ನಾಪೋಕ್ಲು, ಮೇ ೩೧: ಕೊಡವ ಜನಾಂಗದ ಸಂಸ್ಕೃತಿ ಮತ್ತು ಪರಂಪರೆಯನ್ನು ಇಂದಿನ ಮಕ್ಕಳಿಗೆ ತಿಳಿಸುವಂತಹ ಕಾರ್ಯ ಅವಶ್ಯಕ ವಾಗಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು. ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ನೆಲಜಿ ಫಾರ್ಮರ್ಸ್ ಡೆವಲಪ್ ಮೆಂಟ್ ಅಂಡ್ ರಿಕ್ರಿಯೇಶನ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಮೂರನೇ ವರ್ಷದ ರಾಜ್ಯಮಟ್ಟದ ಕೊಡವ ಕುಟುಂಬ ಕಪ್-“ತೆಂಗೆ ಬೊಡಿ ನಮ್ಮೆ”ಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೊಡವ ಸಂಸ್ಕೃತಿಯ ಭಾಗವಾದ ತೋಕ್‌ನಮ್ಮೆ ಇಂದು ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುತ್ತಿದೆ. ಜನಾಂಗದ ಮಂದಿ ಇದರಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ನಮ್ಮ ಮಕ್ಕಳಿಗೆ ಶಿಕ್ಷಣದ ಮಹತ್ವ ತಿಳಿಸಬೇಕು, ಹಿರಿಯರು ಕಾಪಾಡಿಕೊಂಡು ಬಂದ ತೋಟ, ಜಾಗಗಳ ರಕ್ಷಣೆಯೊಂದಿಗೆ ಶಿಕ್ಷಣಕ್ಕೂ ಆದ್ಯತೆ ನೀಡುವಂತಾಗ ಬೇಕು, ಆಚಾರ ವಿಚಾರಗಳ ರಕ್ಷಣೆ ಮಾಡಿ ಸಂಸ್ಕೃತಿ ಉಳಿಯುವಂತಾಗ ಬೇಕು ಎಂದರು.

ನಿವೃತ್ತ ಐಎಎಸ್ ಅಧಿಕಾರಿ ಮುರುವಂಡ ಅಯ್ಯಪ್ಪ ಮಾತನಾಡಿ, ಕೊಡವ ಸಂಸ್ಕೃತಿಯನ್ನು ಉಳಿಸುವ ಕೆಲಸ ಆಗಬೇಕು. ಕೊಡವ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ನಮ್ಮದಾಗಿದೆ ಎಂದರು. ಬೆಂಗಳೂರಿನ ಆರ್.ಟಿ.ಓ. ನಂದೇಟಿರ ಮೋಹನ್ ಸುಬ್ಬಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಮಚ್ಚುರ ರವೀಂದ್ರ ಮಾತನಾಡಿದರು.

ಇದಕ್ಕೂ ಮುನ್ನ ಎರಡನೇ ದಿನದ ಕಾರ್ಯಕ್ರಮವನ್ನು ತಾಮರ ಕೂರ್ಗ್ ರೆಸಾರ್ಟಿನ ಅಡ್ವೆöÊಸರ್ ಪಾಲೆಕಂಡ ಸಾಯಿ ಕರುಂಬಯ್ಯ ಹಾಗೂ ನಿವೃತ್ತ ಚೀಫ್ ಮ್ಯಾನೇಜರ್ ಅಪ್ಪಾರಂಡ ಸುಧೀರ್ ಅಯ್ಯಪ್ಪ ಉದ್ಘಾಟಿಸಿದರು. ತಾಮರ ಕೂರ್ಗ್ ಮ್ಯಾನೇಜರ್ ಕಲಾ

್ಯಟಂಡ ಗಿರೀಶ್ ಸುಬ್ಬಯ್ಯ, ವಿಜಯ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಬಾಚಿರ ಅಯ್ಯಪ್ಪ, ಕ್ಲಬ್‌ನ ಮಾಜಿ ಅಧ್ಯಕ್ಷ ಮಾಳೆಯಂಡ ಅಯ್ಯಪ್ಪ, ಚೇನಂಡ ಗಿರೀಶ್, ಚೇನಂಡ ಪೃಥ್ವಿ ಪಾಲ್ಗೊಂಡಿದ್ದರು.

ನೆಲಜಿ ಫಾರ್ಮರ್ಸ್ ಡೆವಲಪ್ ಮೆಂಟ್ ಅಂಡ್ ರಿಕ್ರಿಯೇಷನ್ ಅಧ್ಯಕ್ಷ ಮಂಡೀರ ನಂದ ನಂಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಮರುವಂಡ ಕೆ. ಅಯ್ಯಪ್ಪ, ಮುರುವಂಡ ದಿವ್ಯ, ಮಾತಂಡ ಕಮಲ ಪೂಣಚ್ಚ ಉಪಸ್ಥಿತರಿದ್ದರು.

ಚೀಯಕಪೂವಂಡ ಶ್ರೇಯ ನವೀನ್ ಪ್ರಾರ್ಥಿಸಿದರು. ಮಂಡೀರ ನಂದ ನಂಜಪ್ಪ ಸ್ವಾಗತಿಸಿ, ಮುಕ್ಕಾಟಿರ ವಿನಯ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಈ ಸಂದರ್ಭ ಉಪಾಧ್ಯಕ್ಷ ಕೈಬುಲಿರ ಎಸ್. ಉಮೇಶ್ ಸಹ ಕಾರ್ಯದರ್ಶಿ ಚೀಯಕಪೂವಂಡ ನವೀನ್ ನಾಚಪ್ಪ, ಮಾಳೆಯಂಡ ವಿಜಯ, ಮಾಳೆಯಂಡ ವಿಜು ಅಪ್ಪಚ್ಚು, ಅಪ್ಪುಮಣಿಯಂಡ ಕಿಶನ್ ಮೇದಪ್ಪ, ಮಾಳೆಯಂಡ ವಿಜು, ಬೊಡಿ ನಮ್ಮೆ ಸಂಚಾಲಕ ಮಾಳೆಯಂಡ ಅಪ್ಪಣ್ಣ, ಚೀಯಕಪೂವಂಡ ಅಪ್ಪಚ್ಚು ಉಪಸ್ಥಿತರಿದ್ದರು.

- ದುಗ್ಗಳ ಸದಾನಂದ