ವೀರಾಜಪೇಟೆ, ಜೂ. ೧: ವಿವಿಧ ವೇಷಭೂಷಣ ತೊಟ್ಟು ಸಂಭ್ರಮಿಸಿದ ಗ್ರಾಮವಾಸಿಗಳ ಹರ್ಷೋದ್ಘಾರ ದೊಂದಿಗೆ ೨ ದಿನಗಳ ಕಾಲ ನಡೆದ ಐತಿಹಾಸಿಕ ಪಾರಣ ಬೋಡ್ ನಮ್ಮೆಗೆ ಗುರುವಾರ ಸಂಜೆ ವರ್ಣರಂಜಿತ ವಾಗಿ ತೆರೆಬಿತ್ತು. ಬೇರಳಿನಾಡಿನ ಗ್ರಾಮಸ್ಥರು ದಕ್ಷಿಣ ಕೊಡಗಿನ ಕೊನೆಯ ಬೇಡು ಹಬ್ಬವನ್ನು ಸಂಭ್ರಮದಿAದ ಆಚರಿಸಿದರು.
ಪಾರಣ ನಮ್ಮೆಯಲ್ಲಿ ಅಬಾಲವೃದ್ಧರಾಗಿ ಉತ್ಸಾಹದಿಂದ ಪಾಲ್ಗೊಂಡಿದ್ದ ಗ್ರಾಮಸ್ಥರು ಎರಡು ದಿನ ಹಬ್ಬದಲ್ಲೇ ತಲ್ಲೀನರಾಗಿದ್ದರು. ಇತಿಹಾಸ ಪ್ರಸಿದ್ಧ ಪಾರಣ ಬೇಡು ಹಬ್ಬವನ್ನು ಸಾಕ್ಷೀಕರಿಸಲು ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆ ಯಲ್ಲಿ ಜನತೆ ಬೇರಳಿನಾಡಿಗೆ ಬಂದಿದ್ದರು.
ಸಾAಪ್ರದಾಯಿಕ ಹಾಡುಗಳನ್ನು ಹಾಡುತ್ತಾ ಗ್ರಾಮದ ಪುರಾತನ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಅದನ್ನು ಜೀವಂತ ವಾಗಿರಿಸುವ ಪ್ರಯತ್ನದಲ್ಲಿ ಎಲ್ಲರೂ ಮಗ್ನರಾದರು. ದಕ್ಷಿಣ ಕೊಡಗಿನ ೯ ಕೇರಿಗಳನ್ನು ಒಳಗೊಂಡಿರುವ ಬೇರಳಿನಾಡಿನಲ್ಲಿ ವರ್ಷಕ್ಕೊಮ್ಮೆ ನಡೆಯುವ ಈ ವಿಶಿಷ್ಟ ಹಬ್ಬದಂದು ದೇಶದ ಯಾವುದೇ ಭಾಗದಲ್ಲಿದ್ದರೂ ಬೇರಳಿನಾಡಿನ ನಿವಾಸಿಗಳು ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಈ ಹಬ್ಬದಲ್ಲಿ ಪಾಲ್ಗೊಳ್ಳುವುದು ವಾಡಿಕೆಯಾಗಿದೆ. ಕೆಲವು ಗುಂಪುಗಳಲ್ಲಿ ಮಹಿಳೆಯರನ್ನು ಹೋಲುವ ವೇಷ ಧರಿಸುವ ವೇಷಧಾರಿಗಳು ವಿಶೇಷವಾಗಿ ಗಮನ ಸೆಳೆಯುತ್ತಾರೆ.
ಕಳಿ ತಂಡಗಳೊAದಿಗೆ ೪ ಡೋಲುಗಳನ್ನು ಹೊತ್ತು ಅವುಗಳನ್ನು ಬಾರಿಸುತ್ತ ಪಾರಣ ಹಾಡುಗಳನ್ನು ಹಾಡುತ್ತ ಮನೆ ಮನೆಗೆ ತೆರಳಿದ ವೇಷಧಾರಿಗಳು ಬೇಡು ಹಬ್ಬದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದರು. ಇವರೊಂದಿಗೆ ಕೊಡಗಿನ ಎರವ ಜನಾಂಗದ ಕಲಾವಿದರ ಸಾಂಪ್ರದಾಯಿಕ ಚೀನಿ ಮತ್ತು ದುಡಿ ತಂಡ ಚೀನಿ ವಾದ್ಯದ ಮೂಲಕ ವೇಷಧಾರಿಗಳನ್ನು ಹಿಂಬಾಲಿಸುತ್ತಿದ್ದ ದೃಶ್ಯ ಪಾರಣ ಬೇಡು ಹಬ್ಬಕ್ಕೆ ಮತ್ತಷ್ಟು ರಂಗು ನೀಡಿದರು. ಕೊಡಗಿನಾದ್ಯಂತ ಎರವರ ಚೀನಿ ದುಡಿ ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಪಾರಣ ಬೇಡು ಹಬ್ಬದಲ್ಲಿ ಎರವರ ಚೀನಿ ದುಡಿಗೆ ಹೆಚ್ಚಿನ ಪ್ರಾಶಸ್ತ÷್ಯ ನೀಡುತ್ತಾ ಬರಲಾಗಿದೆ. ಗುರುವಾರ ಸಂಜೆ ವೇಳೆಗೆ ಕಂಡAಗಾಲ ಗ್ರಾಮದಲ್ಲಿರುವ ಪಾರಣಮಾನಿಯಲ್ಲಿ ಜಮಾಯಿಸಿದ ಸಾವಿರಾರು ಸಂಖ್ಯೆಯ ಗ್ರಾಮ ವಾಸಿಗಳು ಕೆಸರಿನಲ್ಲಿ ಮಿಂದೆದ್ದು ಬೇಡು ಹಬ್ಬವನ್ನು ಸಂಭ್ರಮಿಸಿದರು.
ಕೊಡವರ ಪ್ರಸಿದ್ಧ ನಾಣ್ನುಡಿ ಯಾದ ‘ಕುಂದತ್ ಬೊಟ್ಟ್ಲ್ ನೇಂದ ಕುದುರೆ, ಪಾರಣಮಾನಿಲ್ ಅಳ್ಂಜ ಕುದುರೆ’ ಎಂಬAತೆ ಅಂತಿಮವಾಗಿ ಬಿದಿರಿನಿಂದ ತಯಾರಿಸಲಾದ ೨ ಆನೆ ಮತ್ತು ೩ ಕುದುರೆಯಾಕೃತಿಯನ್ನು ಪಾರಣಮಾನಿಯಲ್ಲಿ ಕಡಿಯುವುದರ ಮೂಲಕ ದಕ್ಷಿಣ ಕೊಡಗಿನ ಐತಿಹಾಸಿಕ ಕೊನೆಯ ಬೇಡು ಹಬ್ಬ ಮುಕ್ತಾಯಗೊಂಡಿತು.