.

ಸುಂಟಿಕೊಪ್ಪ, ಮೇ ೨೮: ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಇಲ್ಲಿನ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ಆಯೋಜನೆಗೊಂಡಿದ್ದ ೨೫ನೇ ವರ್ಷದ ಡಿ.ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಪಂದ್ಯಾವಳಿಯಲ್ಲಿ ಅಮಿಗೋಸ್ ಎಫ್.ಸಿ ಮಲಪುರಂ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು. ಸುಂಟಿಕೊಪ್ಪದ ಮಿಡ್‌ಸಿಟಿ ಎಫ್.ಸಿ. ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಫೈನಲ್ ಪಂದ್ಯಾವಳಿಯನ್ನು ಮೈಸೂರು ಮಹಾರಾಜ ಯದುವೀರ್ ಸುಂಟಿಕೊಪ್ಪ, ಮೇ ೨೮: ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಇಲ್ಲಿನ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ಆಯೋಜನೆಗೊಂಡಿದ್ದ ೨೫ನೇ ವರ್ಷದ ಡಿ.ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಪಂದ್ಯಾವಳಿಯಲ್ಲಿ ಅಮಿಗೋಸ್ ಎಫ್.ಸಿ ಮಲಪುರಂ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು. ಸುಂಟಿಕೊಪ್ಪದ ಮಿಡ್‌ಸಿಟಿ ಎಫ್.ಸಿ. ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಫೈನಲ್ ಪಂದ್ಯಾವಳಿಯನ್ನು ಮೈಸೂರು ಮಹಾರಾಜ ಯದುವೀರ್ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ, ಕೇಕೆ ಕ್ರೀಡಾಪಟುಗಳಿಗೆ ಉತ್ಸಾಹ ತುಂಬಿತು. ಬಿರುಸಿನ ಆಟವನ್ನು ಕ್ರೀಡಾಪಟುಗಳು ಪ್ರದರ್ಶಿಸಿದರು.

ಪಂದ್ಯಾಟದ ಮೊದಲಾರ್ಧದ ೨೫ನೇ ನಿಮಿಷದಲ್ಲಿ ಮಲಪುರಂ ತಂಡದ ಮುನ್ನಡೆ ಆಟಗಾರ ಅಂದಾಸ್ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಮೊದಲ ಗೋಲು ಗಳಿಸಿ ತಂಡಕ್ಕೆ ನೆರವಾದರು. ದ್ವಿತೀಯಾರ್ಧದ ಮಿಡ್‌ಸಿಟಿ ತಂಡದ ಆಟಗಾರ ತನ್ವೀರ್ ೧೦ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಸಮಬಲ ಸಾಧಿಸಲು ಕಾರಣರಾದರು. ಉಳಿದ ಸಮಯದಲ್ಲಿ ಎರಡು ತಂಡಗಳಿಗೂ ಅವಕಾಶ ದೊರೆತರೂ ಗೋಲುಗಳಿಸುವಲ್ಲಿ ಉಭಯ ತಂಡಗಳು ವಿಫಲಗೊಂಡ ಪರಿಣಾಮ ಟ್ರೆöÊಬ್ರೇಕರ್‌ನ ಮೊರೆ ಹೋಗಲಾಯಿತು.೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಇದರಲ್ಲಿ ೫-೧ ಗೋಲುಗಳ ಅಂತರದಲ್ಲಿ ಅಮಿಗೋಸ್ ಎಫ್.ಸಿ ಮಲಪುರಂ ತಂಡವು ಗೆಲುವು ಸಾಧಿಸಿ ಡಿ.ಶಿವಪ್ಪ ಸ್ಮಾರಕ ಗೋಲ್ಡ್ಕಪ್‌ನೊಂದಿಗೆ ರೂ. ೧ ಲಕ್ಷ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನ ಪಡೆದ ಮಿಡ್‌ಸಿಟಿ ತಂಡಕ್ಕೆ ರೂ. ೫೦ ಸಾವಿರ ನಗದು ಹಾಗೂ ಟ್ರೋಫಿ ಬಹುಮಾನವಾಗಿ ನೀಡಲಾಯಿತು.

ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಒಡೆಯರ್, ಚಿತ್ರ ನಟಿ ಶುಭ್ರ ಅಯ್ಯಪ್ಪ, ಮಾಜಿ ಶಾಸಕ ಕೆ.ಎಂ.ಇಬ್ರಾಹಿA, ಕಾಫಿ ಬೆಳೆಗಾರÀ ಆನಂದ್ ಬಸಪ್ಪ, ಉದ್ಯಮಿ ಹರಪ್ಪಳ್ಳಿ ರವೀಂದ್ರ, ಹಿರಿಯ ವಕೀಲ ಚಂದ್ರಮೌಳಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಜಿ.ಪಂ. ಮಾಜಿ ಸದಸ್ಯ ಪಿ.ಎಂ.ಲತೀಫ್, ಜಿಲ್ಲಾಡಳಿತ ಕಾನೂನು ಸಲಹೆಗಾರ ಎ. ಲೋಕೇಶ್ ಕುಮಾರ್, ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ, ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಬ್ಲೂಬಾಯ್ಸ್ ಯೂತ್ ಕ್ಲಬ್ ಸ್ಥಾಪಕ ಅಧ್ಯಕ್ಷ ಜರ್ಮಿ ಡಿಸೋಜ, ಕಾಫಿ ಬೆಳೆಗಾರರಾದ ಸಂಜಯ್ ಬಸಪ್ಪ ಇತರರು ಹಾಜರಿದ್ದರು.