ಮಡಿಕೇರಿ, ಮೇ ೨೯: ಶುಂಠಿ ಬೆಳೆ ವ್ಯವಹಾರಕ್ಕೆ ಸಂಬAಧಿಸಿದAತೆ ವಾಗ್ವಾದ ವಿಕೋಪಕ್ಕೆ ತಿರುಗಿ ಎರಡು ತಂಡಗಳ ನಡುವೆ ಮಾರಾಮಾರಿ ನಡೆದ ಘಟನೆ ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯ ಅಭ್ಯತ್ಮಂಗಲ ಗ್ರಾಮದ ಒಂಟಿಯAಗಡಿ ಜಂಕ್ಷನ್ ಬಳಿ ನಡೆದಿದೆ.
ಹಾಸನ ಹಾಗೂ ಕೊಂಡAಗೇರಿಯ ವ್ಯಾಪಾರಿಗಳ ನಡುವೆ ವ್ಯವಹಾರದ ವಿಚಾರದಲ್ಲಿ ಜಗಳ ಆರಂಭವಾಗಿ ಪರಸ್ಪರ ಹಲ್ಲೆ ನಡೆದು ವ್ಯಾಪಾರಿಯೊಬ್ಬರ ಕಾರಿಗೆ ಬೆಂಕಿ ಹಚ್ಚುವ ಮಟ್ಟಕ್ಕೆ ತಲುಪಿದೆ. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಸಂಬAಧ ಯಾವುದೇ ಪ್ರಕರಣ ದಾಖಲಾಗಿಲ್ಲ.