ಪೊನ್ನಂಪೇಟೆ, ಮೇ ೩೦: ಗೋಣಿಕೊಪ್ಪಲು ಕಾವೇರಿ ಕಾಲೇಜು ವತಿಯಿಂದ ೫ ಎ ಸೈಡ್ ಸೌತ್ ಝೋನ್ ಅಂತರ್ ಕಾಲೇಜು ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಕಾವೇರಿ ಕಾಲೇಜು ಪ್ರಾಂಶುಪಾಲ ಪ್ರೊ. ಎಂ.ಬಿ. ಕಾವೇರಪ್ಪ ಹಾಗೂ ಉಪ ಪ್ರಾಂಶುಪಾಲೆ ಡಾ. ಎ.ಎಸ್. ಪೂವಮ್ಮ ಟ್ರೋಫಿ ಅನಾವರಣಗೊಳಿಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.
ಈ ಸಂದರ್ಭ ಐಕÀÆ್ಯಎಸಿ ಸಂಚಾಲಕಿ ಪ್ರೊ. ಎಂ.ಎಸ್. ಭಾರತಿ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಡಾ. ನಯನ ತಮ್ಮಯ್ಯ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಲಹಾ ಸಮಿತಿ ಸಂಚಾಲಕ ಯು.ಟಿ. ಪೆಮ್ಮಯ್ಯ, ಕಚೇರಿ ಅಧೀಕ್ಷಕಿ ಟಿ.ಕೆ. ಲತಾ, ಕ್ಯಾಂಪಸ್ ಮ್ಯಾನೇಜರ್ ಮಿನ್ನಂಡ ಜೋಯಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಟಿ. ಸಂತೋಷ್ ಇದ್ದರು. ಕೇರಳ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ೨೬ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ.
ಫಲಿತಾಂಶ: ಪೊನ್ನಂಪೇಟೆ ಸರ್ಕಾರಿ ಪ.ಪೂ. ಕಾಲೇಜು ವಿರುದ್ಧ ಗೋಣಿಕೊಪ್ಪಲು ಕಾವೇರಿ ಪ.ಪೂ. ಕಾಲೇಜು ೪-೩ ಗೋಲಿನಿಂದ ಜಯ ಸಾಧಿಸಿತು. ಮಡಿಕೇರಿ ಎಫ್ಎಂಕೆಎAಸಿ ಕಾಲೇಜು (ಎ), ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿರುದ್ಧ ೨-೦ ಗೋಲುಗಳಿಂದ ಜಯಭೇರಿ ಬಾರಿಸಿತು. ಕಣ್ಣೂರು ಜಾಮಿಯಾ ಕಾಲೇಜನ್ನು ಗೋಣಿಕೊಪ್ಪಲು ಕಾವೇರಿ ಕಾಲೇಜು ಹಳೆ ವಿದ್ಯಾರ್ಥಿಗಳ ತಂಡ ೩-೦ ಗೋಲುಗಳಿಂದ ಸೋಲಿಸಿತು. ಮೂರ್ನಾಡು ಪ್ರಥಮ ದರ್ಜೆ ಕಾಲೇಜನ್ನು ಮಡಂತೆಯಾರ್ ಸೇಕ್ರೆಡ್ ಹಾರ್ಟ್ಸ್ ಕಾಲೇಜು (ಎ) ತಂಡ ೭-೬ ಗೋಲಿನ ಅಂತರದಿAದ ಮಣಿಸಿತು. ಮಡಂತೆಯಾರ್ ಸೇಕ್ರೆಡ್ ಹಾರ್ಟ್ಸ್ ಕಾಲೇಜು (ಬಿ) ಮಡಿಕೇರಿ ಎಫ್ಎಂಕೆಎAಸಿ ಕಾಲೇಜನ್ನು ೩-೨ ಗೋಲಿನಿಂದ ಸೋಲಿಸಿತು. ಗೋಣಿಕೊಪ್ಪಲು ಕಾವೇರಿ ಕಾಲೇಜು ಹಾಕಿ ಕಾವೇರಿ ತಂಡದ ವಿರುದ್ಧ ಮೈಕಾ ೧-೦ ಗೋಲಿನಿಂದ ಜಯ ಸಾಧಿಸಿತು.
- ಚನ್ನನಾಯಕ