ವೀರಾಜಪೇಟೆ, ಮೇ ೨೯ : ಸಮೀಪದ ಕದನೂರು ಗ್ರಾಮದ ಶ್ರೀ ಭಗವತಿ ದೇವಾಲಯದ ಪ್ರತಿಷ್ಠಾಪನಾ ಅಷ್ಟಮಂಗಲ ಮಹೋತ್ಸವ ಜೂನ್ ೧ರಿಂದ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಅಮ್ಮುಣಿಚಂಡ ಎನ್.ರವಿ ಉತ್ತಪ್ಪ ತಿಳಿಸಿದ್ದಾರೆ. ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಜೂನ್ ೧ರಂದು ಸಂಜೆ ವಾಸ್ತುಹೋಮ, ವಾಸ್ತುಬಲಿ ಹಾಗೂ ವಾಸ್ತು ಕಲಶಾ ಪೂಜೆಗಳು ನಡೆಯಲಿವೆ. ಜೂನ್ ೨ರಂದು ಬೆಳಿಗ್ಗೆ ೬ ಗಂಟೆಗೆ ಗಣಹೋಮ, ಅನುಜ್ಞಾ ಕಲಶ ಪೂಜೆ, ಅನುಜ್ಞಾ ಕ¼ಶಾಭಿಷೇಕ, ಜೀವಕಲಶ ಬಿಂಬಶುದ್ಧಿ ಕಲಶ ಪೂಜೆ, ಕಲಾವೃದ್ಧಿ ಹೋಮ, ಕಲಾಹೋಮ, ಮಂಡಲ ಪೂಜೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.