳ ಕಾಲ ಸ್ನೇಹಿತರನ್ನು ಮಿಸ್ ಮಾಡ್ಕೊಂಡಿದ್ದೆ. ಮನೆಯಲ್ಲಿ ಇರೋದಕ್ಕಿಂತ ಶಾಲೆಯಲ್ಲಿರುವುದೇ ಖುಷಿ ಕೊಡುತ್ತೆ. ಶಾಲೆಯಲ್ಲಿ ಪ್ರತಿದಿನ ಏನಾದರೊಂದು ಪ್ರಾಯೋಗಿಕ ಚಟುವಟಿಕೆ ಇರುತ್ತದೆ. ಈ ಜ್ಞಾನ ದೇಗುಲದಲ್ಲಿ ಚೆನ್ನಾಗಿ ಕಲಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು. ಕಾರ್ಯಕ್ರಮ ನಿರ್ದೇಶಕ ಮುಖ್ಯಶಿಕ್ಷಕ ಸಿ.ಎಸ್. ಸತೀಶ್ ಮಾತನಾಡಿ, ಶುಭ ಹಾರೈಸಿದರು. ಶಿಕ್ಷಕ ಮಂಜುನಾಥ್, ಎಸ್ಡಿಎಂಸಿ ಅಧ್ಯಕ್ಷೆ ಬಿಂದು ಸುರೇಶ್, ಉಪಾಧ್ಯಕ್ಷ ಸುರೇಶ್, ಸದಸ್ಯರಾದ ರಮ್ಯಾ, ರೂಪಾ, ಭಾಗ್ಯಾ, ಸ್ವಾತಿ, ಪವಿತ್ರಾ, ಬಿಂದು, ಪದ್ಮಾ ಹಾಜರಿದ್ದರು.
ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಶನಿವಾರಸಂತೆ
ಶನಿವಾರಸAತೆ: ಶನಿವಾರ ಸಂತೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಆರಂಭೋತ್ಸವ ಪ್ರಯುಕ್ತ ಶಾಲಾ ಆವರಣವನ್ನು ಸ್ವಚ್ಛಗೊಳಿಸಿ, ತಳಿರು ತೋರಣಗಳಿಂದ ಸಿಂಗರಿಸಿದ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಲಾಬಿ ಹೂ ಹಾಗೂ ಸಿಹಿ ನೀಡಿ ಸ್ವಾಗತಿಸಿದರು.
ಸಿ.ಆರ್.ಪಿ. ಸಿ.ಕೆ. ದಿನೇಶ್, ಮುಖ್ಯಶಿಕ್ಷಕ ವಿಶ್ವನಾಥ್, ಶಿಕ್ಷಕರು ಹಾಜರಿದ್ದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಡ
ಚೆಯ್ಯಂಡಾಣೆ: ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭೋತ್ಸವ ವನ್ನು ಸಂಭ್ರಮದಿAದ ಆಚರಿಸ ಲಾಯಿತು. ಶಾಲೆಗೆ ಮಕ್ಕಳನ್ನು ಹೂ ನೀಡಿ ಆರತಿ ಬೆಳಗಿಸಿ ಸಿಹಿ ಹಂಚುವುದರ ಮೂಲಕ ಬರಮಾಡಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಹೆಚ್.ಎಂ. ಲೋಕೇಶ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಗ್ರಾ.ಪಂ. ಸದಸ್ಯರಾದ ಎಂ.ಬಿ. ನೇತ್ರಾವತಿ ಹಾಗೂ ಬೇಪುಡಿಯಂಡ ವೀಲಿನ್ ಅವರು ಆಗಮಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಸರಕಾರದಿಂದ ನೀಡಲಾದ ಪಠ್ಯಪುಸ್ತಕ ಹಾಗೂ ಸಮವಸ್ತçವನ್ನು ವಿತರಿಸಲಾಯಿತು. ಈ ಸಂದರ್ಭ ಎಸ್ಡಿಎಂಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು. ಮುಖ್ಯ ಶಿಕ್ಷಕಿ ಡಿ.ಕೆ. ಲೀಲಾವತಿ ಸ್ವಾಗತಿಸಿ, ಸಹ ಶಿಕ್ಷಕಿ ಬಿ.ಎ. ದಮಯಂತಿ ವಂದಿಸಿದರು.