ಮಡಿಕೇರಿ, ಜೂ.೧: ರಾಜಾಸೀಟ್ ರಸ್ತೆಯಿಂದ ಮುನೇಶ್ವರ ದೇವಸ್ಥಾನ ರಸ್ತೆಗೆ ಸಂಪರ್ಕ ಕಲ್ಪಿಸುವ ಗಾಂಧಿ ಮೈದಾನದ ಎದುರಿನ ದೊಡ್ಡ ಬಿಲ್ಡಿಂಗ್ ಪಕ್ಕದ ಮಣ್ಣು ರಸ್ತೆಯನ್ನು ದುರಸ್ತಿ ಮಾಡುವಂತೆ ನಗರಸಭೆಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನ ವಾಗದ ಹಿನ್ನೆಲೆಯಲ್ಲಿ ತಾ.೨ರಂದು (ಇಂದು) ನಗರಸಭೆ ವಿರುದ್ಧ ಪ್ರತಿಭಟನೆ ಮಾಡುವುದಾಗಿ ವೀರ ನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಹರೀಶ್ ಆಚಾರ್ಯ ತಿಳಿಸಿದ್ದಾರೆ.