ಚೆಟ್ಟಳ್ಳಿ: ‘ಕುಂದತ್ಬೊಟ್ಟ್ಲ್ ನೇಂದ ಕುದುರೆ ಪಾರಣಮಾನಿಲ್ ಅಳ್ಂಜ ಕುದುರೆ’ ಎಂಬ ನಾಲ್ನುಡಿಯಂತೆ ವಿಶೇಷ ಪೌರಾಣಿಕ ಹಿನ್ನೆಲೆಯ ಬೇರಳಿನಾಡಿನ ಪಾರಣ ನಮ್ಮೆ ಮೇ ೩೧ ಹಾಗು ಜೂ. ೧ ರಂದು ನಡೆಯುವ ಮೂಲಕ ಕೊಡಗಿನ ಕೊನೆಯ ಬೋಡ್ನಮ್ಮೆಗೆ ತೆರೆಬೀಳಲಿದೆ.
ಉತ್ಸವದ ಹಿನ್ನೆಲೆ : ಪುರಾತನ ಕಾಲದಲ್ಲಿ ಬೇರಳಿ ನಾಡಿನಲ್ಲಿದ್ದ ಭಸ್ಮಾಸುರ ಎಂಬ ರಾಕ್ಷಸ ಘೋರ ತಪಸ್ಸಿನ ಮೂಲಕ ಈಶ್ವರನನ್ನು ಒಲಿಸಿಕೊಂಡು ತಲೆಯ ಮೇಲೆ ಕೈ ಇಡುವ ಮೂಲಕ ಭಸ್ಮವಾಗುವ ವರವನ್ನು ಸಂಪಾದಿಸುತ್ತಾನೆ. ಇದರಿಂದ ಪಾರಾಗಲು ಈಶ್ವರ ವಿಷ್ಣುವನ್ನು ಪ್ರಾರ್ಥಿಸುತ್ತಾನೆ. ಪ್ರತ್ಯಕ್ಷನಾದ ವಿಷ್ಣು ಕೊಟ್ಟ ವರವನ್ನು ಹಿಂಪಡೆಯಲು ಸಾಧ್ಯವಿಲ್ಲ. ಭಸ್ಮಾಸುರನಿಂದಲೇ ಅವನ ಸಂಹಾರ ಮಾಡುವ ಬಗ್ಗೆ ಸಲಹೆ ನೀಡುತ್ತಾನೆ. ಮೋಹಿನಿ ವೇಷದಲ್ಲಿ ಬಂದು ನೃತ್ಯದ ಮೂಲಕ ಮೈಮರೆಸಿ ಭಸ್ಮಾಸುರನೇ ತನ್ನ ತಲೆಯ ಮೇಲೆಯೇ ಕೈಯಿಟ್ಟು ಸಂಹಾರವಾಗುತ್ತಾನೆ. ಅದರ ಪ್ರತೀಕವಾಗಿ ಕುದುರೆ ಆನೆ ಹೊರಡುವ ಜಾಗದಿಂದ ವಿವಿಧ ವೇಶದಾರಿಗಳೊಂದಿಗೆ ಬೇರಳ್ಳಿ ನಾಡಿನ ಪಾರಣಮಾನಿ ಎಂಬಲ್ಲಿ ಕುದುರೆ ಆನೆಯನ್ನು ಆಹುತಿ ನೀಡುತ್ತಾರೆÀಂಬ ಪ್ರತೀತಿ ಇದೆ. ಇಂದಿಗೂ ಪ್ರತೀ ವರ್ಷ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಿಸ ಲಾಗುತ್ತಿದೆ. ಬೇರಳಿನಾಡಿನ ದಟ್ಟಾರಣ್ಯದಲ್ಲಿ ವರ್ಷಕ್ಕೊಂದು ಬಾರಿ ಪುರಾತನ ಕಮ್ಮಟ್ಟಪ್ಪ ಎಂಬ ಈಶ್ವರನ ನೆಲೆಯಿದೆ. ಈ ಬೇರಳಿ ನಾಡಿನ ಜನತೆ ದೇಶದ ಯಾವುದೇ ಭಾಗದಲ್ಲಿದ್ದರೂ ತಮ್ಮ ಊರಿಗೆ ಹಿಂತಿರುಗಿ ಬಂದು ವಯಸ್ಸಿನ ಮಿತಿ ಇಲ್ಲದೆ ಪ್ರತೀ ವರ್ಷ ಉತ್ಸಾಹದಿಂದ ಪಾರಣನಮ್ಮೆಯಲ್ಲಿ ಭಾಗವಹಿಸುತ್ತಾರೆ.
