ಗೋಣಿಕೊಪ್ಪಲು, ಜೂ.೧: ನನ್ನ ರಾಜಕೀಯ ಅವಧಿಯಲ್ಲಿ ಎಂದಿಗೂ ದ್ವೇಷ ರಾಜಕಾರಣ ಮಾಡಲಾರೆ. ಅಂತಹ ಪ್ರವೃತ್ತಿಯು ನನ್ನದಲ್ಲ; ಚುನಾವಣಾ ಸಂದರ್ಭದಲ್ಲಿ ಮುಂಜಾನೆಯಿAದ ಸಂಜೆಯ ವರೆಗೂ ನನ್ನನ್ನು ಹಾಗೂ ನನ್ನ ಕುಟುಂಬವನ್ನು ವೈಯಕ್ತಿಕವಾಗಿ ಕೆಲವರು ತೇಜೋವಧೆ ಮಾಡಿದ್ದಾರೆ. ಆದರೆ ನಾನು ಇಲ್ಲಿಯ ತನಕ ಒಂದು ವ್ಯಕ್ತಿಯನ್ನು ಕುರಿತೂ ಮಾತನಾಡಿ ದವನಲ್ಲ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಎ.ಎಸ್.ಪೊನ್ನಣ್ಣ ತಮ್ಮ ಮನದಾಳದ ಮಾತನ್ನು ಹಂಚಿಕೊAಡರು.

ಪೊನ್ನಂಪೇಟೆ ನಾಗರಿಕ ವೇದಿಕೆ ಯಿಂದ ಇಗ್ಗುತ್ತಪ್ಪ ಸೌಹಾರ್ದ ಬ್ಯಾಂಕಿನ ಸಭಾಂಗಣದಲ್ಲಿ ಹಮ್ಮಿಕೊ ಳ್ಳಲಾಗಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದÀರು.

ರಾಜಕೀಯದಿಂದ ವೈಯಕ್ತಿಕ ವಾಗಿ ನಾನು ಗಳಿಸುವುದು ಏನೂ ಇಲ್ಲ. ನನಗೆ ನಿಗಮ ಮಂಡಳಿಯಲ್ಲಿ ಸ್ಥಾನ ಪಡೆಯಲು ಪಕ್ಷದ ಮುಖಂ ಡರು ಒತ್ತಾಯಿಸುತ್ತಿದ್ದಾರೆ. ಇದರಲ್ಲಿ ಅಧ್ಯಕ್ಷನಾಗಲು ನಾನು ಚುನಾವಣೆಗೆ ನಿಲ್ಲಬೇಕಾಗಿರಲಿಲ್ಲ. ಬೆಂಗಳೂ ರಿನಲ್ಲಿಯೇ ಕುಳಿತು ಮತ್ತೊಮ್ಮೆ ಅಡ್ವೊಕೇಟ್ ಜನರಲ್ ಆಗಬಹು ದಿತ್ತು. ಆ ಪದವಿಯನ್ನು ಬಿಟ್ಟು ಸಾರ್ವಜನಿಕ ಸೇವೆಗಾಗಿ ಬಂದಿದ್ದೇನೆ. ಇದರಲ್ಲಿ ಜನರ ವಿಶ್ವಾಸಗಳಿಸಿ ಶಾಸಕನಾಗಿದ್ದೇನೆ. ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ನನ್ನಲ್ಲಿ ಪರಿಹಾರ ಇದೆ ಎಂಬ ವಿಶ್ವಾಸ ನನಗಿದೆ ಎಂದು ಮುಕ್ತನುಡಿಯಾಡಿದರು.

ಸಾಮರಸ್ಯ, ಸೌಹಾರ್ದತೆಯ ಸಮಾಜ ನಿರ್ಮಾಣ ಮಾಡಲು ನಾವೆಲ್ಲರೂ ಕೈ ಜೋಡಿಸಿ ಕೆಲಸ ಮಾಡೋಣ, ಜನರ ಕಷ್ಟಗಳಿಗೆ ಸ್ಪಂದಿಸೋಣ. ನಾನು ತಪ್ಪು ಮಾಡುವ ಸಂದರ್ಭದಲ್ಲಿ ಟೀಕೆ ಮಾಡುವ ಬದಲು ತಿದ್ದುವಂತಹ ಕೆಲಸ ಮಾಡಿ ಎಂದು ಹೇಳಿದ ಪೊನ್ನಣ್ಣ ಪೊನ್ನಂಪೇಟೆ ನೂತನ ತಾಲೂಕಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಭರವಸೆಯಿತ್ತರು.

