ನಾಪೋಕ್ಲು, ಮೇ ೨೮: ಸಮೀಪದ ಹೊದವಾಡ ಗ್ರಾಮದ ಶ್ರೀ ಭಗವತಿ ಅಮ್ಮೆರಪ್ಪ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನಾ ಅಷ್ಟಮಂಗಲ ಮಹೋತ್ಸವ ತಾ. ೩೦ ರಿಂದ ಜೂನ್ ೧ ರವರೆಗೆ ನಡೆಯಲಿದೆ ಎಂದು ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಆಚೇಯಡ ಅರುಣ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ತಾ. ೩೦ರಂದು ಸಂಜೆ ದೇವಾಲಯದಲ್ಲಿ ವಾಸ್ತು ಹೋಮ,ವಾಸ್ತು ಬಲಿ ಹಾಗೂ ವಾಸ್ತು ಕಲಶಾ ಪೂಜೆಗಳು ಜರುಗಲಿವೆ. ಮೇ ೩೧ರಂದು ಬೆಳಿಗ್ಗೆ ಗಣ ಹೋಮ, ಅನುಜ್ಞಾ ಕಲಶ ಪೂಜೆ, ಅನುಜ್ಞಾ ಕಳಸಾಭಿಷೇಕ, ಜೀವ ಕಲಶ ಹಾಗೂ ಬಿಂಬಶುದ್ಧಿ ಕಲಶ ಪೂಜೆ, ಸಂಜೆ ೬.೩೦ ಕ್ಕೆ ಆದಿವಾಸ ಹೋಮ ಹಾಗೂ ಮಂಡಲ ಪೂಜೆಗಳು ನಡೆಯಲಿವೆ. ಜೂನ್ ಒಂದರAದು ಬೆಳಿಗ್ಗೆ ಆರು ಗಂಟೆಗೆ ಗಣ ಹೋಮ, ಬ್ರಹ್ಮ ಕಲಶ ಪೂಜೆ ಬೆಳಿಗ್ಗೆ ೭.೦೪ ರಿಂದ ೯.೧೬ ರವರೆಗೆ ಬಿಂಬ ಪ್ರತಿಷ್ಠಾಪನೆ ನಡೆಯಲಿದೆ ಆ ಬಳಿಕ ನಿದ್ರಾ ಕಲಶ ಅಭಿಷೇಕ, ಬ್ರಹ್ಮ ಕಲಶ ಅಭಿಷೇಕ, ಮಹಾಪೂಜೆಗಳು ಜರುಗಲಿವೆ. ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಈ ದೇವಾಲಯವು ಸುಮಾರು ೬೦೦ ವರ್ಷಗಳ ಇತಿಹಾಸವನ್ನು ಹೊಂದಿದ್ದು ರಾಜರ ಕಾಲದಲ್ಲಿ ನಿರ್ಮಾಣವಾಗಿದೆ. ದೇವಾಲಯದ ಜೀರ್ಣೋದ್ಧಾರಕ್ಕಾಗಿ ಗ್ರಾಮಸ್ಥರು ಹಾಗೂ ದಾನಿಗಳು ಧನಸಹಾಯವನ್ನು ನೀಡಿದ್ದಾರೆ. ದೇವಾಲಯದ ಜೀರ್ಣೋದ್ಧಾರದ ಜೊತೆಗೆ ಗಣಪತಿ ಗುಡಿ ಹಾಗೂ ಸುಬ್ರಮಣ್ಯ ಗುಡಿಗಳನ್ನು ನಿರ್ಮಿಸಲಾಗಿದೆ. ಕೇರಳದ ಪಾಲೆಘಾಟ್‌ನ ಶ್ರೀ ನಾರಾಯಣ ತಂತ್ರಿ ಧಾರ್ಮಿಕ ಕಾರ್ಯ ನೆರವೇರಿಸಲಿದ್ದಾರೆ ಎಂದರು.

ದೇವತಕ್ಕರಾದ ನಾಟೋಳಂಡ ಗಣಪತಿ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪಲ್ಯಂಡಿ ಎ. ಡಿ, ಊರಿನ ಹಿರಿಯರಾದ ಮಂಡೇಯಡÀ ಬೆಳ್ಳಿಯಪ್ಪ, ಕಿಕ್ಕೇರಿಯಂಡ ನಂಜುAಡ, ಬಲ್ಲಂಡ ಮುತ್ತಣ್ಣ, ಅಚೇಯಡ ಗಗನ್, ಚೌರಿರ ಪ್ರಕಾಶ್, ಬಲ್ಲಂಡ ಮನು, ಚೌರಿರ ಶರತ್, ಅಯ್ಯಪ್ಪ, ಬಲ್ಲಂಡ ಅಶ್ವಥ್, ದಿಲೀಪ್, ಬಿ. ಡಿ ರಾಜೇಶ್ , ಬಿ. ಡಿ ದಿನೇಶ್ ಜೀರ್ಣೋದ್ಧಾರ ಸಮಿತಿ ಸದಸ್ಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.