ಮೇ ೨೬ ರ ಶನಿವಾರ ಮಧ್ಯಾಹ್ನ ೩ ಗಂಟೆಗೆ ನಾಡ್ ತಕ್ಕಮುಖ್ಯಸ್ಥರು ಊರಿನವರು ರುದ್ರಗುಪ್ಪೆಯ ಜೋಡು ಭಗವತಿ ದೇವಾಲಯದಲ್ಲಿ ಸೇರಿ ಅಂಬಲದಲ್ಲಿ ದೋಳ್ತೆಗೆದು ಪಾರಂಪರಿಕ ಪಾರಣನಮ್ಮೆಯ ಹಾಡನ್ನು ಹಾಡುವ ಮೂಲಕ ಹಬ್ಬ ಕಟ್ಟು ಬೀಳಲಾಯಿತು. ಇದನ್ನು ನಮ್ಮೆ ಕುರಿಪೋ ಎನ್ನುವರು. ಹಬ್ಬಕಟ್ಟು ಬಿದ್ದ ದಿನದಿಂದ ಊರಿನ ಕಂಡAಗಾಲ, ಪೊದಕೇರಿ, ಮರೋಡಿ, ಬಾಡಗ ಗ್ರಾಮದ ಅಂಬಲದಲ್ಲಿ ಆಯಾಯ ಊರಿನವರು ಪಾರಂಪರಿಕ ದೋಳ್ ಹಾಡನ್ನು ಹಾಡುವರು. ಮೇ ೩೦ (ಇಂದು) ರಂದು ಸಂಜೆ ಅಂಬಲದಲ್ಲಿ ಸೇರಿದ ಊರಿನವರು ದೇವಾಲಯಕ್ಕೆ ತೆರಳಲು ಆಯ್ಕೆಮಾಡಿದ ವ್ಯಕ್ತಿಗಳು ದೇವರ ಭಂಡಾರ, ಫಲತಾಂಬೂಲ ವನ್ನು ತರುತ್ತಾರೆ. ಪಟ್ಟ, ಮಾರಾಯ, ಮುಕ್ಕಾಟಿ ಊರಿನವರು ಅಲ್ಲಿ ಸೇರಿ ದೇವತಾ ಕಾರ್ಯವನ್ನು ಕೈಗೊಳ್ಳುತ್ತಾರೆ.
ಮೇ.೩೧ರ ಬುಧವಾರ ಕರ್ಮರಟ್ಟಪ್ಪ ಈಶ್ವರನ ನೆಲೆಯಲ್ಲಿ ಪೂಜೆ ಸಲ್ಲಿಸಿ ಅರ್ಚಕರು ಪಾರಾಣೆ ಉತ್ಸವದ ಹಾಡನ್ನು ಹಾಡಿ ಹಬ್ಬವನ್ನು ನಾಡಿಗೆ ಕರೆ ತರುತ್ತಾರೆನ್ನುತ್ತಾರೆ. ಅಂದು ಸಂಜೆ ಉತ್ಸವದ ಕಟ್ಟುಪಾಡಿನಂತೆ ಚಿಕ್ಕಮ್ಮ ಜೋಗಿ, ಬೈರಮ್ಮ ಜೋಗಿ, ಹೊಟ್ಟೆಯಮಾರಾ, ಕೋಡಂಗಿದಾಸ, ವಡ್ಡ, ಚೂಳೆ, ಪಾಲೆಕರಂಬ ವೆಂಬ ದೇವರ ೭ ವೇಶಧಾರಿಗಳು ತಕ್ಕರಮನೆಯಿಂದ ಹೊರಟು ನಾಡಿನ ಐನ್ಮನೆಗೂ, ಊರಿನ ಮನೆಮನೆಗೂ ತಂಡೋಪತAಡವಾಗಿ ತೆರಳಿ ಪಾರಂಪರಿಕ ಹಾಡಿಗೆ ಹೆಜ್ಜೆಹಾಕಿ ಕುಣಿದು ಉತ್ಸವದ ಕೊನೆಯಲ್ಲಿ ತಕ್ಕರ ಮನೆಯಲ್ಲಿ ವೇಶ ಕಳಚುವರು. ಬಾಡಗ, ಕಂಡAಗಾಲದಿAದ ಶೃಂಗರಿಸಿದ ೩ ಬಿದಿರ ಕುದುರೆ ಮರೋಡಿರ ಪಾರಣಮಾನಿ (ಗದ್ದೆ)ಗೆ ಬಂದು ಅಲಂಕರಿತ ಕೃತಕ ಕುದುರೆ ಆನೆಯನ್ನು ತಯಾರಿಸಿ ವಿಶೇಷ ವೇಷಧಾರಿಗಳನ್ನು ತಕ್ಕರ ಮನೆಯಲ್ಲಿ ಡೋಳು ಕೊಟ್ಟಿಗೆ ಹೆಜ್ಜೆ ಹಾಕಿ ಕುಣಿವರು. ಜೋಡು ಭಗವತಿಯ ಕೊಡೆಕಡತಲೆ ಆಯಾಯ ಊರಿನ ಆನೆ ಕುದುರೆ ಮರೋಡಿ ಅಂಬಲದಲ್ಲಿ ಒಟ್ಟು ಸೇರಿ ದೇವರನ್ನು ಪ್ರಾರ್ಥಿಸುತ್ತಾ ಪ್ರದಕ್ಷಿಣೆ ಹಾಕಿ ಕುದುರೆ ಆನೆಗಳು ಓಡುವ ಮೂಲಕ ಶಕ್ತಿ ಪ್ರದರ್ಶಿಸುವುದು, ವೇಷಧಾರಿಗಳು ಊರಿನವರೆಲ್ಲ ಸೇರಿ ಕುಣಿದು ಸಂಭ್ರಮಿಸುವರು. ಅರ್ಚಕರು ದೇವರ ಭಸ್ಮವನ್ನು ಎಲ್ಲೆಡೆ ಎಸೆಯುವ ಮೂಲಕ ಕಂಡAಗಾಲದ ಕುದುರೆ ಬೇರೆಡೆ ಸಂಹರಿಸಿದರೆ ಇತರೆ ಆನೆ ಕುದುರೆಯ ಪ್ರತಿಕೃತಿಯನ್ನು ಪಾರಣಮಾನಿ (ಗದ್ದೆ)ಯಲ್ಲಿ ಸಂಹರಿಸುವ ಮೂಲಕ ಉತ್ಸವಕ್ಕೆ ವರ್ಣರಂಜಿತ ತೆರೆ ಬೀಳಲಿದೆ ಎನ್ನುತ್ತಾರೆ ಊರಿನ ಹಿರಿಯರಾದ ಮುಲ್ಲೆಂಗಡ ಸುರೇಶ್ ಭೀಮಯ್ಯ.
ಕೊಡಗಿನ ನೆಲೆಯಲ್ಲಿ ಮುಂದಿನ ಬೋಡ್ನಮ್ಮೆ ನೋಡಬೇಕೆಂದರೆ ಮುಂಬರುವ ಕಾವೇರಿ ಸಂಕ್ರಮಣದ ಮಾರನೆಯ ದಿನ ನಡೆಯುವ ಕೊಡಗಿನ ಮೊದಲ ಕುಂದತ್ ಬೊಟ್ಟ್ ಬೋಡ್ ನಮ್ಮೆಗೆ ಕಾಯಬೇಕಿದೆ.
-ಪುತ್ತರಿರ ಕರುಣ್ಕಾಳಯ್ಯ,
ಚೆಟ್ಟಳ್ಳಿ