ಕೂಡಿಗೆ, ಮೇ ೨೮: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹದವಾದ ಮಳೆ ಬಿದ್ದಿರುವ ಹಿನ್ನೆಲೆಯಲ್ಲಿ ಮಳೆ ಆಧಾರಿತ ಬೆಳೆಯಾದ ಮೆಕ್ಕೆಜೋಳವನ್ನು ಬಿತ್ತನೆ ಮಾಡಲು ತಾಲೂಕು ವ್ಯಾಪ್ತಿಯ ರೈತರು ಈಗಾಗಲೇ ಭೂಮಿಯನ್ನು ಸಿದ್ಧತೆ ಮಾಡಿಕೊಂಡು ಬಿತ್ತನೆಗೆ ಸಿದ್ದರಾಗಿದ್ದಾರೆ. ಈ ಎಲ್ಲಾ ರೈತರಿಗೆ ಕೃಷಿ ಇಲಾಖೆಯ ವತಿಯಿಂದ ಪರಿಷ್ಕೃತಗೊಂಡಿರುವ ಬಿತ್ತನೆ ಜೋಳದ ಬೀಜಗಳು ಸಹಾಯಧನ ದರದಲ್ಲಿ ದೊರೆಯಲ್ಲಿವೆ, ಇದರ ಸದುಪಯೋಗವನ್ನು ಬಳಕೆ ಮಾಡಿಕೊಳ್ಳಬೇಕೆಂದು ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಯಾದವ್ ಬಾಬು ತಿಳಿಸಿದ್ದಾರೆ.

ಈಗಾಗಲೇ ಇಲಾಖೆಯ ವತಿಯಿಂದ ಆಯಾ ತಾಲೂಕು, ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಜೋಳದ ಹೈಬ್ರೀಡ್ ತಳಿಗಳಾದ ಸಿ, ಪಿ, ಸೀಡ್ಸ್, ಗಂಗಾ ಕಾವೇರಿ ಎಂಬ ತಳಿಗಳು ದಾಸ್ತಾನು ಇದ್ದು ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಲಭ್ಯವಿರುತ್ತವೆ.

ಕೃಷಿ ಇಲಾಖೆಯ ನಿಯಮಾನುಸಾರ ಸಾಮಾನ್ಯ ವರ್ಗದವರಿಗೆ ಶೇ. ೫೦ರಷ್ಟು ರಿಯಾಯಿತಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದವರಿಗೆ ಶೇ.೭೫ರಷ್ಟು ರಿಯಾಯಿತಿ ದರದಲ್ಲಿ ದೊರಕಲಿದೆ. ತಾಲೂಕು ವ್ಯಾಪ್ತಿಯ ರೈತರು ಸಂಬAಧಿಸಿದ ಜಮೀನಿನ ದಾಖಲೆ, ಮತ್ತು ಆಧಾರ ಕಾರ್ಡ್ನ ಜೆರಾಕ್ಸ್ ನೀಡಿ, ರಿಯಾಯಿತಿ ದರದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ ಅಲ್ಲದೆ ಈ ವ್ಯಾಪ್ತಿಯ ರೈತರ ಜಮೀನಿನ ಮಣ್ಣಿನ ಅನುಗುಣವಾಗಿ ಬೇಡಿಕೆಯ ಅನುಸಾರವಾಗಿ ರಸಗೊಬ್ಬರಗಳ ದಾಸ್ತಾನು ಸಹ ಅಯಾ ಗ್ರಾಮಗಳ ಸಹಕಾರ ಸಂಘಗಳಲ್ಲಿ ಇದೆ, ರೈತರು ಮುಂದಿನ ದಿನಗಳಲ್ಲಿ ಭತ್ತದ ಬೇಸಾಯಕ್ಕೆ ಸಿದ್ಧತೆ ಮಾಡಿಕೊಳ್ಳಲು ಮುನ್ನ ತಮ್ಮ ಜಮೀನಿನ ಮಣ್ಣು ಪರೀಕ್ಷೆಯನ್ನು ಮಾಡಿಕೊಳ್ಳುವಂತೆ ಮತ್ತು ಸಾವಯವ ಗೊಬ್ಬರದ ಬಳಕೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಯಾದವ್ ಬಾಬು ಅವರು ತಿಳಿಸಿದ್ದಾರೆ.