ಕೂಡಿಗೆ, ಮೇ ೩೧: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಿಂದ ಮುಖ್ಯ ನಾಲೆಯ ಮೂಲಕ ರೈತರಿಗೆ ಬೇಸಾಯ ಮಾಡಲು ಅನುಕೂಲವಾಗುವಂತೆ ಎರಡೂ ಬದಿಗಳಲ್ಲಿ ತೆಡೆಗೋಡೆಯ ಮಾದರಿಯಲ್ಲಿ ಕಲ್ಲಿನಿಂದ ಕಟ್ಟಲಾಗಿತ್ತು. ಆದರೆ ಇದುವರೆಗೂ ಮುಖ್ಯ ನಾಲೆಯ ಯಾವುದೇ ದುರಸ್ತಿ ಕಾರ್ಯ ನಡೆಯದೆ ಎರಡು ಬದಿಯ ಕಲ್ಲುಗಳು ನೀರಿನ ಸೆಳೆತಕ್ಕೆ ಕುಸಿತಗೊಂಡು ನಾಲೆಯ ನೀರಿನ ಹರಿಯುವಿಕೆ ಕಡಿಮೆಯಾಗಿದೆ. ಜೊತೆಯಲ್ಲಿ ಉಪ ಕಾಲುವೆಗಳ ದುರಸ್ತಿಯೂ ಆಗಿರುವುದಿಲ್ಲ. ಸಂಬAಧಿಸಿದ ನೀರಾವರಿ ಇಲಾಖೆಯವರು ಸ್ಥಳ ಪರಿಶೀಲಿಸಿ ತುರ್ತಾಗಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಅಚ್ಚುಕಟ್ಟು ವ್ಯಾಪ್ತಿಯ ರೈತರು ಒತ್ತಾಯಿಸಿದ್ದಾರೆ. ಕಳೆದ ೫೫ ವರ್ಷಗಳ ಹಿಂದೆ ಮುಖ್ಯ ನಾಲೆಯ ಕಾಮಗಾರಿ ಸಂದರ್ಭದಲ್ಲಿ ನಾಲೆ ಕೆಲಸಗಳು ನಡೆದಿದ್ದವು. ಆದರೆ ಇಷ್ಟು ವರ್ಷಗಳು ಕಳೆದರೂ ಹಾರಂಗಿ ಅಣೆಕಟ್ಟೆಯ ಮುಂಭಾಗದ ಮುಖ್ಯ ನಾಲೆಯ ದುರಸ್ತಿ ಕಾರ್ಯಕ್ಕೆ ಇದುವರೆಗೂ ಯಾವುದೇ ರೀತಿಯ ಅನುಮೋದನೆ ಸಿಕ್ಕದೆ ಕಾಮಗಾರಿಯು ನಡೆದಿಲ್ಲ. ಕಳೆದ ನಾಲ್ಕು ತಿಂಗಳುಗಳ ಹಿಂದೆ ನಡೆದ ಅಧಿವೇಶನದಲ್ಲಿ ನಾಲೆಗಳ ದುರಸ್ತಿಗೆ ಸಂಬAಧಿಸಿದAತೆ ಭಾರಿ ಚರ್ಚೆಗಳು ನಡೆದು ಅಚ್ಚುಕಟ್ಟು ಪ್ರದೇಶದ ರೈತರು ಆಗಿನ ನೀರಾವರಿ ಸಚಿವರಿಗೆ ನೀಡಿದ ಮನವಿ ಮೇರೆಗೆ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಲು ಸೂಚನೆ ನೀಡಲಾಗಿತ್ತು. ಅದರಂತೆ ಕಾವೇರಿ ನೀರಾವರಿ ನಿಗಮದ ಮೂಲಕ ಕಾಮಗಾರಿಗಳ ಕ್ರಿಯಾ ಯೋಜನೆ ಯಡಿಯಲ್ಲಿ ೫೦ ಕೋಟಿ ಹಣವನ್ನು ಕಾಯ್ದಿರಿಸಲಾಗಿದೆ. ನೀರಾವರಿ ನಿಗಮದ ಮೂಲಕ ಹಾರಂಗಿಯ ಮುಖ್ಯ ನಾಲೆ ಒಂದರಿAದ ಏಳನೇ ತೂಬಿನವರಗೆ ಎರಡೂ ಬದಿಗಳಲ್ಲಿ ದುರಸ್ತಿಗೆ ಸಂಬAಧಿಸಿದAತೆ ಟೆಂಡರ್ ಪ್ರಕ್ರಿಯೆ ನಡೆದು ಕಾಮಗಾರಿ ಆರಂಭವಾಗಬೇಕಿತ್ತು. ಆದರೆ ನೂತನ ಸರಕಾರದ ಮುಖ್ಯಮಂತ್ರಿ ಕಾಮಗಾರಿಗಳನ್ನು ತಡೆಹಿಡಿಯುವ ಯೋಜನೆ ರೂಪಿಸಿರುವುದು ಸರಿಯಾದ ಕ್ರಮವಲ್ಲ. ರೈತರಿಗೆ ಅತಿ ಮುಖ್ಯವಾಗಿ ಜಮೀನಿಗೆ ಸಮರ್ಪಕವಾಗಿ ನೀರು ಒದಗಿಸುವ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಮಡಿಕೇರಿ ಕ್ಷೇತ್ರದ ಶಾಸಕ ಮಂಥರ್‌ಗೌಡ ಮಧ್ಯಪ್ರವೇಶಿಸಿ ರೈತರಿಗೆ ಅನುಕೂಲವಾಗುವಂತೆ ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವಂತೆ ಅಚ್ಚುಕಟ್ಟು ಪ್ರದೇಶದ ರೈತರು ಒತ್ತಾಯಿಸಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ.