ಚೆಟ್ಟಳ್ಳಿ, ಮೇ ೨೮: ಮಡಿಕೇರಿ-ಚೆಟ್ಟಳ್ಳಿ ಮಾರ್ಗದ ಮಧ್ಯೆ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಜಿಲ್ಲಾಧಿಕಾರಿ ಆದೇಶದ ಮೇರೆಗೆ ತಾ. ೨೯ರ ಸೋಮವಾರದಿಂದ ರಸ್ತೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆ ವಾಹನಗಳು ಮಡಿಕೇರಿ- ಸುಂಟಿಕೊಪ್ಪ - ಚೆಟ್ಟಳ್ಳಿ ಮಾರ್ಗವಾಗಿ ತೆರಳುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.