ಮುಂದಿನ ದಿನದಲ್ಲಿ ರಾಜ್ಯದ ಕಂದಾಯ ಮಂತ್ರಿಯನ್ನು ಕರೆಸುವ ಮೂಲಕ ಇಲ್ಲಿಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹಿಡಿಯುವ ಪ್ರಯತ್ನ ಮಾಡುತ್ತೇನೆ. ನಮಗೆ ರಾಜಕೀಯವಾಗಿ ವಿರೋಧಿಗಳು ಇರಲೇಬೇಕು. ಆದರೆ ಜವಾ ಬ್ದಾರಿಯುತ ವಿರೋಧಗಳಿರಬೇಕು. ವಿರೋಧ ಪಕ್ಷವೇ ಇಲ್ಲ ಎಂಬ ಬೇಜವಾಬ್ದಾರಿ ನಾನು ಒಪ್ಪುವುದಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳು ಕೆಲಸ ಮಾಡಬೇಕು. ಇಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ಮಾತ್ರ ಇವೆ. ಬಿಜೆಪಿ ವಿರೋಧ ಪಕ್ಷವಾಗಿ ಬೆಳೆಯಲಿ ಮಾಡುವ ವಿರೋಧ ನೈಜವಾಗಿರಲಿ, ಜವಾ ಬ್ದಾರಿಯುತವಾಗಿರಲಿ ನಮಗೆ ಕೆಲಸ ಮಾಡಲು ಉತ್ತಮ ದಾರಿಯನ್ನು ತೋರಿಸುವಂತಾಗಲಿ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊAಡರು.

ಹಿರಿಯ ನಾಗರಿಕರ ವೇದಿಕೆಯ ಮನೆಯಪಂಡ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ನಾಗರಿಕ ವೇದಿಕೆಯ ಅಧ್ಯಕ್ಷರಾದ ಚಿಮ್ಮಣಮಾಡ ವಾಸು ಉತ್ತಪ್ಪ ಸ್ವಾಗತಿಸಿದರು. ಉಪಾಧ್ಯಕ್ಷ ರಾದ ಚೊಟ್ಟೆಯಂಡಮಾಡ ವಿಶ್ವನಾಥ್ ತಾಲೂಕು ಕಚೇರಿಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ಮನವಿ ಪತ್ರ ಸಲ್ಲಿಸಿದರು. ವೇದಿಕೆಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ಸಿ.ಎಸ್.ಅರುಣ್ ಮಾಚಯ್ಯ, ಪೊನ್ನಂಪೇಟೆ ಛೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷರಾದ ಸಿ.ಕೆ. ಉಮೇಶ್ ಮಾತನಾಡಿದರು.

ವೇದಿಕೆಯ ಸದಸ್ಯರಾದ ಪ್ರಭಾಕರ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಾಗರಿಕ ವೇದಿಕೆಯ ಅಡ್ಡಂಡ ಅನಿತಾಕಾರ್ಯಪ್ಪ, ಮೂಕಳೇರ ಕುಶಾಲಪ್ಪ, ಆಲೀರ ಎ.ಎರ್ಮುಹಾಜಿ, ಎ.ಬಿ.ದೇವಯ್ಯ, ಮತ್ರಂಡ ಅಪ್ಪಚ್ಚು ಸೇರಿದಂತೆ ಗ್ರಾಮ ಪಂಚಾಯಿತಿಯ ಸದಸ್ಯರಾದ ಮೂಕಳೇರ ಸುಮಿತ ಗಣೇಶ್, ಅಣ್ಣೀರ ಹರೀಶ್, ಕೋಳೇರ ಭಾರತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ವೇಳೆ ಅಂಗನವಾಡಿ ಕಾರ್ಯಕರ್ತರ ಸಂಘದ ಪದಾ ಧಿಕಾರಿಗಳು, ಆಶಾ ಕಾರ್ಯಕರ್ತ ಪದಾಧಿಕಾರಿಗಳು ನೂತನ ಶಾಸಕರಿಗೆ ಸನ್ಮಾನಿಸಿ ಗೌರವಿಸಿದರು. ಸದಸ್ಯರಾದ ಆಶಾ ಪ್ರಕಾಶ್ ಪ್ರಾರ್ಥಿಸಿ, ವಂದಿಸಿದರು.

-ಹೆಚ್.ಕೆ.ಜಗದೀಶ್